ಮಂಗಳೂರು, ಜೂನ್. 11 : ಆರೋಗ್ಯ ಇಲಾಖೆಯೊಂದಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ,ಕೃಷಿ ,ಕಾರ್ಮಿಕ ಕಲ್ಯಾಣ, ಕೈಗಾರಿಕಾ ಇಲಾಖೆ, ಶಿಕ್ಷಣ ಇಲಾಖೆಗಳು ಕೈಜೋಡಿಸಿ ಜಿಲ್ಲೆಯಲ್ಲಿ ಡೆಂಗ್ಯು ಜ್ವರವನ್ನು ನಿಯಂತ್ರಿಸಲು ಎಲ್ಲರೂ ನೆರವಾಗಬೇಕೆಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಅವರು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.
ಅವರು ಈ ಸಂಬಂಧ ತಮ್ಮ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣ ಇಲಾಖೆ ವತಿಯಿಂದ ಶಿಕ್ಷಕರಿಗೆ ಡೆಂಗ್ಯು ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಪ್ರತಿನಿತ್ಯ ಜಿಲ್ಲೆಯ ಎಲ್ಲಾ ಸಕರ್ಾರಿ,ಖಾಸಗಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಪ್ರತಿಜ್ಞೆಯನ್ನು ಬೋಧಿಸುವುದಲ್ಲದೆ, ಅವರ ಕುಟುಂಬ ಅಥವಾ ಅಕ್ಕಪಕ್ಕದ ಮನೆಗಳಲ್ಲಿ ಡೆಂಗ್ಯು ಜ್ವರದ ಲಕ್ಷಣವುಳ್ಳವರ ಬಗ್ಗೆ ಮಾಹಿತಿ ಇದ್ದಲ್ಲಿ, ಅದನ್ನು ತಮ್ಮ ಶಾಲಾ ಶಿಕ್ಷಕರಲ್ಲಿ ತಿಳಿಸುವಂತೆ ಹಾಗೂ ಶಿಕ್ಷಕರು ತಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ಒದಗಿಸುವಂತೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸೂಚಿಸಿದ್ದಾರೆ. ಜಿಲ್ಲೆಯ ಎಲ್ಲಾ ಸಕರ್ಾರಿ ವಿದ್ಯಾಥರ್ಿ ನಿಲಯಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ, ಮಕ್ಕಳು ಸೊಳ್ಳೆ ಪರದೆಗಳನ್ನು ಬಳಸುವಂತೆ ಎಚ್ಚರ ವಹಿಸಲು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿಗಳಿಗೆ ಸೂಕ್ತ ಕ್ರಮಗಳನ್ನು ವಹಿಸುವಂತೆ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗನವಾಡಿ ಮಕ್ಕಳಿಗೆ ಕಡ್ಡಾಯವಾಗಿ ಮೈಮುಚ್ಚುವಂತಹ ಬಟ್ಟೆಗಳನ್ನು ಧರಿಸಿ ಬರುವಂತೆ ಅವರ ಪೋಷಕರಲ್ಲಿ ತಿಳಿಸುವುದು,ಎಲ್ಲಾ ಕೇಂದ್ರಗಳ ಕಿಟಿಕಿ ಬಾಗಿಲುಗಳಿಗೆ ಸೊಳ್ಳೆ ತಡೆಮೆಷ್ಗಳನ್ನು ಕೂಡಲೇ ಅಳವಡಿಸುವಂತೆ ಸೂಚಿಸಿದರು.
ವಿಶೇಷ ಗ್ರಾಮಸಭೆಗಳಲ್ಲಿ ಡೆಂಗ್ಯು ಜ್ವರದ ತೀವ್ರತೆಯ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವುದಲ್ಲದೆ ಡೆಂಗ್ಯುವಿನಿಂದ ತಮ್ಮನ್ನು ರಕ್ಷಿಸಿಕೊಂಡು ಇತರರನ್ನು ರಕ್ಷಿಸುವಂತೆ ಗ್ರಾಮೀಣ ಪ್ರದೇಶದ ಜನರ ಮನವೊಲಿಸಲು ಕೃಷಿ, ಕಂದಾಯ ಇಲಾಖೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮುಂದಾಗಬೇಕೆಂದರು. ಸ್ವಚ್ಚತೆ ಆರೋಗ್ಯ ಹಾಗೂ ನೈರ್ಮಲ್ಯ ಪ್ರತಿಯೊಬ್ಬರ ವೈಯಕ್ತಿಕ ಹಾಗೂ ಸಮುದಾಯಿಕ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ಜನರು ಜಾಗೃತರಾಗಬೇಕೆಂದರು.
ಡೆಂಗ್ಯು ಜ್ವರ ಸಾಂಕ್ರಾಮಿಕ ರೋಗವಾಗಿರುವುದರಿಂದ ಸಮರೋಪಾದಿಯಲ್ಲಿ ಎಲ್ಲರೂ ಕೂಡಿ ಕಾರ್ಯ ಪ್ರವೃತ್ತರಾದರೆ ಮಾತ್ರ ಡೆಂಗ್ಯುವನ್ನು ತಡೆಯಲು ಸಾಧ್ಯ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಆರೋಗ್ಯ ಇಲಾಖಾ ವೈದ್ಯಾಧಿಕಾರಿಗಳ ಜೊತೆಗೆ ತಾಲೂಕು ಮಟ್ಟದ ಆರೋಗ್ಯ ಇಲಾಖಾ ಅಧಿಕಾರಿಗಳಾದ ಡಾ.ಅರುಣ್ ಕುಮಾರ್ ಸುಳ್ಯ, ಡಾ.ರಾಜೇಶ್,ಪುತ್ತೂರು,ಡಾ.ರಾಮಕೃಷ್ಣ ರಾವ್ ಪುತ್ತೂರು, ಡಾ.ಕಿಶೋರ್ ಬಂಟ್ವಾಳ ಹಾಗೂ ಡಾ.ರುಕ್ಮಿಣಿ ಇವರನ್ನು ಮಂಗಳೂರು ಗ್ರಾಮಾಂತರಕ್ಕೆ ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓ.ಆರ್. ಶ್ರೀರಂಗಪ್ಪ ತಿಳಿಸಿದ್ದಾರೆ.
ಡೆಂಗ್ಯು ಜ್ವರ ಜಿಲ್ಲೆಯ ಸುಳ್ಯ, ಪುತ್ತೂರು, ಬಂಟ್ವಾಳ ತಾಲೂಕುಗಳಲ್ಲಿ ತೀವ್ರ ಸ್ವರೂಪದಲ್ಲಿರುವುದರಿಂದ ಸಾರ್ವಜನಿಕರು ಡೆಂಗ್ಯು ಬಗ್ಗೆ ಜಾಗೃತಿ ವಹಿಸುವಂತೆ ಡಾ.ಶ್ರೀರಂಗಪ್ಪ ತಿಳಿಸಿದ್ದಾರೆ.
ಸಭೆಯಲ್ಲಿ ಯೋಜನಾಧಿಕಾರಿ ನಜೀರ್ ,ಮಂಗಳೂರು ಮಹಾನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ಸುದರ್ಶನ್ ಮುಂತಾದವರು ಹಾಜರಿದ್ದರು.