ಹೊಸದಿಲ್ಲಿ,ಅಕ್ಟೋಬರ್.02:.ಹಂಗರ್ ಪ್ರಾಜೆಕ್ಟ್ ಪ್ರಾಯೋಜಿತ 11ನೇ `ಸರೋಜಿನಿ ನಾಯ್ಡು' ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಹೊಸದಿಲ್ಲಿಯ ಹೆಬಿಟೇಟ್ ಸೆಂಟರ್ ಸಭಾಂಗಣದಲ್ಲಿ ಇಂದು ಜರಗಿತು.ಮಹಿಳೆ ಮತ್ತು ಪಂಚಾಯತ್ ರಾಜ್ ವಿಷಯದಲ್ಲಿ ಅತ್ಯುತ್ತಮ ವರದಿಗಾರಿಕೆಗೆ `ಸರೋಜಿನಿ ನಾಯ್ಡು' ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಾದೇಶಿಕ ಭಾಷಾ ವಿಭಾಗದಲ್ಲಿ `ಹೊಸ ದಿಗಂತ' ಪತ್ರಿಕೆಯ ಮಂಗಳೂರು ಕಚೇರಿಯ ಹಿರಿಯ ವರದಿಗಾರ ಗುರುವಪ್ಪ ಎನ್.ಟಿ.ಬಾಳೇಪುಣಿ ಅವರ `ಇಡ್ಕಿದು ಗ್ರಾಮ ಪಂಚಾಯತ್ ಗ್ರಾಮಾಭಿವೃದ್ಧಿಗೊಂದು ಜೀವಂತ ಮಾದರಿ 'ವರದಿಗೆ `ಸರೋಜಿನಿ ನಾಯ್ಡು' ಪ್ರಶಸ್ತಿಯನ್ನು ಪಡೆದರು.ಸಮಾ ರಂಭ ದಲ್ಲಿ ಭಾಗವಹಿಸಿ ಮಾತ ನಾಡಿದ ಕೇಂದ್ರ ಸಚಿವ ಜೈ ರಾಂ ರಮೇಶ್ ವೈಯ ಕ್ತಿಕ ಸ್ವಚ್ಛ ತೆಯ ಲ್ಲಿ ನಾವು ಮೊದಲಿ ಗರಾ ಗಿದ್ದೇವೆ. ಆದರೆ ಸಾರ್ವ ಜನಿಕ ಸ್ವಚ್ಛತೆಯ ವಿಷಯ ಬಂದಾಗ ಜವಾ ಬ್ದಾರಿ ತಪ್ಪಿಸಿ ಕೊಳ್ಳುವ ಜಾಯ ಮಾನ ನಮ್ಮ ದೇಶ ದ್ದಾಗಿದೆ.ದೇಶದ ಶೇ.60ರಷ್ಟು ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಬಯಲು ವಿಸರ್ಜನೆ ಈ ದೇಶಕ್ಕೆ ದೊಡ್ಡ ಶಾಪವಾಗಿದೆ. ವಿಶ್ವದಲ್ಲಿ ಬಯಲು ವಿಸರ್ಜನೆ ಮಾಡುವವರಲ್ಲಿ 58ಶೇ. ಮಂದಿ ನಮ್ಮ ದೇಶದಲ್ಲಿರುವುದು ದೌರ್ಭಾಗ್ಯ ಎಂದು ವಿಷಾದಿಸಿದರು. `ಸ್ವಚ್ಛ ಭಾರತ- ನಿರ್ಮಲ ಭಾರತ' ಎಂಬ ಗಾಂಧೀಜಿಯ ಕನಸು ಇನ್ನೂ ನನಸಾಗಿಲ್ಲ. ದೇಶದ ಐದು ರಾಜ್ಯಗಳು ಸ್ವಚ್ಛತೆಯ ನಿಟ್ಟಿನಲ್ಲಿ ಗಂಭೀರ ಕೆಲಸ ಮಾಡುತ್ತಿವೆಯಾದರೂ ಇತರ ರಾಜ್ಯಗಳ ಪ್ರಯತ್ನ ಸಾಲದು ಎಂದರು.ಪ್ರಶಸ್ತಿ ಸ್ವೀಕ ರಿಸಿ ಮಾತ ನಾಡಿದ ಬಾಳೇ ಪುಣಿ, ನನ್ನ ಹೆತ್ತ ವರು, ನನ್ನನ್ನು ಓದಿ ಸಿದ ಸಹೋ ದರ ಡಾ.ಕೊಯಿರಾ ಎನ್. ಬಾಳೆಪುಣಿ ಹಾಗೂ ಬಡವ ರಲ್ಲಿ ಬಡವ ರಾದರೂ ಸಮಾಜ ಸೇವೆ ಯಲ್ಲಿ ರಾಷ್ಟ್ರ ಮಟ್ಟ ದಲ್ಲಿ ಗಮನ ಸೆಳೆದ ಶಿಕ್ಷಣ ಪ್ರೇಮಿ ಕಿತ್ತಳೆ ಹಾಜಬ್ಬ ನನಗೆ ರೋಲ್ ಮಾಡೆಲ್ ಎಂದರು. ತನಗೆ ಯಾವುದಾದರೊಂದು ಇಲಾಖೆಯಲ್ಲಿ ಗುಮಾಸ್ತ ಕೆಲಸ ಗಿಟ್ಟಿಸಿಕೊಳ್ಳುವುದು ಕಷ್ಟವಿರಲಿಲ್ಲ. ಆದರೆ ನನ್ನ ಒಲವು ಇದ್ದುದು ಪತ್ರಿಕೋದ್ಯಮದ ಕಡೆಗೆ. 1986ರಲ್ಲಿ ಆ ಪಯಣ ಆರಂಭಗೊಂಡಿತು.
ಮಂಗಳೂರಿನ ಬಸ್ಸುಗಳಲ್ಲಿ ನೇತಾಡಿಕೊಂಡು ಪ್ರಯಾಣಿಸುವ ನನ್ನನ್ನು `ಹಂಗರ್ ಪ್ರಾಜೆಕ್ಟ್ ಕುಟುಂಬ' ವಿಮಾನ ಮೂಲಕ ಇಲ್ಲಿಗೆ ಕರೆಸಿಕೊಂಡಿದೆ. ನನಗೆ ಅನ್ನ ನೀಡುತ್ತಿರುವ `ಹೊಸ ದಿಗಂತ' ಪತ್ರಿಕೆ ಮತ್ತು ನನ್ನೂರು ಬಾಳೆಪುಣಿಯನ್ನು ದೆಹಲಿಯ ಎತ್ತರಕ್ಕೆ ಏರಿಸಿದ `ಹಂಗರ್ ಪ್ರಾಜೆಕ್ಟ್'ನ ಸರ್ವರಿಗೂ ನನ್ನ ತುಂಬು ಹೃದಯದ ಕೃತಜ್ಞತೆಗಳು. ಈ ಉನ್ನತ ಗೌರವ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದವರು ಹೇಳಿದರು.
ದೇಶದ ವಿವಿಧ ಭಾಗಗಳ ಆಯ್ದ ಗ್ರಾ.ಪಂ. ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಹಂಗರ್ ಪ್ರಾಜೆಕ್ಟ್ ನ ಉಪಾಧ್ಯಕ್ಷೆ ಹಾಗೂ ಭಾರತದ ನಿರ್ದೇಶಕಿ ರೀಟಾ ಸರಿನ್, ಸಮಾಜ ಸೇವಕಿ ಖ್ಯಾತ ನೃತ್ಯಪಟು ಮಲ್ಲಿಕಾ ಸಾರಾಭಾಯಿ ಬಿಹಾರದ ಗ್ರಾ.ಪಂ. ಸದಸ್ಯೆ ಲಕ್ಷ್ಮೀದೇವಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು
`ಸರೋಜಿನಿ ನಾಯ್ಡು' ರಾಷ್ಟ್ರೀಯ ಪ್ರಶಸ್ತಿಗೆ ಪ್ರಾರಂಭದ ವರ್ಷ 2001ರಲ್ಲಿ 166 ಲೇಖನಗಳು ಬಂದಿದ್ದರೆ ಪ್ರಸ್ತುತ ವರ್ಷ 1,863 ವರದಿಗಳು ಬಂದಿದ್ದುವು,ಇವುಗಳಲ್ಲಿ ಮೂರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.