ಮಂಗಳೂರು,ಅಕ್ಟೋಬರ್.02: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಗ್ರಾಮಗಳ ಸಮಗ್ರ ಅಭಿವೃದ್ದಿಗೆ ರಾಜ್ಯದಿಂದ 50 ಕೋಟಿ ರೂ.ಗಳ ಅನುದಾನ ತರಲು ಯತ್ನಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ ಕೃಷ್ಣ ಪಾಲೆಮಾರ್ ಹೇಳಿದರು.ಮಾದರಿ ಗ್ರಾಮ ದೆಡೆಗೆ ನರಿಂ ಗಾನ ನಡಿಗೆ' ಸ್ವಚ್ಛ ತಾ ಜಾ ಗೃತಿ ಜಾಥಾ ಹಾಗೂ ಸ್ವಚ್ಛ ಗ್ರಾಮ ಘೋಷಣೆ ಯೊಂದಿಗೆ ಮಹಾತ್ಮ ಗಾಂಧಿ ಜ ಯಂತಿ ಆಚ ರಣೆ ಸಭಾ ಕಾರ್ಯ ಕ್ರಮ ವನ್ನು ಉದ್ಘಾ ಟಿಸಿದ ಉಸ್ತು ವಾರಿ ಸಚಿವರು, ಬಯಲು ಶೌಚಾಲಯ ಮುಕ್ತ, ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಿತ ಗ್ರಾಮವಾಗಿ ದೇಶದ ಗಮನವನ್ನು ಸೆಳೆದಿದೆ ಎಂದರು. ಗ್ರಾಮ ಬೆಳೆದರೆ ರಾಮರಾಜ್ಯ ಎಂದ ಅವರು ನರಿಂಗಾನ ಗ್ರಾಮಸ್ಥರ ವೈಯಕ್ತಿಕ ಶಿಸ್ತು ಮತ್ತು ಸಾಮಾಜಿಕ ಪ್ರೀತಿಯನ್ನು ಶ್ಲಾಘಿಸಿದರು.ರಾಜ್ಯ ಮಾಲಿನ್ಯ ನಿಯಂ ತ್ರಣ ಮಂ ಡಳಿ ಪರಿ ಸರ ಪ್ರಶಸ್ತಿ ಮತ್ತು ಮೂಲ ಸೌಕರ್ಯ ವಂ ಚಿತ ಗ್ರಾಮ ದತ್ತು ಯೋಜನೆ ಹಮ್ಮಿ ಕೊಂಡಿ ರುವು ದನ್ನು ತಿಳಿ ಸಿದ ಅವರು ನರಿಂ ಗಾನ ಇದೇ ಮಾದರಿ ಯಲ್ಲಿ ಮುಂದು ವರೆ ದರೆ ಎಲ್ಲ ಪ್ರಶಸ್ತಿ ಗಳನ್ನು ತನ್ನ ದಾಗಿ ಸಲಿದೆ ಎಂದರು.
ಸಮಾರಂಭದಲ್ಲಿ 'ನರಿಂಗಾನ ಪತ್ರಿಕೆ' ಯನ್ನು ಬಿಡುಗಡೆ ಮಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಭಟ್ ಅವರು, ಜನಜಾಗೃತಿಯಿಂದ ಮಾತ್ರ ಇಂತಹ ಮಾದರಿಗಳು ಹೊರಹೊಮ್ಮಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಸಂತೋಷ್ ಕುಮಾರ್ ರೈ ಅವರು ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಅನುದಾನದ ಬೇಡಿಕೆಯನ್ನು ಸಚಿವರಿಗೆ ನೀಡಿದರು.ಜಿಲ್ಲಾ ಪಂಚಾ ಯತ್ ಸಿಇಒ ಡಾ ಕೆ ಎನ್ ವಿಜಯ ಪ್ರಕಾಶ್ ಮಾತ ನಾಡಿ, ಘನ ತ್ಯಾಜ್ಯ ವಿಲೇ ವಾರಿ ಮತ್ತು ಅದ ರಿಂದ ಆದಾ ಯೋ ತ್ಪನ್ನ ಮಾಡುವ ಬಗ್ಗೆ, ದ್ರವ ತ್ಯಾಜ್ಯ ವಿಲೇ ಸಂ ಬಂಧ ಉಜಿರೆ ಮತ್ತು ಕಡಬ ದಲ್ಲಿ ಮಂಜೂ ರಾಗಿ ರುವ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಸಮಾಜಮುಖಿ ಕೆಲಸಗಳಿಗೆ ಜಿಲ್ಲಾ ಪಂಚಾಯತ್ ನಿಂದ ಎಲ್ಲ ಸಹಕಾರ ನೀಡುವುದಾಗಿ ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಸಕ ಯು ಟಿ ಖಾದರ್ ಅವರು ಸಣ್ಣ ಪುಟ್ಟ ಕೆಲಸಗಳಿಗೆ ಸರ್ಕಾರವನ್ನು ಕಾಯದೆ ತಮ್ಮ ಮನೆ, ಸುತ್ತ ಮುತ್ತ ಸ್ಚಚ್ಛತೆ ಪಾಲಿಸಿದರೂ ಸಮಾಜ ಅಭಿವೃದ್ಧಿ ಸಾಧ್ಯ ಎಂದರು. ಬಂಟ್ವಾಳ ತಾಲೂಕು ಪಂಚಾ ಯತ್ ಅಧ್ಯಕ್ಷ ರಾದ ಶ್ರೀಮತಿ ಶೈಲಜಾ ಪಿ ಶೆಟ್ಟಿ, ಸದಸ್ಯ ರಾದ ಬಿ ಫಾತಿಮಾ ಹೈದರ್, ಕಾರ್ಯ ನಿರ್ವಾಹಕ ಅಧಿಕಾರಿ ವಸಂತ ರಾಜ ಶೆಟ್ಟಿ, ಧರ್ಮ ಗುರು ರೆ.ಫಾ. ಫೆಡ್ರಿಕ್ ಕೊರೆಯಾ, ಎ ಪಿ ಎಂ ಸಿ ಸದಸ್ಯ ಉಮ್ಮರ್ ಫಜೀರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮ್ಯ ಸ್ವಾಗತಿಸಿದರು. ಜೋಸೆಫ್ ಕುಟ್ಹಿನೊ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನರಿಂಗಾನ ಗ್ರಾಮಪಂಚಾಯತ್ ಅಧ್ಯಕ್ಷರಾದ ಇಸ್ಮಾಯಿಲ್ ಮೀನಂಕೋಡಿ, ಉಪಾಧ್ಯಕ್ಷರಾದ ಸುಮಿತ್ರಾ, ಅಪ್ನಾದೇಶ್ ಸ್ವಯಂ ಸೇವಕ ಬಳಗ, ಜನಶಿಕ್ಷಣ ಟ್ರಸ್ಟ್ ನ ಶೀನಶೆಟ್ಟಿ, ಕೃಷ್ಣ ಮೂಲ್ಯ ಉಪಸ್ಥಿತರಿದ್ದರು. ನಳಿನಿ ಕೆ ಅವರು ಭ್ರಷ್ಟಾಚಾರ ವಿರೋಧಿಸುವ ಪ್ರಮಾಣ ಪತ್ರವನ್ನು ನೀಡಿದರು.ಸಮಾರಂಭದಲ್ಲಿ ಸಾಧನಾ ಪ್ರಶಸ್ತಿ ವಿಜೇತ ಸರಸ್ವತಿ ಎಸ್ ಎಂ ಭಟ್ ಅವರನ್ನು ಸನ್ಮಾನಿಸಲಾಯಿತು.