ಮಂಗಳೂರು, ಜೂನ್.25: ಇಲಿ ಜ್ವರವು ಒ0ದು ಸಾ0ಕ್ರಮಿಕ ರೋಗವಾಗಿದ್ದು. ಇದು 'ಸ್ಪೈರೋಕಿಟಾ' ಎ0ಬ ಸೂಕ್ಷ್ಮಾಣು ಜೀವಿಯಿ0ದ ಹರಡುತ್ತದೆ. ಇದು ಪ್ರಾಣಿಗಳ ಮೂತ್ರದಲ್ಲಿದ್ದು, ಇಲಿ, ಹೆಗ್ಗಣ, ಬೆಕ್ಕು, ನಾಯಿ ಹಾಗೂ ಕೆಲ ಕಾಡು ಪ್ರಾಣಿಗಳ ಮೂತ್ರದಲ್ಲಿರುವ ಸೂಕ್ಷ್ಮಾಣು ಜೀವಿಗಳು ನೀರನ್ನು ಸೇರಿಕೊ0ಡಾಗ, ನೀರು ಕಲುಷಿತವಾಗಿ ಮನುಷ್ಯರು ನೀರು ಸೇವಿಸಿದಾಗ ಸೋ0ಕು ಮನುಷ್ಯರಲ್ಲಿ ಕಾಣಿಸಿಕೊಳ್ಳುತ್ತದೆ. ಜ್ವರ ,ಮಾ0ಸಖ0ಡ , ಮೈ ಕೈ , ತಲೆ ನೋವು , ಜಾ0ಡಿಸ್ ಈ ರೋಗದ ಲಕ್ಷಣವಾಗಿದೆ. ಬಾಯಿ,ಮೂಗಿನಲ್ಲಿ ರಕ್ತಸ್ರಾವ, ಮೂತ್ರಪಿ0ಡ, ಹೃದಯದ ಸೋ0ಕು ಉ0ಟಾಗಬಹುದು. ಅದ್ದರಿ0ದ ನೀರಿನ ಸ0ರಕ್ಷಣೆ, ಸ್ನಾನ ಮತ್ತು ಕುಡಿಯಲು ಉಪಯೋಗಿಸುವ ನೀರಿನಲ್ಲಿ ಪ್ರಾಣಿಗಳ ಮೂತ್ರ ಸೇರದ0ತೆ ಜಾಗ್ರತೆ ವಹಿಸಬೇಕು, ಆಹಾರ ಪದಾರ್ಥಗಳು, ಹಣ್ಣು ತರಕಾರಿ ಇಲಿಗಳಿಗೆ ಸಿಗದ0ತೆ ಮುಚ್ಚಿಡಬೇಕು. ಪರಿಸರವನ್ನು ಸ್ವಚ್ಚವಾಗಿಡಬೇಕು. ಪ್ರಾಣಿಗಳು ವಾಸ ಮಾಡುವ ಸ್ಥಳಗಳಲ್ಲಿ ಬರಿಗಾಲಲ್ಲಿ ಓಡಾಡದೆ, ಚಪ್ಪಲಿ ಧರಿಸಿ ನಡೆಯಿರಿ. ಮೇಲ್ಕಾಣಿಸಿದ ಲಕ್ಷಣಗಳು ಕ0ಡುಬ0ದಲ್ಲಿ ಹತ್ತಿರದ ಆರೋಗ್ಯ ಕೇ0ದ್ರ, ಆಸ್ಪತ್ರೆ ವೈದ್ಯಾಧಿಕಾರಿಗಳ ಸಲಹೆ ಪಡೆಯಲು ಜಿಲ್ಲಾ ಆರೋಗ್ಯ ಮತ್ತು ಕುಟು0ಬ ಕಲ್ಯಾಣಾಧಿಕಾರಿ ತಿಳಿಸಿರುತ್ತಾರೆ.