Saturday, June 29, 2013

ದೇಶದ ಅಭಿವೃದ್ಧಿಗೆ ಸಂಖ್ಯಾ ಶಾಸ್ತ್ರದ ಕೊಡುಗೆ ಅಪಾರ: ಎಂ ಆರ್ ವಾಸುದೇವ್

ಮಂಗಳೂರು, ಜೂನ್. 29: ನಮ್ಮ ಪ್ರಜಾಪ್ರಭುತ್ವ ದೇಶದ ಸಮಗ್ರ ಅಭಿವೃದ್ಧಿ ಯೋಜನೆಯ ಯಶಸ್ವಿಗೆ ಸಂಖ್ಯಾ ಶಾಸ್ತ್ರದ ಕೊಡುಗೆ ಅಪಾರ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿವೃತ್ತ ನಿರ್ದೇಶಕರಾದ ಎಂ ಆರ್ ವಾಸುದೇವ್ ಅವರು ಹೇಳಿದರು.
           ಅವರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಮಿನಿಹಾಲ್ ನಲ್ಲಿ ಆಯೋಜಿಸಲಾದ ಸಂಖ್ಯಾಶಾಸ್ತ್ರದ ಪಿತಾಮಹ ಮಹಾಲನೊಬಿಸ್ ಅವರ 120ನೇ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು.
ಡಾ ಸರ್ ಎಂ ವಿಶ್ವೇಶ್ವರಯ್ಯನವರು ಸಿವಿಲ್ ಇಂಜಿನಿಯರಿಂಗ್ ವೃತ್ತಿಗೆ ತಂದುಕೊಟ್ಟ ಗೌರವವನ್ನು ಪ್ರೊ. ಪ್ರಶಾಂತ್ಚಂದ್ರ ಮಹಲನೊಬಿಸ್ ಅವರು ಸಂಖ್ಯಾಶಾಸ್ತ್ರಕ್ಕೆ ತಂದುಕೊಟ್ಟಿದ್ದು ನಮ್ಮ ಪಂಚವಾರ್ಷಿಕ ಯೋಜನೆಗಳಲ್ಲಿ ಸಂಖ್ಯಾಶಾಸ್ತ್ರದ ಕೊಡುಗೆ ಅನನ್ಯ ಎಂದು ಅವರು ಹೇಳಿದರು. ಅಭಿವೃದ್ಧಿಯನ್ನು ರೂಪಿಸಲು ಮೂಲ ಅಂಕಿ ಸಂಖ್ಯೆಗಳು. ಸಮಗ್ರ ಹಾಗೂ ಅಧಿಕೃತ ಡಾಟಾ ಸಂಗ್ರಹದಿಂದ ಉತ್ತಮ ಅಭಿವೃದ್ಧಿಯ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದ ಅವರು,  ಈ ಕ್ಷೇತ್ರದಲ್ಲಿ ತಮ್ಮ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು. ದೇಶದ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಹೇಗೆ ಅಭಿವೃದ್ಧಿ ಸಾಧಿಸಬಹುದು; ಅದು ಕೈಗಾರಿಕೆಗಳ ಮೂಲಕ, ಕೃಷಿಯ ಮೂಲಕ, ಉದ್ಯೋಗ ಸೃಷ್ಟಿಯ ಮೂಲಕ ಇದರಿಂದ ದೇಶದ ಆಥರ್ಿಕ ಅಭಿವೃದ್ಧಿಗೆ ದೊರೆಯಬಹುದಾದ ಕೊಡುಗೆಗಳನ್ನು ಸಂಖ್ಯಾಶಾಸ್ತ್ರದ ಮೂಲಕ ಮಹಲನೊಬಿಸ್ ಅನುಷ್ಠಾನಕ್ಕೆ ತಂದರು. ಯೋಜನೆ, ಸಂಘಟನೆ ಮತ್ತು ಅನುಷ್ಠಾನಕ್ಕೆ ಅಂಕಿ ಅಂಶಗಳ ಇಲಾಖೆ ಅಗತ್ಯ ಎಂದರು.
ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಂಖ್ಯಾಶಾಸ್ತ್ರದ ಪ್ರಾಮ್ಯುಖತೆ ಹಾಗೂ ಪ್ರಾಥಮಿಕ ಅಂಕಿಅಂಶಗಳ ಅಗತ್ಯ ಹಾಗೂ ಇಲ್ಲಿ ಮಾಡಲ್ಪಡುವ ಸಣ್ಣ ತಪ್ಪುಗಳಿಂದ ಆಗುವ ಅನಾಹುತಗಳ ಬಗ್ಗೆಯೂ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದರೂ ಸಂಖ್ಯಾಶಾಸ್ತ್ರದ ಅಧ್ಯಯನ, ಅಗತ್ಯ ಹಾಗೂ ಅವಕಾಶಗಳಿಗೆ ಮಹಲನೊಬಿಸ್ ಅವರು ವಿಶೇಷ ಸ್ಥಾನಮಾನ ರೂಪಿಸಿದ್ದು ಅದಕ್ಕಾಗಿ ಅವರಿಗೆ ನಾವು ಕೃತಜ್ಞರಾಗಿರಬೇಕು ಎಂದು ಅವರು ನುಡಿದರು. ದೇಶದಲ್ಲಿ ಇಂಡಿಯನ್ ಸ್ಟಾಟಿಸ್ಟಿಕಲ್ ಸವರ್ಿಸ್ ಆರಂಭಿಸಲು ಪ್ರೇರಪಣೆ ಮಹಲನೊಬಿಸ್ ಎಂದು ಅವರು ನುಡಿದರು.
ಮುಖ್ಯ ಅತಿಥಿಗಳಾಗಿದ್ದ ರಾಷ್ಟ್ರೀಯ ಮಾದರಿ ಸಮೀಕ್ಷೆಯ ಮುಖ್ಯಸ್ಥರಾದ  ಪಿ. ಆನಂದ ಅವರು ಸಂಖ್ಯಾಶಾಸ್ತ್ರಕ್ಕೆ ಸಂಬಂಧ ಪಟ್ಟಂತೆ ತಮ್ಮ ಇಲಾಖೆಯ ಕಾರ್ಯವೈಖರಿಗಳನ್ನು ಪರಿಚಯಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಹಮ್ಮದ್ ನಜೀರ್ ಅಧ್ಯಕ್ಷತೆ ವಹಿಸಿದ್ದರು. ಟಿ ಜೆ ತಾಕತ್ ರಾವ್ ಮುಖ್ಯ ಅತಿಥಿಗಳಾಗಿದ್ದರು. ಶ್ರೀಮತಿ ಸಂಧ್ಯಾ, ಯೋಜನೆ ಮತ್ತು ಮೌಲ್ಯಮಾಪನ ಅನುಷ್ಠಾನಾಧಿಕಾರಿ ನಾಗೇಂದ್ರ ಅವರು ಸಮಾರಂಭದಲ್ಲಿದ್ದರು. ಅಂಕಿ ಸಂಖ್ಯೆ ಇಲಾಖೆ ಇತರೆ ಅಧಿಕಾರಿಗಳು, ಸಿಬ್ಬಂದಿಗಳು, ಉಪನ್ಯಾಸಕರು ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಉಜಿರೆ ಎಸ್ ಡಿ ಎಂ ನ ವಿದ್ಯಾರ್ಥಿ ಪ್ರಥಮ ಬಹುಮಾನ ಪಡೆದರೆ, ಬೆಸೆಂಟ್ ಮತ್ತು ಉಜಿರೆಯ ವಿದ್ಯಾರ್ಥಿಗಳು ದ್ವಿತೀಯ ಬಹುಮಾನವನ್ನು ಹಂಚಿಕೊಂಡರು. ತೃತೀಯ ಬಹುಮಾನವನ್ನು ಸಂತ ಅಲೋಷಿಯಸ್ ಕಾಲೇಜಿನ ವಿದ್ಯಾರ್ಥಿನಿ ತನ್ನದಾಗಿಸಿಕೊಂಡಳು. ಪ್ರದೀಪ್ ಡಿ ಸೋಜಾ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಗಣಪತಿ ಭಟ್ ವಂದಿಸಿದರು.