Saturday, October 1, 2011
ಪಿಲಿಕುಳದಲ್ಲಿ `ವನ್ಯಜೀವಿ ವಾಸಗೃಹ ಮತ್ತು ವಿಶ್ರಾಂತಿ ಕುಟೀರ' ಉದ್ಘಾಟನೆ
ಮಂಗಳೂರು,ಅಕ್ಟೋಬರ್.01: ಪಿಲಿಕುಳ ನಿಸರ್ಗಧಾಮ ಸೊಸೈಟಿಯು ಡಾ. ಶಿವರಾಮ ಕಾರಂತ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ನಿರ್ಮಿಸಲಾದ `ವನ್ಯಜೀವಿ ವಾಸಗೃಹಗಳ ಹಾಗು ವಿಶ್ರಾಂತಿ ಕುಟೀರ'ವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಇಂದು ಉದ್ಘಾಟಿಸಿದರು.ಬಳಿಕ ನಡೆದ ಸಮಾ ರಂಭ ವನ್ನು ಉದ್ದೇ ಶಿಸಿ ಮಾತ ನಾಡಿದ ಪಾಲೆ ಮಾರ್ `ಬರಡು ಭೂಮಿ ಯಂತಿ ದ್ದ ಈ ಪ್ರದೇ ಶವು ಅಂದಿನ ಜಿಲ್ಲಾ ಧಿಕಾರಿ ಭರತ್ ಲಾಲ್ ಮೀನಾ ಅವರ ಶ್ರಮ ದಿಂದ ಈ ಹಂತಕ್ಕೆ ತಲುಪಿದೆ. ಇತ್ತೀಚಿನ ದಿನಗಳಲ್ಲಿ ಪಿಲಿಕುಳ ಕೇವಲ ಪ್ರವಾಸಿ ತಾಣವಲ್ಲ, ವನ್ಯಜೀವಿಗಳ ಪ್ರಸೂತಿ ತಾಣವಾಗಿಯೂ ಮಾರ್ಪಟ್ಟಿವೆ.ಮುಂದಿನ ದಿನಗಳಲ್ಲಿ ಇದು ಅಂತಾರಾಷ್ಟ್ರೀಯ ಮಟ್ಟಕ್ಕೇರಲಿ' ಎಂದು ಆಶಿಸಿದರು.ಅಳಿವಿನಂಚಿನಲ್ಲಿರುವ ಸಸ್ಯ, ಮರಗಳ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಹೊಣೆ ನಮ್ಮದಾಗಿದೆ. ಈವತ್ತು ಒಂದೆಡೆ ಪರಿಸರ, ಅರಣ್ಯ ಸಂರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಇನ್ನೊಂದೆಡೆ ಅವ್ಯಾಹತವಾಗಿ `ಮರ ದಂಧೆ' ನಡೆಯುತ್ತಿದೆ. ಇದನ್ನು ತಡೆಗಟ್ಟಲು ಸರಕಾರ ಬದ್ಧವಾಗಿದ್ದು, ಸಾರ್ವಜನಿಕರು ಕೂಡ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.ಸಮಾ ರಂಭದ ಅಧ್ಯ ಕ್ಷತೆ ಯನ್ನು ಶಾಸಕ ಕೆ. ಅಭಯ ಚಂದ್ರ ಜೈನ್ ವಹಿ ಸಿದ್ದರು. ಮುಖ್ಯ ಅತಿ ಥಿಗ ಳಾಗಿ ರಾಜ್ಯ ವಿಧಾನ ಸಭೆ ಯ ಉಪಾ ಧ್ಯಕ್ಷ ಎನ್. ಯೋ ಗೀಶ್ ಭಟ್, ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಬಿ. ನಾಗ ರಾಜ ಶೆಟ್ಟಿ, ಪಶ್ಚಿಮ ಘಟ್ಟ ಕಾರ್ಯ ಪಡೆಯ ಅಧ್ಯಕ್ಷ ಅನಂತ ಹೆಗ್ಡೆ ಅಶೀ ಸರ, ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ, ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ, ವಿಧಾನ ಪರಿಷತ್ ಸದಸ್ಯೆ ಭರತಿ ಶೆಟ್ಟಿ, ಕರ್ನಾಟಕ ಬ್ಯಾಂಕ್ನ ಮಹಾಪ್ರಬಂಧಕ ಪಿ. ಜಯರಾಮ ಹಂದೆ, ನಿವೃತ್ತ ಅಧಿಕಾರಿ ಯು.ಟಿ.ಆಳ್ವ, ಗಜೇಂದ್ರ ಗೊರಸುಕುಡಿಗೆ, ಕೆ.ವಿ.ರಾವ್, ಮೂಡುಶೆಡ್ಡೆ ಗ್ರಾ.ಪಂ. ಅಧ್ಯಕ್ಷ ಉಮೇಶ್ ಜೆ.,ತಾ.ಪಂ. ಸದಸ್ಯ ಹರೀಶ್ ಕೆ. ಮತ್ತಿತರರು ಪಾಲ್ಗೊಂಡಿದ್ದರು.