ಮಂಗಳೂರು, ಜೂನ್.10 : ಮುಂಗಾರು ಮಳೆಯ ಅಬ್ಬರಕ್ಕೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೇ 8 ರಂದು ಬೆಳ್ತಂಗಡಿ ತಾಲ್ಲೂಕಿನ ಕೆಯ್ಯುರ್ ಗ್ರಾಮದಲ್ಲಿ ಒಂದು ಮನೆ ಸಂಪೂರ್ಣ ಕುಸಿದಿದ್ದರೆ ಮೇ 9 ರಂದು ಮಂಗಳೂರು ತಾಲೂಕಿನ ಬಜಾಲ್, ಸೋಮೇಶ್ವರ,ಮೂಲ್ಕಿ ಹಾಗೂ ಕಾಟಿಪಳ್ಳದಲ್ಲಿ 4 ಮನೆಗಳು ಭಾಗಶ: ಹಾನಿಗೊಳಗಾಗಿ ಸುಮಾರು 1 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟವುಂಟಾಗಿದೆ.
ಈ ಬಾರಿಯ ಮುಂಗಾರು ಮಳೆ 2013 ರ ಜನವರಿಯಿಂದ 10-6-13 ರ ವರೆಗೆ ಸರಾಸರಿ 444.9 ಮಿಲಿಮೀಟರ್ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 165.4 ಮಿಲಿಮೀಟರ್ ಮಳೆ ಆಗಿತ್ತು. ಈ ವರ್ಷ ಮಂಗಳೂರು ತಾಲೂಕಿನಲ್ಲಿ ಅತೀ ಹೆಚ್ಚು 589.8 ಮಿಲಿಮೀಟರ್ ಮಳೆ ಆಗಿದ್ದರೆ, ಬಂಟ್ವಾಳ ತಾಲೂಕಿನಲ್ಲಿ ಕನಿಷ್ಠ 331.3 ಮಿಲಿಮೀಟರ್ ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 458.0 ಮಿಲಿಮೀಟರ್,ಪುತ್ತೂರಿನಲ್ಲಿ 435.2 ಮಿಲಿಮೀಟರ್ ಹಾಗೂ ಸುಳ್ಯದಲ್ಲಿ 410.0 ಮಿಲಿಮೀಟರ್ ಮಳೆಯಾಗಿದೆ.
10-6-13 ರಂದು ಜಿಲ್ಲೆಯಲ್ಲಿ 19.9 ಮಿಲಿಮೀಟರ್ ಸರಾಸರಿ ಮಳೆಯಾಗಿದ್ದರೆ ಕಳೆದ ವರ್ಷ ಇದೇ ದಿನ 9.8 ಮಿಲಿಮೀಟರ್ನಷ್ಟು ಮಳೆಯಾಗಿತ್ತು. ಜೂನ್ ಮಾಹೆಯಲ್ಲಿ ಜಿಲ್ಲೆಯ ವಾಡಿಕೆ ಮಳೆ 941.8 ಮಿಲಿಮೀಟರ್ ಆಗಿದೆ.ವಾರ್ಷಿಕ ಸರಾಸರಿ ಮಳೆ 3912.2 ಮಿಲಿಮೀಟರ್ ಆಗಬೇಕಾಗಿದೆ.