ಮಂಗಳೂರು, ಜೂನ್.10:ಕರ್ನಾಟಕ ಸರ್ಕಾರ ಅಧಿಸೂಚನೆಯೊಂದನ್ನು ಹೊರಡಿಸಿದ್ದು,ಅದರಂತೆ ಇನ್ನು ಮುಂದೆ
ಸರ್ಕಾರದ ಕಂದಾಯ ಅಧಿಕಾರಿಗಳು ಪೋಲೀಸ್ ಅಧಿಕಾರಿಗಳ ವಾಹನದ ಮೇಲಿನ ಕೆಂಪು ದೀಪ
ಬಳಸುವಂತಿಲ್ಲ ಎಂಬುದಾಗಿ ಆದೇಶಿಸಿ ಹೊರಡಿಸಿದ ಆದೇಶಾನುಸಾರ ದಕ್ಷಿಣಕನ್ನಡ
ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರು ಇಂದು ತಮ್ಮ ಅಧಿಕೃತ ವಾಹನದ ಮೇಲಿನ ಕೆಂಪು
ದೀಪವನ್ನು ತೆಗೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಗಣ್ಯ/ಅತೀ ಗಣ್ಯ ಸರ್ಕಾರಿ ಅಧಿಕಾರಿಗಳ ಅಧಿಕೃತ ವಾಹನಗಳ ಮೇಲೆ ಕೆಂಪು ದೀಪ ಉಪಯೋಗಿಸುವ ಸಂಬಂಧ ಮಾನ್ಯ ಸವೋಚ್ಚ ನ್ಯಾಯಾಲಯವು ಪ್ರಕರಣವೊಂದರಲ್ಲಿ ನೀಡಿರುವ ಆದೇಶದ ಹಿನ್ನಲೆಯಲ್ಲಿ ಇಲ್ಲಿಯವರೆಗೂ ಈ ಸಂಬಂಧ ಹೊರಡಿಸಲಾದ ಅಧಿಸೂಚನೆಗಳನ್ನು ಹಿಂದಕ್ಕೆ ಪಡೆದು ಈ ಕೆಳಕಂಡ ಪ್ರತಿಷ್ಠಿತ ವ್ಯಕ್ತಿಗಳ ಅಧಿಕೃತ ವಾಹನಗಳ ಮೇಲೆ ಮಾತ್ರ ವಿಐಪಿ ರೆಡ್ಟಾಪ್ ಲೈಟ್ ಬಳಸಲು ಕರ್ನಾಟಕ ಸರ್ಕಾರವು ಈ ಮೂಲಕ ನಿರ್ಧಿಷ್ಟ ಪಡಿಸಿ ಅಧಿಸೂಚನೆ ಹೊರಡಿಸಿದೆ.
ಗೌರವಾನ್ವಿತ ರಾಜ್ಯಪಾಲರು ,ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಅವರ ಮಂತ್ರಿ ಮಂಡಲದ ಸಚಿವರುಗಳು ಮಾನ್ಯ ಸಭಾಪತಿ ಕರ್ನಾಟಕ ವಿಧಾನ ಪರಿಷತ್ ಹಾಗೂ ವಿಧಾನಸಭೆ ಸಭಾಧ್ಯಕ್ಷರು,ಗೌರವಾನ್ವಿತ ಮುಖ್ಯ ನ್ಯಾಯಾಧೀಶರು ಹಾಗೂ ಹಾಲಿ ನ್ಯಾಯಾಧೀಶರುಗಳು ಕರ್ನಾಟಕ ಉಚ್ಚ ನ್ಯಾಯಾಲಯ ಇವರನ್ನು ಹೊರತು ಪಡಿಸಿ ಸಚಿವರುಗಳ ಸಮಾನ ಸ್ಥಾನಮಾನ ಹೊಂದಿರುವ ನಿಗಮ/ಮಂಡಳಿ/ಪ್ರಾಧಿಕಾರಗಳ ಅಧ್ಯಕ್ಷರು/ಮುಖ್ಯಸ್ಥರು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಸಮಾನ ಸ್ಥಾನಮಾನ ಹೊಂದಿರುವ ನ್ಯಾಯಮಂಡಳಿ/ಆಯೋಗಗಳ ಅಧ್ಯಕ್ಷರುಗಳು /ಸದಸ್ಯರುಗಳು ತಮ್ಮ ಅಧಿಕೃತ ವಾಹನಗಳ ಮೇಲೆ ಕೆಂಪು ದೀಪ ಅಳವಡಿಸಿಕೊಳ್ಳುವಂತಿಲ್ಲ.ಇದೇ ರೀತಿ ಕಂದಾಯ ಹಾಗೂ ಪೋಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿಗಳು ಮತ್ತು ಇತರೇ ಗಣ್ಯರು ತಮ್ಮ ಅಧಿಕೃತ ವಾಹನಗಳ ಮೇಲೆ ಕೆಂಪು ದೀಪ ಅಳವಡಿಸಿಕೊಳ್ಳುವಂತಿಲ್ಲ.
ಪ್ರತಿಷ್ಠಿತ ವ್ಯಕ್ತಿಗಳ ಭದ್ರತೆಗೆ ಉಪಯೋಗಿಸುವ ಪೋಲೀಸ್ ಎಸ್ಕಾರ್ಟ್ ವಾಹನಗಳು ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 108(3)ರನ್ವಯ ನೀಲಿ ಬಣ್ಣದ ದೀಪ ಅಳವಡಿಸಿಕೊಳ್ಳತಕ್ಕದ್ದು ಎಂದು ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಬಿರೇಶ್ ಅವರು ತಿಳಿಸಿದ್ದಾರೆ.