ಮಂಗಳೂರು, ಜೂನ್. 17:ಬಡವರು ಸ್ವಂತ ಸೂರು ಇಲ್ಲದವರು ಜೀವನದ ಮಹಾ ಆಸೆಯಲ್ಲಿ ಮನೆ ಕಟ್ಟಿಕೊಳ್ಳಲು ಅನುಮೋದನೆಗಾಗಿ ಮೂಡಾ ಕಚೇರಿಗೆ ಬಂದರೆ ಅವರನ್ನು ಪ್ರೀತಿ ಪೂರ್ವಕವಾಗಿ ಗೌರವಾದರದಿಂದ ಮಾತನಾಡಿಸಿ, ಅವರ ಕೆಲಸವನ್ನು ಆದಷ್ಟು ಸರಳವಾಗಿ ತ್ವರಿತವಾಗಿ ಮಾಡಿಕೊಡಿ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ನಗರಾಭಿವೃದ್ಧಿ ಖಾತೆ ಸಚಿವ ವಿನಯಕುಮಾರ ಸೊರಕೆ ಕಿವಿಮಾತು ಹೇಳಿದ್ದಾರೆ. ಅವರು ಇಂದು ಬೆಳಿಗ್ಗೆ ನಗರದ ಮೂಡಾ ಕಚೇರಿಯಲ್ಲಿ ಮೂಡಾ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಮೂಡಾ ವತಿಯಿಂದ ಚೇಳ್ಯಾರು,ಮದ್ಯ ಗ್ರಾಮಗಳ ಬಳಿ ಮೂಡಾ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಬಡಾವಣೆಗೆ 200 ಎಕ್ರೆ ಖರೀದಿಸಲು ಜಮೀನು ಖರೀದಿಸಿರುವ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಮೂಡಿರುವುದರಿಂದ ಆ ಬಗ್ಗೆ ಕೂಡಲೇ ತನಿಖೆಗೊಳಪಡಿಸುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಜೆ.ಆರ್. ಲೋಬೋ, ಮೊಯ್ದಿನ್ ಬಾವಾ, ಮೋನಪ್ಪ ಭಂಡಾರಿ, ಜಿಲ್ಲಾಧಿಕಾರಿ ಹಾಗೂ ಮೂಡಾ ಅಧ್ಯಕ್ಷ ಎನ್. ಪ್ರಕಾಶ್ ಮುಂತಾದವರು ಹಾಜರಿದ್ದರು.
ಸಭೆಯಲ್ಲಿ ಶಾಸಕರಾದ ಜೆ.ಆರ್. ಲೋಬೋ, ಮೊಯ್ದಿನ್ ಬಾವಾ, ಮೋನಪ್ಪ ಭಂಡಾರಿ, ಜಿಲ್ಲಾಧಿಕಾರಿ ಹಾಗೂ ಮೂಡಾ ಅಧ್ಯಕ್ಷ ಎನ್. ಪ್ರಕಾಶ್ ಮುಂತಾದವರು ಹಾಜರಿದ್ದರು.