ಮಂಗಳೂರು, ಜೂನ್.15: ಸಾಮಾಜಿಕ ಭದ್ರತಾ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಕರ್ತವ್ಯವನ್ನು ಮಾನವೀಯತೆಯೊಂದಿಗೆ ನಿರ್ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವ ರಮಾನಾಥ ರೈ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ಪ್ರಗತಿ ಪರಿಶೀಲನೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅರ್ಹ ಫಲಾನುಭವಿಗಳಿಗೆ ಪ್ರತೀ ತಿಂಗಳು ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ವೇತನ ವಿತರಣೆಯಾಗಬೇಕು. ಯೋಜನೆಯಡಿ ವಿವಿಧ ಕಾರಣಗಳಿಂದ ವಂಚಿತರಾದವರಿಗೆ ಮತ್ತೆ ಮರುಪರಿಶೀಲನೆ ನಡೆಸಿ ದೂರುಗಳು ಸಚಿವರ ಬಳಿ ಬಾರದ ಹಾಗೆ ಕ್ರಮ ವಹಿಸಬೇಕು ಎಂದು ಸಚಿವರು ನುಡಿದರು.
ಜಿಲ್ಲೆಯಲ್ಲಿ ಮೇ 2013ರಂತೆ ವೃದ್ದಾಪ್ಯ ವೇತನ -5229, ವಿಧವಾ ವೇತನ 26948, ಅಂಗವಿಕಲ ವೇತನ (40%) 9199, ಅಂಗವಿಕಲ ವೇತನ (75%) 5823, ಸಂಧ್ಯಾ ಸುರಕ್ಷಾ ವೇತನ 24726 ಒಟ್ಟು 71925 ಪಿಂಚಣಿ ಪಾವತಿಸಲಾಗಿದೆ ಎಂಬ ಮಾಹಿತಿಯನ್ನು ಅಪರ ಜಿಲ್ಲಾಧಿಕಾರಿ ಶ್ರೀ ದಯಾನಂದ ಕೆ ಎ ಅವರು ಮಾಹಿತಿ ನೀಡಿದರು.
ಸರಕಾರದ ಹೊಸ ಮಂಜೂರಾತಿ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 15947 ಫಲಾನುಭವಿಗಳಿಗೆ ವೇತನ ನೀಡಲಾಗಿದೆ ಎಂದರು.
ಪಡಿತರ ವಿತರಣೆಗೆ ಸಂಬಂಧಿಸಿದಂತೆಈಗಾಗಲೇ ಎದುರಿಸುತ್ತಿರುವ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಆಹಾರ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದ್ದು, ಹೊಸ ಕಾರ್ಡ್ ಮಾಡುವ ಸಂದರ್ಭದಲ್ಲಿ ಬಿಪಿಎಲ್ ಕಾಡ್ರ್ ನವರಿಗೆ ಆದ್ಯತೆ ನೀಡಲಾಗುವುದು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೊಸ ಸಾಫ್ಟ್ ವೇರ್ ಮತ್ತು ಫ್ರಾಂಚೈಸಿಗಳನ್ನು ಹೆಚ್ಚಿಸಲು ಒಪ್ಪಿದ್ದು, ಎನ್ ಐ ಸಿ ಅಧಿಕಾರಿಗಳು ನಿನ್ನೆಯಿಂದಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. 203 ಗ್ರಾಮಪಂಚಾಯತಿಗಳಲ್ಲಿ ಮತ್ತು 52 ಸರ್ವಿಸ್ ಸೆಂಟರ್ ಗಳಲ್ಲಿ ಪಡಿತರ ಕಾರ್ಡ್ ನೀಡಲು ನಿರ್ಧರಿಸಲಾಗಿದೆ ಎಂದು ಉಪನಿರ್ದೇಶಕರು ವಿವರಿಸಿದರು.
ಜುಲೈ 10ರಂದು ರಾಜ್ಯ ಸರ್ಕಾರದ ಮಹತ್ವಪೂರ್ಣ ಯೋಜನೆಯಾದ ಕೆಜಿಗೆ ಒಂದು ರೂ. ವಿನಂತೆ ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ವಿತರಿಸಲು 7,000 ಟನ್ ಅಕ್ಕಿ ಸಂಗ್ರಹಿಸಲಾಗಿದ್ದು, ಹೆಚ್ಚುವರಿ ಗೋಡೌನ್ ನ್ನ್ನು ಸಜ್ಜುಗೊಳಿಸಲಾಗಿದೆ.ಹೊಸದಾಗಿ 6981 ಒಟ್ಟು ಕೋರಿದ ಕಾರ್ಡುಗಳಲ್ಲಿ 6900 ಕಾರ್ಡು ನೀಡಲಾಗಿದೆ.
ಮಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ನೇತ್ರಾವತಿ ನದಿಗೆ ತುಂಬೆ ಬಳಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಪ್ರಥಮ ಹಂತದಲ್ಲಿ 40 ಕೋಟಿ ರೂ. ಆಗಿದ್ದು, ಮುಳುಗಡೆ ಪ್ರದೇಶದ ಬಗ್ಗೆ ಮಾಹಿತಿ ಕೊರತೆ ಇರುವುದರಿಂದ ಜನರಲ್ಲಿ ಅಭದ್ರತೆ ಭಯ ಉಂಟಾಗಿದೆ. ಹಾಗಾಗಿ ಈ ಪ್ರದೇಶದ ಜನರಿಗೆ ಸಮಗ್ರ ಮಾಹಿತಿ ಹಾಗೂ ಪರಿಹಾರ ನೀಡುವ ಬಗ್ಗೆ ಯೋಜನೆ ರೂಪಿಸಿ ಎಂದು ಉಸ್ತುವಾರಿ ಸಚಿವರು ಸೂಚನೆ ನೀಡಿದರು.
ಐದು ಹಳ್ಳಿಗಳ 216.27 ಎಕರೆ ಮುಳುಗಡೆ ಯಾಗಲಿದ್ದು, 168 ಖಾಸಗಿ ಹಾಗೂ 48 ಎಕರೆ ಎಂದು ಗುರುತಿಸಲಾಗಿತ್ತು. ಆದರೆ ಆಗ ಜನರ ಪ್ರತಿಭಟನೆಯಿಂದ ಮರು ಸಮೀಕ್ಷೆ ಮಾಡಿದ್ದು, ಆ ಪ್ರಕಾರ 6 ಗ್ರಾಮಗಳ 358 ಎಕರೆ ಪ್ರದೇಶ ಮುಳುಗಡೆಯಾಗಲಿದೆ ಹಾಗೂ ಕಲ್ಲು ನೆಡಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಸಭೆಗೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಯಾವುದೇ ಕಾರಣಕ್ಕೂ ಯೋಜನೆ ದಿಕ್ಕು ತಪ್ಪಬಾರದು ಜನರನ್ನು ದಾರಿತಪ್ಪಿಸಬಾರದು ಎಂದು ಎಚ್ಚರಿಕೆ ನೀಡಿದರು. ಕಾಮಗಾರಿ ಉಸ್ತುವಾರಿ ಮಂಡಳಿಗೆ ವಹಿಸಲಾಗಿದ್ದು, ಜನರಿಗೆ ಪರಿಹಾರವನ್ನು ಕಾಪರ್ೊರೇಷನ್ನವರು ನೀಡಲಿರುವರು. ಈಗಾಗಲೇ ಅಣೆಕಟ್ಟು ಕೆಲಸವನ್ನು ಎರಡೂವರೆ ವರ್ಷಗಳಿಂದ ಆರಂಭಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಸಮಗ್ರವಾಗಿ ಯೋಜನೆ ರೂಪಿಸಿ ಪರಿಹಾರದ ಯೋಜನೆಯೂ ಸಮಗ್ರವಾಗಿರಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿ, ಕಂದಾಯ ಇಲಾಖೆ ವ್ಯವಸ್ಥೆ ಶೋಚನೀಯವಾಗಿದ್ದು, ಅಜರ್ಿ ಕೊಟ್ಟು 180 ದಿವಸಗಳಾದರೂ ಮ್ಯುಟೇಷನ್ ಅರ್ಜಿ ವಿಲೇ ಆಗುತ್ತಿಲ್ಲ ಎಂದರು. ಈ ಬಗ್ಗೆ ಕಂದಾಯ ಕಾರ್ಯದರ್ಶಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳು ವಿಶೇಷ ಸಭೆ ನಡೆಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಮಡಿಕೇರಿಯ ವಿಶೇಷ ಸಮಸ್ಯೆಗಳನ್ನು ತಿಳಿಸಿ ಪರಿಹರಿಸಬೇಕಿದೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ನಗರಾಭಿವೃದ್ಧಿ ಹಾಗೂ ನಗರೋತ್ಥಾನ ಯೋಜನೆಗಳ ಬಗ್ಗೆ ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಸೋಮವಾರ ನಡೆಯಲಿರುವುದು. ಬಂಟ್ವಾಳ ಹಾಗೂ ಮೂಡಬಿದ್ರೆ ಸೇರಿದಂತೆ ಘನತ್ಯಾಜ್ಯ ವಿಲೇಗೆ 2 ತಿಂಗಳ ಗಡುವನ್ನು ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು, ಯಾವುದೇ ಸಬೂಬು ನೀಡದೆ ಘನತ್ಯಾಜ್ಯ ವಿಲೇಗೆ ಕ್ರಮಕೈಗೊಳ್ಳಬೇಕೆಂದರು.
ಘನತ್ಯಾಜ್ಯ ವಿಲೇಗೆ ಸಂಬಂಧಿಸಿದಂತೆ ಇಂತಹ ಯೋಜನೆಗಳ ವೇಳೆ ನಿಷ್ಠುರ ಕ್ರಮದ ಅಗತ್ಯವಿದೆ ಎಂದು ಯುವಜನಸೇವೆ ಮತ್ತು ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್ ಹೇಳಿದರು. ಲೋಕೋಪಯೋಗಿ ಇಲಾಖೆ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ರಸ್ತೆ ಹಾಗೂ ಸೇತುವೆ ಅಭಿವೃದ್ಧಿ ಕಾಮಗಾರಿ ಸಮಾಧಾನಕರವಾಗಿಲ್ಲ ಎಂದರು. ಇಲಾಖೆಯು ಕಾರಣಗಳನ್ನು ಹೇಳದೆ ಕಾರ್ಯನಿರ್ವಹಿಸಬೇಕು. ಮಾತೃ ಇಲಾಖೆ ಇದಾಗಿದ್ದು, ಇತರರಿಗೆ ಮಾದರಿಯಾಗಿರಬೇಕು; ಕಾಮಗಾರಿ ಗುಣಮಟ್ಟ ಹಾಗೂ ಕಾರ್ಯವೈಖರಿ ತೃಪ್ತಿಕರವಾಗಿಲ್ಲ ಎಂದರು.
ಕೋರ್ಟ್ ಕಾಮಗಾರಿ ಹಾಗೂ ಅದರ ಅಪ್ರೋಚ್ ರಸ್ತೆ ಬಗ್ಗೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿ ಸೂಕ್ತ ಮೂಲಭೂತ ವ್ಯವಸ್ಥೆ ಇಲ್ಲದೆ ಅತ್ಯಂತ ದೊಡ್ಡ ಬಿಲ್ಡಿಂಗ್ ಕಟ್ಟುವ ಬಗ್ಗೆ ಉಸ್ತುವಾರಿ ಸಚಿವರ ಗಮನಕ್ಕೆ ತಂದರು. ಕೋಟಿಗಟ್ಟಲೆ ಹಣ ವ್ಯಯಿಸಿ ಬರೀ ಕಟ್ಟಡ ನಿರ್ಮಾಣ ಮಾಡದೆ ಮೂಲಸೌಕರ್ಯ ಹಾಗೂ ಸಂಪರ್ಕದತ್ತ ಗಮನಹರಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇಲಾಖೆ ಅಧಿಕಾರಿಗಳು ಉತ್ತರಿಸಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಒಟ್ಟು 4 ರಸ್ತೆಗಳನ್ನು 166.91 ಕಿ.ಮೀ ಉದ್ದಕ್ಕೆ ರೂ. 59.19 ಕೋಟಿ ಅಂದಾಜಿನಲ್ಲಿ 2 ಹಂತಗಳಲ್ಲಿ ಅಭಿವೃದ್ಧಿ ಪಡಿಸುವ ಪ್ರಸ್ತಾವನೆಯಿದೆ.
ಮೊದಲನೇ ಹಂತದಲ್ಲಿ 132.47 ಕಿ.ಮೀ ಉದ್ದದ ರಸ್ತೆಯನ್ನು ರೂ. 53.79 ಕೋಟಿ ಮೊತ್ತಗಳಲ್ಲಿ ಈಗಾಗಲೇ ಅನುಮೋದನೆ ಗೊಂಡಿದ್ದು, 2 ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ.
ಎರಡನೇ ಹಂತದಲ್ಲಿ 34.44 ಕಿ.ಮೀ ಉದ್ದದ ರಸ್ತೆಯನ್ನು ರೂ. 5.40 ಕೋಟಿ ಮೊತ್ತಗಳಲ್ಲಿ ಸರಕಾರದಿಂದ ಅನುಮೋದನೆ ದೊರಕಿದ ಕೂಡಲೇ ಕೈಗೆತ್ತಿಕೊಳ್ಳಲಾಗುವುದು.
ಮಂಗಳೂರು ವಿಭಾಗರಸ್ತೆ ಮತ್ತು ಸೇತುವೆಗಳ ಒಟ್ಟು 193 ಕಾಮಗಾರಿಗಳಿಗೆ ರೂ. 16680.02 ಲಕ್ಷಗಳು ಮಂಜೂರಾಗಿದ್ದು, ಇದರಲ್ಲಿ 108 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, 79 ಕಾಮಗಾರಿಗಳು ಪ್ರಗತಿಯಲ್ಲಿವೆ. 6 ಕಾಮಗಾರಿಗಳಿಗೆ ಗುತ್ತಿಗೆ ನಿಗದಿಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಜಿಲ್ಲೆಯಲ್ಲಿ ವಸತಿ ಮತ್ತು ನಿವೇಶನ ಯೋಜನೆ ಏನೇನೂ ತೃಪ್ತಿಕರವಾಗಿಲ್ಲ ಎಂದ ಜಿಲ್ಲಾ ಉಸ್ತುವಾರಿ ಸಚಿವರು, ದಕ್ಷಿಣ ಕನ್ನಡದಲ್ಲಿ ವಸತಿ ಯೋಜನೆ ಕಳೆದ ಹತ್ತು ವರ್ಷಗಳಿಂದ ಹಿಂದುಳಿದಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಪಿಎಂಜಿಎಸ್ ವೈ, ಕೆ ಆರ್ ಡಿ ಸಿ ಎಲ್ ಕಾರ್ಯವೈಖರಿ ಬಗ್ಗೆ ಸಭೆಯಲ್ಲಿ ಎಲ್ಲರಿಂದಲೂ ತೀವ್ರ ಅಸಮಾಧಾನ ವ್ಯಕ್ತವಾಯಿತು.
ಯುವ ಜನ ಸೇವಾ ಮತ್ತು ಇಲಾಖೆಯ ಸಚಿವರು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿದ್ದು, ಪ್ರಸಕ್ತ ಸಾಲಿನಲ್ಲಿ ಕ್ರೀಡೆಯಲ್ಲಿ ಜಿಲ್ಲೆಯನ್ನು ಕ್ರೀಡೆಯಲ್ಲಿ ಮುಂಚೂಣಿಗೆ ತರುವ ಪ್ರಯತ್ನ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು. ಜಿಲ್ಲೆಗೊಂದು ಸುಸ್ಸಜ್ಜಿತ ಕೀಡಾಂಗಣ ಹಾಗು ಕ್ರೀಡಾ ಶಾಲೆಯ ಅಗತ್ಯವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಈಗಾಗಲೇ ಇರುವ ಕ್ರೀಡಾಂಗಣಗಳನ್ನು ಉನ್ನತೀಕರಿಸುವ ಕೆಲಸವಾಗಬೇಕು. ಹೊಸ ಈಜು ಕೊಳಕ್ಕೆ ಹಣ ಬಿಡುಗಡೆಯಾಗಿದೆ ಎಂದು ಯುವಜನಸೇವಾ ಇಲಾಖಾ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಬಂದರು ಮತ್ತು ಮೀನುಗಾರಿಕಾ ಇಲಾಖೆಯಡಿ ಕೈಗೊಂಡಿರುವ ನೂತನ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು ಎಂದರು. ಪ್ರಾಣ ಹಾಗೂ ಆಸ್ತಿಪಾಸ್ತಿ ನಷ್ಟವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದರು. ಡ್ರೆಜ್ಜಿಂಗ್ ಯಂತ್ರ ಖರೀದಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಈ ಸಂದರ್ಭದಲ್ಲಿ ಹೇಳಿದರು.
ಕೊಯಿಲಾದಲ್ಲಿ ಪಶುವೈದ್ಯಕೀಯ ಕಾಲೇಜು ಪ್ರಕ್ರಿಯೆ ತ್ವರಿತ ಗತಿಯಲ್ಲಿ ಮುಂದುವರಿಯಲು ವಿಶೇಷ ಅಧಿಕಾರಿಯನ್ನು ನಿಯೋಜಿಸಲಾಗಿದ್ದು, 247 ಎಕರೆ ಭೂಮಿ ವಗರ್ಾಯಿಸಲಾಗಿದೆ. ಇಲ್ಲಿ ಕಾಮಗಾರಿಯಲ್ಲಿ ವಿಳಂಬ ಸಲ್ಲದು ಎಂದು ಉಸ್ತುವಾರಿ ಸಚಿವರಾದ ರಮಾನಾಥ ರೈ ಅವರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಸಮಸ್ಯೆಗಳನ್ನು ಆಲಿಸಿದ ಸಚಿವರು, ಪ್ರಿ ಮೆಟ್ರಿಕ್ ಗಳನ್ನು ಪೋಸ್ಟ್ ಮೆಟ್ರಿಕ್ ಗಳಾಗಿ ಪರಿವತರ್ಿಸಲು ಕ್ರಮಕೈಗೊಳ್ಳಿ ಎಂದರು. ನನ್ನ ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿರಬೇಕು. ಎಲ್ಲ ಅಂಗನವಾಡಿಗಳಿಗೆ ವಿದ್ಯುತ್ ಸೌಲಭ್ಯಹೊಂದಿದೆ ಎಂದರು.
ಜಿಲ್ಲೆಯಲ್ಲಿ 546 ಶಿಕ್ಷಕರ ಕೊರತೆ ಇದ್ದು, 100 ಶಿಕ್ಷಕರ ಆಯ್ಕೆಯಾಗಲಿದೆ. ಸಮಸ್ಯೆ ಪರಿಹಾರಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಿಸಲು ಅವಕಾಶ ನೀಡಿ ಎಂದು ವಿದ್ಯಾಂಗ ಉಪನಿರ್ದೇಶಕರು ಕೋರಿದರು.
ಪೊಲೀಸ್ ಇಲಾಖೆಗೆ ವಿಶೇಷ ನಿರ್ದೇಶನ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯಲ್ಲಿ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯಾಗಬೇಕು ಎಂದರು. ಸಭೆಯಲ್ಲಿ ಪೊಲೀಸ್ ಕಮಿಷನರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಿಇಒ, ಸಂಸದ ನಳಿನ್ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೊರಗಪ್ಪ ನಾಯಕ್ ಸಭೆಯಲ್ಲಿದ್ದರು.