ಮಂಗಳೂರು,ಅಕ್ಟೋಬರ್.10 : ಎಲ್ಲರ ಸಹಕಾರದಿಂದ ಅಭಿವೃದ್ಧಿ ಕೆಲಸ ಮಾಡುವುದಷ್ಟೆ ತಮ್ಮ ಸರ್ಕಾರದ ಉದ್ದೇಶವಾಗಿದ್ದು, ನಾಗರೀಕರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಬಾರದು. ಬಿಡುಗಡೆಯಾದ ಅನುದಾನದ ಸದ್ಬಳಕೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ ಕೃಷ್ಣ ಪಾಲೆಮಾರ್ ಹೇಳಿದರು.
ಅವ ರಿಂದು ಮನಾಪ ವ್ಯಾ ಪ್ತಿಯ ಕೆ ಪಿ ಟಿ - ವಿಮಾನ ನಿಲ್ದಾಣ ರಸ್ತೆಗೆ ಡಾ ಸರ್ ಎಂ ವಿಶ್ವೇ ಶ್ವರಯ್ಯ ರಸ್ತೆ ಎಂದು ನಾಮ ಕರಣ ಮಾಡುವ ಸಮಾ ರಂಭ ದಲ್ಲಿ ಪಾ ಲ್ಗೊಂಡು ಮಾತ ನಾಡು ತ್ತಿದ್ದರು. ಒಳ ರಸ್ತೆ ಗಳನ್ನೂ ಆದ್ಯತೆ ಮೇಲೆ ಅಭಿ ವೃದ್ಧಿ ಪಡಿ ಸುವು ದಾಗಿ ಹೇಳಿದ ಅವರು, ಪಂಪ್ ವೆಲ್ ನ ಹೊಸ ಬಸ್ ನಿಲ್ದಾಣಕ್ಕೆ 15 ದಿವಸ ಗಳೊ ಳಗೆ ಚಾಲನೆ ನೀಡಿ 6 ತಿಂಗ ಳೊಳಗೆ ಕೆಲಸ ಸಂಪೂರ್ಣ ಗೊಳಿಸುವುದಾಗಿ ನುಡಿದರು.
ವಿಮಾನ ನಿಲ್ದಾಣ ರಸ್ತೆಯನ್ನು ಕಾಂಕ್ರೀಟೀಕರಣ ಗೊಳಿಸಲಾಗಿದ್ದು ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಹಾಗೂ ಫುಟ್ ಪಾತ್ ನಿರ್ವಹಣೆಗೆ ಇಂಜಿನಿಯರ್ಸ್ ಗಳ ಸಹಕಾರ ಪಡೆಯಲಾಗಿದೆ ಎಂದರು. ಕೆಪಿಟಿ ವಿಮಾನ ನಿಲ್ದಾಣ ರಸ್ತೆಗೆ ಒಟ್ಟು 29.32 ಕೋಟಿ ರೂ. ವೆಚ್ಚ ವಾಗಿದ್ದು ಅದ ರಲ್ಲಿ ಪಾಲಿ ಕೆಯ 4.57 ಕೋಟಿ ಹಾಗೂ ಎಸ್ ಎಫ್ ಸಿ ಯ 2008-09 ರಡಿ ರೂ. 12.50 ಕೋಟಿ ಮತ್ತು ASIDE ಯೋಜನೆ ಯಡಿ ರೂ. 12.25 ಕೋಟಿ ರೂ.ಗಳನ್ನು ಭರಿಸ ಲಾಗಿದೆ.
ಈ ಯೋಜನೆ ಯಡಿ ಕೆಪಿಟಿ ಯಿಂದ ಮರ ವೂರು ವರೆಗೆ 7 ಕಿ ಮೀ ನಷ್ಟು ಚತು ಷ್ಪಥ ರಸ್ತೆ ಯನ್ನು ಕಾಂಕ್ರೀ ಟಿಕರ ಗೊಳಿಸ ಲಾಗಿದ್ದು ಪ್ರಾ ರಂಭ ದಲ್ಲಿ ಈ ರಸ್ತೆ ಯನ್ನು ರೂ. 17.50 ಕೋಟಿ ವೆಚ್ಚದಲ್ಲಿ ಡಾಂಬರೀಕರಣಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ ಹೆಚ್ಚು ಮಳೆ ಮತ್ತು ಭೌಗೋಳಿಕ ಸ್ಥಿತಿಗತಿಗಳಿಗನುಗುಣವಾಗಿ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲು ತೀರ್ಮಾನಿಸಲಾಯಿತು.
ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನುಪಾಲಿಕೆ ಮೇಯರ್ ಪ್ರವೀಣ್ ವಹಿಸಿದ್ದರು. ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಉಪಸ್ಥಿತರಿದ್ದರು. ಉಪಮೇಯರ್ ಶ್ರೀಮತಿ ಗೀತಾ ಎನ್ ನಾಯಕ್, ಶರತ್ ಕುಮಾರ್, ಪ್ರೇಮಾನಂದ ಶೆಟ್ಟಿ, ಶ್ರೀಮತಿ ಎಂ ರಾಜಶ್ರೀ, ಸಚೇತಕರಾದ ಸುಧೀರ್ ಶೆಟ್ಟಿ, ,ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ಪಾಲಿಕೆ ಸದಸ್ಯರುಗಳು ಪಾಲ್ಗೊಂಡಿದ್ದರು.