ಮಂಗಳೂರು,ಫೆಬ್ರವರಿ.27: ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯೂ ಆದ ಎನ್. ಪ್ರಕಾಶ್ ಅವರು ಇಂದು ಬೆಳಗ್ಗೆ ಮಾನ್ಯ ಆಯುಕ್ತರು ಹಾಗೂ ಪರಿಸರ ಅಭಿಯಂತರರೊಂದಿಗೆ ಪಾಲಿಕಾ ವ್ಯಾಪ್ತಿಯೊಳಗಿನ ಘನತ್ಯಾಜ್ಯ ವಿಲೇವಾರಿ ಹಾಗೂ ನೈರ್ಮ ಲ್ಯಕ್ಕೆ ಸಂಬಂ ಧಿಸಿ ಫಳ್ನೀರು ರಸ್ತೆ, ಕಂಕ ನಾಡಿ, ಶಾಂತಿ ನಿಲಯ ರಸ್ತೆ, ನಂದಿ ಗುಡ್ಡ, ಪಾಂಡೇ ಶ್ವರ, ಕೋರ್ಟ್, ದಕ್ಕೆ, ಸೆಂಟ್ರಲ್ ಮಾರ್ಕೆಟ್, ರಥ ಬೀದಿ, ಬಂದರು, ಕುದ್ರೋಳಿ, ಮಣ್ಣ ಗುಡ್ಡೆ, ಉರ್ವ, ಕೊಟ್ಟಾರ, ಬಿಜೈ, ಕದ್ರಿ, ಶಿವಭಾಗ್, ಬೆಂದೂರು ಹಾಗೂ ಇತರ ಪ್ರದೇಶಗಳನ್ನು ಸ್ವತಹ ಸಂದರ್ಶಿಸಿ ಪರಿಶೀಲನೆ ನಡೆಸಿದರು. ಕೆಲವು ಪ್ರದೇಶ ಗಳಲ್ಲಿ ನೈ ರ್ಮಲ್ಯ ಕೆಲಸ ಗಳನ್ನು ಸಮ ರ್ಪಕ ವಾಗಿ ನಿರ್ವ ಹಿಸಿ ರುವು ದರಿಂದ ಮೆಚ್ಚುಗೆ ಯನ್ನು ವ್ಯಕ್ತ ಪಡಿಸಿ ದರು. ಆದರೆ ಪ್ರಮುಖ ವಾಗಿ ಫಳ್ನೀರ್ ರಸ್ತೆ, ಕಂಕ ನಾಡಿ ಮತ್ತು ವೆಲೆ ನ್ಸಿಯಾ ಪ್ರದೇಶ ಗಳಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಿರ್ವಹಿಸದೇ ಹಾಗೂ ಸೂಕ್ತ ಮೇಲ್ವಿಚಾರಣೆಯನ್ನು ನಡೆಸದೇ ಇರುವುದರಿಂದ ಸದ್ರಿ ಪ್ರದೇಶದ ನೈರ್ಮಲ್ಯ ನಿರೀಕ್ಷಕರನ್ನು ಸ್ಥಳದಲ್ಲಿಯೇ ಅಮನತು ಮಾಡಲು ಆದೇಶಿಸಿದರು.