ಮಂಗಳೂರು,
ಫೆಬ್ರವರಿ.06:-ಸರ್ಕಾರಿ ಅಧಿಸೂಚನೆಯಂತೆ ಜಿಲ್ಲಾ ವ್ಯಾಪ್ತಿಯಲ್ಲಿ
ಜಿಲ್ಲಾಧಿಕಾರಿಗಳನ್ನು ಸೈಬರ್ ಕೆಫೆ ನೋಂದಣಿ ಮಾಡಲು ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ.
ಅದರಂತೆ ಜಿಲ್ಲಾ ವ್ಯಾಪ್ತಿಯಲ್ಲಿರುವ ಸೈಬರ್ ಕೆಫೆಗಳು ಈಗಾಗಲೇ ನೋಂದಣಿಯಾಗಿರದಿದ್ದಲ್ಲಿ
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಕಡ್ಡಾಯವಾಗಿ ಕೂಡಲೇ ನೋಂದಣಿ
ಮಾಡಲು ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರು ತಿಳಿಸಿರುತ್ತಾರೆ.