ಮಂಗಳೂರು,ಅಕ್ಟೋಬರ್.10 : ಜನವರಿ 26, 27 ಮತ್ತು 28 ರಂದು ಮಂಗಳೂರಿನ ಪಿಲಿಕುಳದಲ್ಲಿ ಜವಾಹರ ಬಾಲಭವನ ಕಬ್ಬನ್ ಪಾರ್ಕ್ ಇವರು ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಹಕಾರದಿಂದ ರಾಷ್ಟ್ರ ಮಟ್ಟದ ಮಕ್ಕಳ ಕಲಾ ಉತ್ಸವ ಆಚರಿಸುವ ಸಂಬಂಧ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಯಿತು.ಮೂರು ದಿನಗಳ ಕಾಲ ನಡೆ ಯುವ ಉತ್ಸವ ಮಾದರಿ ಯಾಗಿ ನಡೆಯ ಬೇಕೆಂದು ಜಿಲ್ಲಾ ಉಸ್ತು ವಾರಿ ಸಚಿವ ರಾದ ಜೆ ಕೃಷ್ಣ ಪಾಲೆ ಮಾರ್ ಅವರು ಹೇಳಿ ದರು. ಶೈಕ್ಷಣಿ ಕವಾಗಿ ಉತ್ತಮ ವಾತಾ ವರಣ ಇರುವ ಜಿಲ್ಲೆಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವದಿಂದ ಜಿಲ್ಲೆಗೆ ಉತ್ತಮ ಹೆಸರು ಬರಬೇಕೆಂದರು. ಸಭೆಯಲ್ಲಿ ಉಪಸ್ಥಿತರಿದ್ದ ಉಪಸಭಾಪತಿಗಳಾದ ಎನ್ ಯೋಗೀಶ್ ಭಟ್ ಅವರು ಮಾತನಾಡಿ, ಉತ್ಸವದಲ್ಲಿ ಜಿಲ್ಲೆಯ ವಿಶೇಷ ಪ್ರತಿಭೆಗಳನ್ನು ಗುರುತಿಸಿ ಸನ್ಮಾನ ನೀಡುವ ಕಾರ್ಯಕ್ರಮವಾಗಬೇಕೆಂದರು. ರಾಷ್ಟ್ರೀಯ ಮಟ್ಟದ 73 ಬಾಲಭವನಗಳಿಂದ 1500 ಮಕ್ಕಳು ಮತ್ತು ಸ್ಥಳೀಯ ಮಕ್ಕಳು ಪಾಲ್ಗೊಳ್ಳುವಿಕೆಯಿಂದ ಒಟ್ಟು 2500 ಮಕ್ಕಳು ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಮಕ್ಕಳಿಗೆ ಉತ್ತಮ ವಸತಿ ಮತ್ತು ಊಟೋಪಚಾರ ನೀಡಬೇಕೆಂದು ಹೇಳಿದರು. ಜಿಲ್ಲಾ ಡಳಿತದ ವತಿ ಯಿಂದ ಊಟೋ ಪಚಾರ ಮತ್ತು ವಸತಿ ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿ ಸುವು ದಾಗಿ ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಹೇಳಿದರು. ಸಭೆ ಯಲ್ಲಿ ಪ್ರಾಸ್ತಾ ವಿಕ ಮಾತು ಗಳ ನ್ನಾಡಿದ ರಾಜ್ಯ ಬಾಲ ಭವನ ಸೊಸೈಟಿ ಅಧ್ಯಕ್ಷ ರಾದ ಶ್ರೀಮತಿ ಸುಲೋ ಚನ ಜಿ ಕೆ ಭಟ್ ಅವರು, ಉತ್ಸವದ ಉದ್ದೇಶ ಮತ್ತು ರೂಪುರೇಷೆಗಳನ್ನು ವಿವರಿಸಿದರು. ಎಲ್ಲ ಮಕ್ಕಳಿಗೆ ಕಲಾ ಶಿಬಿರ, ಕ್ರಿಯಾತ್ಮಕ ಕಲೆ, ಬರವಣಿಗೆ, ವಿಜ್ಞಾನದಲ್ಲಿ ನೂತನ ಆವಿಷ್ಕಾರಗಳ ಪ್ರದರ್ಶನ ಹಾಗೂ ಕ್ರಿಯಾತ್ಮಕ ಪ್ರದರ್ಶನ ಕಲೆಯನ್ನು ಇತರ ರಾಜ್ಯಗಳಿಂದ ವಿನಿಮಯ ಕಾರ್ಯಕ್ರಮ ನಡೆಸಲಾಗುವುದು. ಎಲ್ಲ ರಾಜ್ಯಗಳಿಂದ ಮಕ್ಕಳಿಂದ ಉತ್ಸವವನ್ನು ಬಿಂಬಿಸುವ ಸಾಮೂಹಿಕ ಚಿತ್ರ ಬಿಡಿಸುವುದು ಅಥವಾ ಮ್ಯೂರಲ್ ತಯಾರಿಸುವುದು ಎಂದರು.
ಸ್ಥಳೀಯ ಅಥವಾ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ರಾಷ್ಟ್ರ ಪ್ರೇಮ, ಐಕ್ಯತೆ ಹಾಗೂ ಸದ್ಭಾವನೆ ಮೂಡಿಸುವ ನಿಟ್ಟಿನಲ್ಲಿ ಉಪನ್ಯಾಸ ನೀಡುವುದು, ರಾಜ್ಯದ ಪಾರಂಪರಿಕ ಆಟಗಳ ಪ್ರದರ್ಶನ, ಮಕ್ಕಳಿಗೆ ಲೇಜರ್ ಷೋ ಆಯೋಜಿಸುವುದು, ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದು, ಸಾಮೂಹಿಕ ಗಾಳಿಪಟ ಹಾರಾಟ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ನುಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಜನಾರ್ಧನ, ಸಿಇಒ ಡಾ.ಕೆ.ಎನ್ ವಿಜಯಪ್ರಕಾಶ್, ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ಸಹಾಯಕ ಆಯುಕ್ತರಾದ ಡಾ ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ಶಕುಂತಲಾ ಅವರು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ ಸ್ವಾಗತಿಸಿ ವಂದಿಸಿದರು.