ಮಂಗಳೂರು, ಜೂನ್.19:- ರಾಜ್ಯ ಸರ್ಕಾರ ಗೃಹ ಸಚಿವಾಲಯವನ್ನು ಸಬಲಗೊಳಿಸಲು ಖಾಲಿ ಇರುವ 19,000 ಹುದ್ದೆಗಳನ್ನು ತುಂಬಲು ನಿರ್ಧರಿಸಿದ್ದು, ಪ್ರಥಮ ಹಂತದಲ್ಲಿ 8,000 ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಂಡಿದೆ ಎಂದು ರಾಜ್ಯ ಗೃಹಸಚಿವ ಕೆ ಜೆ ಜಾರ್ಜ್ ಹೇಳಿದರು.
ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲಾಖಾ ಪ್ರಗತಿ ಪರಿಶೀಲನೆ ಬಳಿಕ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹುದ್ದೆ ಭರ್ತಿ ವೇಳೆ ಇಲಾಖೆಯಲ್ಲಿ ಶೇಕಡ 20ರಷ್ಟು ಹುದ್ದೆಯನ್ನು ಮಹಿಳೆಯರಿಗೆ ಮೀಸಲಿರುಸುವಲ್ಲೂ ಮುತುವರ್ಜಿ ವಹಿಸಲಿದೆ ಎಂದರು.ಉದ್ಯೋಗ ನೇಮಕಾತಿ ಸಂದರ್ಭದಲ್ಲಿ ಬುಡಕಟ್ಟು ವರ್ಗದವರಿಗೂ ಆದ್ಯತೆ ನೀಡಲು ಕ್ರಮವಹಿಸಲಾಗುವುದು ಎಂದರು.
ಪೊಲೀಸ್ ಇಲಾಖೆಯನ್ನು ಅತ್ಯಾಧುನಿಕ ಗೊಳಿಸಲು ಕ್ರಮಕೈಗೊಳ್ಳಲಾಗುವುದು. ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪೊಲೀಸರ ವಸತಿಗೃಹವನ್ನು ಈ ಸಾಲಿನಲ್ಲಿ 5,000 ಮನೆಗಳನ್ನು ನಿರ್ಮಿಸಲಾಗುವುದು. ಸಿಬ್ಬಂದಿಗಳಿಗೆ ಆರೋಗ್ಯ ಭಾಗ್ಯ ಮತ್ತು ಕೌಶಲ್ಯ ತರಬೇತಿ ನೀಡಲು ಸರ್ಕಾರ ಯೋಜಿಸಿದೆ ಎಂದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೂ ಮಂತ್ರಿಗಳು ಸೇರಿದಂತೆ ಕಾನೂನು ಚೌಕಟ್ಟು ಮೀರಿ ಕೆಲಸ ಮಾಡಲು ಅವಕಾಶವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದು; ದೇಶದ ಸಂವಿಧಾನ ಹಾಗೂ ಕಾನೂನು ಪಾಲನೆ ಎಲ್ಲರ ಕರ್ತವ್ಯ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ನಕ್ಸಲ್ ರು ಮುಖ್ಯ ವಾಹಿನಿಗೆ ಬರಲು ವೇದಿಕೆ ಒದಗಿಸಲಾಗುವುದು. ಇಲಾಖೆಯನ್ನು ಬಲಪಡಿಸಿ ಕಾನೂನು ಸುವ್ಯಸ್ಥೆಯ ಮೂಲಕ ಅಭಿವೃದ್ಧಿಯ ಬುನಾದಿಯನ್ನು ಸ್ಥಿರ ಪಡಿಸಲಾಗುವುದು. ಪತ್ರಿಕಾಗೋಷ್ಟಿಯಲ್ಲಿ ಪೊಲೀಸ್ ಮಹಾನಿರೀಕ್ಷಕ ಪಶ್ಚಿಮ ವಲಯ ಪ್ರತಾಪ್ ರೆಡ್ಡಿ, ಕಮಿಷನರ್ ಮನಿಷ್ ಕರ್ಬಿಕರ್, ಎಸ್ ಪಿ ಅಭಿಷೇಕ್ ಗೋಯಲ್ ಉಪಸ್ಥಿತರಿದ್ದರು.