ಮಂಗಳೂರು,ಅಕ್ಟೋಬರ್.01 : ದೇಶದ ಅಭಿವೃದ್ಧಿಯ ಮಾಪನಕ್ಕೆ ಅಭಿವೃದ್ಧಿ ಸೂಚ್ಯಂಕಗಳು ಮುಖ್ಯ. ಅಭಿವೃದ್ಧಿ ಸೂಚ್ಯಂಕಗಳ ಸಂಗ್ರಹಕ್ಕೆ ಅಂಕೆ ಸಂಖ್ಯೆಗಳು ಅಗತ್ಯ. ಇದನ್ನು ಗ್ರಾಮ ಮಟ್ಟದಿಂದ ಸಂಗ್ರಹಿಸಲು ಕರ್ನಾಟಕ ಮುಂದಾಗಿದ್ದು ಯೋಜನೆ ಯಶಸ್ವಿಯಾದರೆ ದೇಶಕ್ಕೆ ಮಾದರಿಯಾಗಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು.
ಅವರಿಂದು ಜಿಲ್ಲಾ ಪಂಚಾ ಯತ್ ನ ನೇತ್ರಾ ವತಿ ಸಭಾಂ ಗಣ ದಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇ ಶನಾ ಲಯ ಕರ್ನಾ ಟಕ ರಾಜ್ಯ ಕಾರ್ಯ ತಾಂ ತ್ರಿಕ ಸಾಂ ಖ್ಯಿಕ ಯೋಜನೆ ಹಾಗೂ ಜಿಲ್ಲಾ ಪಂಚಾ ಯತ್ ಇವರ ಸಹ ಯೋಗ ದಲ್ಲಿ ಆಯೋ ಜಿಸ ಲಾದ ಜಿಲ್ಲಾ ವಾರು ಅಂ ದಾಜು ತಯಾ ರಿಸುವ ಬಗ್ಗೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಭಿವೃದ್ಧಿ ಸೂಚ್ಯಂಕಗಳನ್ನು ಸಮಗ್ರವಾಗಿ ರೂಪಿಸಿ ಅಳವಡಿಸುವುದರಿಂದಾಗುವ ಅನುಕೂಲಗಳನ್ನು ವಿವರಿಸಿದ ಸಿಇಒ ಅವರು, ಶಿಕ್ಷಣ, ಶಿಶು ಮರಣ ಪ್ರಮಾಣ, ಹೆಣ್ಣು ಶಿಶು ಮರಣ ಪ್ರಮಾಣ ಇವುಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಮಾದರಿಯಾಗಿದ್ದು, ಮೂಲಭೂತವಾದ ಸೌಲಭ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಳವಡಿಸಲು ಕಾರ್ಯಾಗಾರ ನೆರವಾಗಲಿದೆ ಎಂದರು. ಕಾರ್ಯಾಗಾರಗಳಿಗೆ ಅಧಿಕಾರಿಗಳು ನಿಗದಿತ ಸಮಯಕ್ಕೆ ಸರಿಯಾಗಿ ಹಾಜರಾಗಬೇಕೆಂದು ಸೂಚಿಸಿದ ಸಿಇಒ ಅವರು, ಈ ಸಂಬಂಧ ಎಲ್ಲರಿಗೂ ಲಿಖಿತ ಸೂಚನೆ ನೀಡಲು ಮುಖ್ಯ ಯೋಜನಾಧಿಕಾರಿಗಳಿಗೆ ಸೂಚಿಸಿದರು. ಕಾರ್ಯಾ ಗಾರ ದಲ್ಲಿ ಸಂಪ ನ್ಮೂಲ ವ್ಯಕ್ತಿ ಯಾಗಿ ಆಗ ಮಿಸಿದ ಆರ್ಥಿಕ ಮತ್ತು ಸಾಂ ಖ್ಯಿಕ ನಿರ್ದೇ ಶನಾ ಲಯ ಸಿಪ್ ವಿಭಾ ಗದ ಜಂಟಿ ನಿರ್ದೆ ಶಕ ರಾದ ಶ್ರೀನಿ ವಾಸ ರಾವ್ ಅವರು, ಅಂಕಿ ಅಂಶ ಗಳ ಮಹತ್ವ, ನ್ಯೂ ನ್ಯತೆ ಸರಿ ಪಡಿ ಸುವ ಬಗ್ಗೆ, ರಂಗ ರಾಜನ್ ಸಮಿತಿ ನೀಡಿದ ವರದಿ ಯ ಬಗ್ಗೆ ಅಧಿ ಕಾರಿ ಗಳಿಗೆ ಮಾಹಿತಿ ನೀಡಿ ದರು. ಜಿಲ್ಲೆಯ ಯೋಜನೆ ರೂಪಿಸುವ ಜಿಲ್ಲಾ ಪಂಚಾಯತ್ ನಲ್ಲಿ ಅಭಿವೃದ್ದಿ ಸೂಚ್ಯಂಕ, ಜಿಡಿಪಿ ಬಗ್ಗೆ, ಗ್ರಾಮ ಮಟ್ಟದಿಂದ ತಲಾ ಆದಾಯದ ಮಾಹಿತಿ ಸಂಗ್ರಹಿಸುವ ಕುರಿತ ಮಾದರಿಯನ್ನು ವಿವರಿಸಿದರು. ಉಡುಪಿಯಲ್ಲಿ ಈ ನಿಟ್ಟಿನಲ್ಲಿ ಆದ ಪ್ರಯತ್ನವನ್ನು ವಿವರಿಸಿದರು. ತಾಲೂಕು ಆಂತರಿಕ ಉತ್ಪನ್ನದ ವ್ಯಾಖ್ಯಾನವನ್ನು ವಿವರಿಸಿದ ಅವರು ಇದರಿಂದ ಸಾಮಾಜಿಕ ಅಭಿವೃದ್ದಿಗೆ ಯೋಜನೆಗಳನ್ನು ರೂಪಿಸಲು ನೆರವಾಗಲಿದೆ ಎಂದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಕೆ ಶಿವರಾಮೇಗೌಡ, ಮುಖ್ಯ ಯೋಜನಾಧಿಕಾರಿ ಮೊಹಮ್ಮದ್ ನಝೀರ್ ಅವರು ಉಪಸ್ಥಿತರಿದ್ದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು.