ಮಂಗಳೂರು, ಜೂನ್. 15:- ಸಾಮಾನ್ಯವಾಗಿ ಜನರು ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆ ಎಂದರೆ ಅನುಮಾನದಿಂದ ದೂರ ಉಳಿಯುತ್ತಾರೆ. ಆದ್ದರಿಂದ ಅವರಲ್ಲಿ ವಿಶ್ವಾಸ ತುಂಬುವ, ಪ್ರೀತಿ ಸೌಹಾರ್ದಮಯ ಪರಿಸರ ನಿರ್ಮಾಣದ ಅಗತ್ಯ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿರಬೇಕೆಂದು ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.
ಅವರು ಇಂದು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ, ಡೆಂಗಿ ಹಾಗೂ ಮಲೇರಿಯಾ ರೋಗ ಹರಡದಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನಗೋಪಾಲ ಅವರೊಂದಿಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.
ವೆನ್ಲಾಕ್ ಆಸ್ಪತ್ರೆಯಲ್ಲಿ ವೆಂಟಿಲೇಷನ್(ಜೀವರಕ್ಷಕ ಕೃತಕ ಉಸಿರಾಟ) ಸೌಲಭ್ಯ ಹೆಚ್ಚ್ಚಿಸುವುದು` ಡಿ' ಗ್ರೂಪ್ ಹಾಗೂ ನಸರ್್ಗಳನ್ನು ನೇಮಕಾತಿ ಮಾಡಿಕೊಳ್ಳಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಬಿಪಿಎಲ್ ಕಾಡರ್್ ರೋಗಿಗಳಿಗೆ ಸರ್ಕಾರದಿಂದ ಸರಬರಾಜಿಲ್ಲದ ಔಷಧಿಗಳನ್ನು ಹೊರಗಡೆಯಿಂದ ತರಿಸಿದಲ್ಲಿ ಅದರ ವೆಚ್ಚವನ್ನು ಮರುಪಾವತಿಸುವಂತೆ ಸೂಚಿಸಿದರು. ಲೇಡಿಗೋಷನ್ ಆಸ್ಪತ್ರೆಯಲ್ಲಿ ರೂ.10 ಕೋಟಿಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ರೇಡಿಯೋಥೆರಪಿ ಚಿಕಿತ್ಸಾ ಘಟಕ ಆರಂಭಿಸಲಾಗುವುದೆಂದರು.
ಸಭೆಯಲ್ಲಿ ಜಿಲ್ಲಾ ಪ್ರಭಾರ ಸರ್ಜನ್ ಡಾ.ಈರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓ.ಆರ್.ಶ್ರೀರಂಗಪ್ಪ, ಆರೋಗ್ಯ ಇಲಾಖೆ ಆಯುಕ್ತ ವಿಜಯಕುಮಾರ್ ಜೋಗಿ ಮುಂತಾದವರು ಉಪಸ್ಥಿತರಿದ್ದರು.