ಮಂಗಳೂರು,ಅಕ್ಟೋಬರ್.23: ವಿರಾಟ್ ವಿರಾಗಿ ವೇಣೂರ ಗೊಮ್ಮಟೇಶನಿಗೆ ಇದೀಗ ಮಹಾಮಜ್ಜನದ ಭರದ ಸಿದ್ಧತೆ. 2012 ಜನವರಿ 29ರಂದು ಮಹಾಮಜ್ಜನಕ್ಕೆ ಈಗಾಗಲೇ ದಿನ ನಿಗಧಿಯಾಗಿದ್ದು,ಪೂರ್ವಭಾವೀ ಸಿದ್ದತೆಗಳು ಭರದಿಂದ ಸಾಗಿವೆ. ಸತತ ಒಂಬತ್ತು ದಿನಗಳ ಕಾಲ ಭಗವಾನ್ ಬಾಹುಬಲಿಗೆ ಮಹಾಮಜ್ಜನದ ವೈಭವದ ಕಾರ್ಯಕ್ರಮಗಳು ನಡೆಯಲಿವೆ.ಮತ್ತೊಮ್ಮೆ ವೇಣೂರು ಮಹಾಮಜ್ಜನದ ಚಾರಿತ್ರಿಕ ಸಂಭ್ರಮಕ್ಕೆ ಸಜ್ಜಾಗುತ್ತಿದ್ದು, ಯಾತ್ರಿಕರನ್ನು ಕೈ ಬೀಸಿ ಕರೆಯುತ್ತಿದೆ.
ಜಗ ತ್ತಿಗೆ ಶಾಂತಿ,ತ್ಯಾಗ ಮತ್ತು ಅಹಿಂ ಸೆಯ ಸಂದೇ ಶವನ್ನು ಸಾರಿದ ಭಗ ವಾನ್ ಬಾಹು ಬಲಿಯ ಪುಣ್ಯ ಕ್ಷೇತ್ರ ಗಳಲ್ಲಿ ಒಂ ದಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂ ಗಡಿ ತಾಲೂ ಕಿನ ವೇಣೂರು ರಾಜ್ಯದ ಪ್ರಸಿದ್ದ ಜೈನ ತೀರ್ಥ ಕ್ಷೇತ್ರ ಗಳಲ್ಲಿ ಒಂದು. ಕ್ರಿ.ಶ. 1604 ರಲ್ಲಿ ಈ ಪ್ರದೇಶ ದಲ್ಲಿ ಆಳ್ವಿಕೆ ನಡೆಸು ತ್ತಿದ್ದ 4ನೇ ಅಜಿಲರ ಅರಸ ರಾದ ತಿಮ್ಮಣ್ಣಾಜಿಲ ಅರಸರಿಂದ ಪ್ರತಿ ಷ್ಠಾಪಿತವಾದ 35 ಅಡಿ ಎತ್ತರದ ಏಕ ಶಿಲಾ ಗೋಮ ಟೇಶ್ವರ ಮಹಾಮೂರ್ತಿ ಅತೀ ವಿರಳವಾಗಿರುವ ಮಂದಸ್ಮಿತ ಮುಖಮುದ್ರೆಯನ್ನು ಹೊಂದಿದ್ದು, ಜಾತಿ-ಭೇಧವಿಲ್ಲದೆ ಎಲ್ಲಾ ಧರ್ಮಿಯರನ್ನೂ ತನ್ನೆಡೆ ಕೈ ಬೀಸಿ ಕರೆಯುತ್ತಿದೆ.ಎಲ್ಲ ಬಾಹುಬಲಿ ವಿಗ್ರಹಗಳೂ ಗುಡ್ಡ- ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ್ದರೆ, ವೇಣೂರಿನ ಈ ಬಾಹುಬಲಿ ಮೂರ್ತಿ ಮಾತ್ರ ಭೂಮಟ್ಟದಲ್ಲಿಯೇ ಇದೆ. ಆದ್ದರಿಂದ ಸುಲಭದಲ್ಲಿ ಬಾಹುಬಲಿ ದರ್ಶನ ಮಾಡಬಹುದಾದ ಅಪರೂಪದ ಕ್ಷೇತ್ರ ಇದಾಗಿದೆ. ಇಲ್ಲಿ ಶ್ರೀ ಆದೀಶ್ವರ ಸ್ವಾಮಿ ಬಸದಿ, ಶಾಂತೀಶ್ವರ ಸ್ವಾಮಿ ಬಸದಿ, 24 ತೀರ್ಥಂಕರರ ಬಸದಿ, ಅಕ್ಕಂಗಳ ಬಸದಿ, ಭಿನ್ನಾಣಿ ಬಸದಿ ಎಂಬ 7 ಜಿನ ಚೈತ್ಯಾಲಯಗಳಿವೆ.ಈ ಗೋಮ ಟೇಶ್ವರ ಮಹಾ ಮೂರ್ತಿಗೆ 1928, 1956, 2000 ನೇ ಇಸವಿ ಯಲ್ಲಿ ಮಹಾ ಮಸ್ತಕಾ ಭಿಷೇಕ ನಡೆ ದಿದ್ದು,ಇದೀಗ 12 ವರ್ಷಗಳ ತರು ವಾಯ ಮತ್ತೆ ಮಹಾ ಮಸ್ತಕಾ ಭಿಷೇಕ ಸಂಭ್ರಮ.ಮಸ್ತಕಾ ಭಿಷೇ ಕಕ್ಕೆ ಅನು ಕೂಲ ವಾಗು ವಂತೆ ಬಾಹುಬಲಿ ವಿಗ್ರಹದ ಹಿಂಭಾಗದಲ್ಲಿ ಈ ಬಾರಿ ಶಾಶ್ವತ ಅಟ್ಟಳಿಗೆ ರಚಿಸಲು ನಿರ್ಧರಿಸಲಾಗಿದೆ.ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆಯಲ್ಲಿ ಮತ್ತು ಜೈನ ಮುನಿಗಳ ಮಾರ್ಗ ದರ್ಶನದಲ್ಲಿ ಮಹಾ ಮಸ್ತಕಾಭಿಷೇಕ ಕಾರ್ಯ ಕ್ರಮಗಳು ನಡೆಯಲಿದ್ದು, ಪೂರ್ಣ ಕುಂಭ,ಚತುಷ್ಕೋಣ ಕುಂಭ,ಎಳನೀರು, ಹಾಲು, ಕಬ್ಬಿನ ಹಾಲು, ಶ್ರೀಗಂಧ, ಚಂದನ, ಅಷ್ಟಗಂಧ ಮೊದಲಾದವುಗಳಿಂದ ಮಸ್ತಕಾಭಿಷೇಕ ನಡೆಯಲಿದೆ.ವೇಣೂರು ಬಾಹುಬಲಿ ಮೂರ್ತಿಯ ಮಹಾ ಮಸ್ತಕಾಭಿಷೇಕ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ರಾಜ್ಯ ಸರಕಾರದಿಂದ ಎಲ್ಲ ರೀತಿಯ ನೆರವು ನೀಡಲು ಈಗಾಗಲೇ ತೀರ್ಮಾನಿಸಿದೆ. ಜೊತೆಗೆ ರಾಜ್ಯಮಟ್ಟದ ವಸ್ತುಪ್ರದರ್ಶನ, ಧರ್ಮ, ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ, ನಾಟಕ ಮೊದಲಾದ ಕಲಾಪ್ರಕಾರಗಳ ವಿಶೇಷ ಗೋಷ್ಠಿ, ಸಮಾವೇಶ ಕಲಾವೈಭವಗಳನ್ನು ಆಯೋಜಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ವಿದ್ವಾಂಸರು, ಕಲಾವಿದರು, ಸಾಹಿತಿಗಳು ಭಾಗವಹಿಸಿ ಸಾಹಿತ್ಯ ಕಲೆಯ ರಸ ಸಿಂಚನ ಉಣ ಬಡಿಸಲಿದ್ದಾರೆ.