ಮಂಗಳೂರು,ಅಕ್ಟೋಬರ್.21: ಸಭ್ಯ ಸಮಾಜದ ಸ್ವಾಸ್ಯ್ಥ ಕಾಪಾಡುವಲ್ಲಿ ಸಮಗ್ರ ಪೋಲಿಸ್ ವ್ಯವಸ್ಥೆ ಅತ್ಯವಶ್ಯಕ. ಅವರ ಕರ್ತವ್ಯ ತತ್ಪರೆಯಿಂದ ನಮ್ಮ ಸಮಾಜ ಸುರಕ್ಷಿತವಾಗಿದೆ. ಇಂತಹವರ ಬಗ್ಗೆ ನಾಗರೀಕರಾದ ನಾವೆಲ್ಲರು ಅವರಿಗೆ ಗೌರವ ಸಲ್ಲಿಸಬೇಕು; ಅವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಸಮಾಜದ ಕರ್ತವ್ಯ . ಪೋಲಿಸ್ ವ್ಯವಸ್ಥೆ ಬಗ್ಗೆ ಜನರಲ್ಲಿರುವ ಭಯ ಹೋಗಲಾಡಿಸಲು ಅವರ ಕರ್ತವ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ|ಟಿ.ಸಿ.ಶಿವಶಂಕರ ಮೂರ್ತಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಇಂದು ಮಂಗ ಳೂರಿನ ಪೋಲೀಸ್ ಕಮಿಷ ನರೇಟ್ ಹಾಗೂ ಜಿಲ್ಲಾ ಪೋ ಲೀಸ್ ವತಿ ಯಿಂದ ಆಯೋ ಜಿಸಿದ್ದ ಪೋಲೀಸ್ ಹುತಾತ್ಮ ದಿನಾ ಚರಣೆ ಅಂಗ ವಾಗಿ ಪ್ರಾಣಾ ರ್ಪಣೆ ಮಾಡಿದ ಪೊಲೀ ಸರಿಗೆ ಗೌರವ ಸಲ್ಲಿಸಿ ಮಾತ ನಾಡು ತ್ತಿದ್ದರು.ಪೋಲೀ ಸರು ಕರ್ತವ್ಯ ದಲ್ಲಿ ದ್ದಾಗ ಮೃತ ಪಟ್ಟರೆ ಅವರ ಕುಟುಂಬ ವರ್ಗ ದವ ರಿಗೆ ಹೆಚ್ಚಿನ ಸಾಮಾ ಜಿಕ ಭದ್ರತೆ ಯನ್ನು ಸರ್ಕಾ ರಗಳು ಒದಗಿ ಸಬೇಕು, ಅವರಿಗೆ ಉಚಿತ ಪಡಿತರ,ಸಾರಿಗೆ ಮುಂತಾದ ಸೌಲಭ್ಯ ಗಳನ್ನು ದೊರಕಿ ಸುವುದು ಸಮಾ ಜದ ಕರ್ತವ್ಯ ಎಂದ ಉಪ ಕುಲಪ ತಿಗಳು, ಶಿಕ್ಷಣ ವ್ಯವಸ್ಥೆ ಕೆಟ್ಟರೆ ಸಮಾಜ ಹಾಳಾಗುತ್ತದೆ.ಆರಕ್ಷಕ ವ್ಯವಸ್ತೆ ಹದಗೆಟ್ಟರೆ ಇಡೀ ವ್ಯವಸ್ಥೆಯೇ ಹಾಳಾಗುತ್ತದೆ ಎಂದು ತಿಳಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಡಾ|ಎನ್.ಎಸ್. ಚನ್ನಪ್ಪ ಗೌಡ ಅವರು, ಮಾತ ನಾಡಿ ದಿನದ 24 ಗಂಟೆ ಯೂ ಕರ್ತವ್ಯ ಮಾಡುವ ಆರ ಕ್ಷಕ ರಿಗೆ ಕೆಲ ವೊಮ್ಮೆ ಜೀವನ ಪಣ ಕ್ಕಿಟ್ಟು ಕಾರ್ಯ ನಿರ್ವ ಹಿಸ ಬೇಕಾದ ಪರಿ ಸ್ಥಿತಿ ಗಳು ಎದು ರಾಗು ತ್ತವೆ ಅವು ಗಳನ್ನು ಎದು ರಿಸಿ ಸಮಾ ಜದ ಸ್ವಾಸ್ಥ್ಯ ವನ್ನು ಕಾಪಾ ಡುತ್ತಾ ನಮ್ಮೆ ಲ್ಲರ ಪ್ರಾಣ,ಮಾನ,ಆಸ್ತಿ ಪಾಸ್ತಿ ಗಳ ರಕ್ಷಣೆ ಯಲ್ಲಿ ಅವರು ಜೀವ ವನ್ನೆ ಬಲಿ ಕೊಡು ತ್ತಾರೆ ಇಂತ ಹವರ ಬಗ್ಗೆ ಹಗುರವಾಗಿ ಟೀಕಿಸುವುದನ್ನು ಬಿಟ್ಟು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಅವರಿಗೆ ಗೌರವ ತೋರೋಣ ಎಂದರು. ಐಜಿ ಪಶ್ವಿಮ ವಲಯ ಶ್ರೀ ಅಲೋಕ್ ಮೋಹನ್ ಅವರು ಪ್ರಥಮವಾಗಿ ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸಿದರು.
ಕಳೆದ ವರ್ಷ ದೇಶದಲ್ಲಿ 636 ಭಾರತೀಯ ಪೋಲೀ ಸರು ಕರ್ತ ವ್ಯದ ಲ್ಲಿದ್ದಾಗ ಮೃತ ರಾಗಿ ದ್ದರೆ ಕರ್ನಾ ಟಕ ದಲ್ಲಿ 10 ಜನ ಪೋಲೀ ಸರು ಪ್ರಾಣಾ ರ್ಪಣೆ ಮಾಡಿ ದ್ದಾರೆ ಎಂದು ಮಂಗ ಳೂರು ಪೋ ಲೀಸ್ ಆಯುಕ್ತ ಸೀ ಮಂತ ಕುಮಾರ್ ಸಿಂಗ್ ಹಾಗೂ ದ.ಕ.ಎಸ್ ಪಿ ಲಾಬೂ ರಾಮ್ ಮಾಹಿತಿ ನೀಡಿ ದರು. ಮುಖ್ಯ ಅತಿಥಿ ಗಳಾಗಿ ಆಗ ಮಿಸಿದ್ದ ನವ ಮಂಗ ಳೂರು ಬಂದ ರಿನ ಭಾರ ತೀಯ ಕಂದಾಯ ಇಲಾಖೆ ಅಧಿಕಾರಿ ಟಿ.ಎಸ್.ಎನ್.ಮೂರ್ತಿ,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಕಾರಿ ಡಾ|ವಿಜಯಪ್ರಕಾಶ್, ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೆಶ್ ಕಾರ್ಣಿಕ್ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿ ತಮ್ಮ ನುಡಿನಮನಗಳನ್ನು ಸಲ್ಲಿಸಿದರು.