ಮಂಗಳೂರು,ಆಗಸ್ಟ್.06:ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಇವರ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಶೇಕಡಾ 50 ಮುಂಗಡ ರೂ.22,10,000 ಗಳನ್ನು ಒಟ್ಟು 18 ಕಾಮಗಾರಿಗಳ ಅನುಷ್ಠಾನಕ್ಕಾಗಿ ಕಾರ್ಯ ನಿರ್ವಾಹಕ ಇಂಜಿನಿಯರ್,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ,ಮಂಗಳೂರು ಇವರಿಗೆ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿರುತ್ತಾರೆ.
ಕಾಮಗಾರಿಗಳ ವಿವರ:
ಬಂಟ್ವಾಳ,ಪುದು ಗ್ರಾಮದ ಮಾರಿಪಳ್ಳ ಬಸ್ ನಿಲ್ದಾಣದಿಂದ ಅಂಗನವಾಡಿ ರಸ್ತೆ ಕಾಂಕ್ರೀಟೀಕರಣಕ್ಕೆ ರೂ.1.60 ಲಕ್ಷ,
ಮಂಗಳೂರಿನ ಮುನ್ನೂರು ಗ್ರಾಮದ ದೆಕ್ಕಾಡುನಿಂದ ಕುತ್ತಾರುಗುತ್ತು ರಸ್ತೆ ಕಾಂಕ್ರೀಟೀಕರಣಕ್ಕೆ ರೂ.1.50ಲಕ್ಷ,
ಮಂಗಳೂರು ತಾಲೂಕಿನ ಅಡ್ಯಾರ್ ಪಕ್ಷಿಕೃಷ್ಣ ದೇವಸ್ಥಾನ ರಸ್ತೆ ಅಭಿವೃದ್ಧಿಗೆ ರೂ.1.00 ಲಕ್ಷ,
ಕಂದಾವರದ ಆದ್ಯಪಾಡಿಯ ಬಂಟಸ್ಥಾನದಿಂದ ಕೋರ್ದಬ್ಬು ಕೋಟ್ಯದ ತನಕ ರಸ್ತೆ ಅಭಿವೃದ್ಧಿಗೆ ರೂ.1.00 ಲಕ್ಷ
ಮಂಗಳೂರು ತಾಲೂಕಿನ ಸೂರಿಂಜೆ ಪುಚ್ಚಾಡಿ ರಸ್ತೆ ಅಭಿವೃದ್ಧಿಗೆ ರೂ.2.50 ಲಕ್ಷ,
ಬೆಳ್ತಂಗಡಿ ಕಳಿಯ ಗ್ರಾಮದ ಕೊರಿಂಜ ಶಾಲಾ ಆವರಣ ಗೋಡೆ ರಚನೆಗೆ ರೂ.0.50 ಲಕ್ಷ,
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಕೊಡಿಂಗೇರಿ ಎಂಬಲ್ಲಿ ಕಾಲು ಸಂಕ ರಚನೆ ರೂ.1.50 ಲಕ್ಷ,
ಬೆಳ್ತಂಗಡಿ ಓಡಿಲ್ನಾಳ ಗ್ರಾಮದ ಕಟ್ಟದಬೈಲು ಪ್ರಾಥಮಿಕ ಶಾಲೆ ಆವರಣ ಗೋಡೆ ರಚನೆಗೆ ರೂ.1.00ಲಕ್ಷ,
ಕೊಯ್ಯೂರು ಗ್ರಾಮದ ಪ್ರಾಥಮಿಕ ಶಾಲೆ ಅದೂರ್ ಪೆರಾಲ್ ಇದರ ಆವರಣ ಗೋಡೆ ನಿರ್ಮಾಣಕ್ಕೆ 0.50 ಲಕ್ಷ,
ಕಣಿಯೂರು ಗ್ರಾಮದ ಪದ್ಮುಂಜ ಸರಕಾರಿ ಪ್ರೌಢಶಾಲಾ ಸಭಾಭವನದ ಕಾಮಗಾರಿಗೆ ರೂ.2 ಲಕ್ಷ,
ಹೊಸಂಗಡಿ ಗ್ರಾಮದ ಕುರ್ಲೊಟ್ಟು ಪದೋಳಿ ರಸ್ತೆ ಅಭಿವೃದ್ಧಿಗೆ ರೂ.1.25 ಲಕ್ಷ,
ನೆರಿಯಾ ಗ್ರಾಮದ ಅಣಿಯೂರು ಪರ್ಪಳ ರಸ್ತೆ ಅಭಿವೃದ್ಧಿಗೆ ರೂ.1.00 ಲಕ್ಷ,
ಬಂದಾರು ಗ್ರಾಮದ ಸುಣ್ಣಾನ ಅಂಗನವಾಡಿ ಕೊಠಡಿ ರಚನೆಗೆ ರೂ.0.50ಲಕ್ಷ,
ಕುವೆಟ್ಟು ಗ್ರಾಮದ ಗುರುವಾಯನಕೆರೆ ರುದ್ರಭೂಮಿ ರಚನೆ ಕಾಮಗಾರಿಗೆ ರೂ.0.75ಲಕ್ಷ,
ಬಂಟ್ವಾಳ ತಾಲೂಕುಗೋಳ್ತಮಜಲು ಕಲ್ಲಡ್ಕ ಪೇಟೆಯಲ್ಲಿ ಬಸ್ಸು ತಂಗುದಾಣ ನಿರ್ಮಾಣಕ್ಕೆ 2.50ಲಕ್ಷ,
ಬಾಳ್ತಿಲ ಗ್ರಾಮದ ಕುರುಮಾನ್ ಎಂಬಲ್ಲಿ ಶ್ರೀಅನ್ನ ಪಂಜುರ್ಲಿ ದೈವಸ್ಥಾನದ ತಡೆಗೋಡೆ ರಚನೆಗೆ 1.00 ಲಕ್ಷ,
ಗೋಳ್ತಮಜಲು ಗ್ರಾಮದ ದೇವಿನಗರ ರಸ್ತೆ ಅಭಿವೃದ್ಧಿಗೆ ರೂ.0.50 ಲಕ್ಷ, ಬಂಟ್ವಾಳತಾಲೂಕು ಕನ್ಯಾನ ಗ್ರಾಮದ ಮಲರಾಯ ದೈವಸ್ಥಾನಕ್ಕೆ ಹೋಗುವ ರಸ್ತೆ ಡಾಮರೀಕರಣಕ್ಕೆ ರೂ.1.50ಲಕ್ಷ ಹೀಗೆ ಒಟ್ಟು 22.10 ಲಕ್ಷ ಗಳನ್ನು ಮಂಜೂರು ಮಾಡಿರುತ್ತಾರೆಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.