ಮಂಗಳೂರು, ಫೆಬ್ರವರಿ.13 : ಜಿಲ್ಲೆಯ ನಕ್ಸಲ್ಬಾಧಿತ ಪ್ರದೇಶ ವ್ಯಾಪ್ತಿಯಲ್ಲಿ ನಿರೀಕ್ಷಿತ ವೇಗದಲ್ಲಿ ಪ್ರಗತಿ ಸಾಧಿಸದ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು, ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾದ ಅಧಿಕಾರಿಗಳನ್ನು ಯಾವುದೇ ಮುಲಾಜಿಲ್ಲದೆ ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಮಂಗಳ ವಾರ ಜಿಲ್ಲಾಧಿ ಕಾರಿ ಗಳ ಕೋರ್ಟ್ ಹಾಲ್ ನಲ್ಲಿ ಬಹು ದೂರದ ಮತ್ತು ಒಳ ನಾಡು ಪ್ರದೇಶ ಗಳ ಅಭಿ ವೃದ್ಧಿ ಕುರಿತು ಪ್ರಗತಿ ಪರಿ ಶೀಲನೆ ನಡೆಸಿದ ಜಿಲ್ಲಾ ಧಿಕಾ ರಿಗಳು, ಈ ಸಂಬಂಧ ಇಂದು ನಡೆ ಸಿದ ಮೂರನೇ ಸಭೆ ಇದಾ ಗಿದ್ದು, ಅಧಿ ಕಾರಿ ಗಳು ಈ ಪ್ರದೇಶ ಗಳ ಅಭಿ ವೃದ್ಧಿಯ ಕುರಿತು ತೀವ್ರವಾಗಿ ಕಾರ್ಯೋನ್ಮುಖರಾಗುತ್ತಿಲ್ಲ ಎಂಬ ಅಂಶ ಸ್ಪಷ್ಟವಾಗಿದೆ. ಬಹುದೂರ ಮತ್ತು ಒಳನಾಡು ಪ್ರದೇಶಾಭಿವೃದ್ಧಿ ಕಾಮಗಾರಿಯನ್ನು ನಿರ್ಲಕ್ಷಿಸದೆ ಗಂಭೀರವಾಗಿ ಪರಿಗಣಿಸಿ ಎಂದು ಎಚ್ಚರಿಸಿದರು.
ಅದರಲ್ಲೂ ಮುಖ್ಯವಾಗಿ ಇಂಜಿನಿಯರಿಂಗ್ ವಿಭಾಗದವರ ಕರ್ತವ್ಯಲೋಪವನ್ನು ಎತ್ತಿಹಿಡಿದ ಜಿಲ್ಲಾಧಿಕಾರಿಗಳು, ತನಗೆ ಕಾರಣಗಳು ಬೇಡ; ಕೆಲಸವಾಗಬೇಕು ಎಂದು ಸ್ಪಷ್ಟಪಡಿಸಿದರು. ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ, ನಿರ್ಮಿತಿ ಕೇಂದ್ರ ಹೊರತಾಗಿ ಇಂದು ಈ ಸಂಬಂಧ ಹಲವು ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಗೂ ವಹಿಸಿದರು.
ಅನುಪಾಲನಾ ವರದಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಪ್ರಗತಿಯಲ್ಲಿದೆ ಎಂಬ ಒಕ್ಕಣೆ ಬೇಡ; ತಮಗೆ ಕಾಮಗಾರಿ ಮುಗಿಸುವ ದಿನಾಂಕದ ಸ್ಪಷ್ಟಮಾಹಿತಿ ಬೇಕು; ಭರವಸೆ ಬೇಡ ಎಂದರು. ಪ್ರದೇಶಗಳ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡುವುದಾಗಿ ಹೇಳಿದ ಅವರು, ಮುಂದಿನ 15 ದಿನಗಳೊಳಗೆ ನಿಗದಿತ ಗುರಿಸಾಧನೆಯಾಗಬೇಕು. ಸುಲ್ಕೇರಿ ಗ್ರಾಮದ ಮಾಳಿಗೆ ರಸ್ತೆ ಮಧ್ಯೆ 3 ಚಿಕ್ಕ ಮೋರಿ ರಚನೆಗೆ 10 ದಿನಗಳ ಸಮಯಾವಕಾಶ ನೀಡಿದರು. ಶಿರ್ಲಾಲು ಮಲೆಕ್ಕಿಲ ಮತ್ತು ಮಾಣಿಲ ರಸ್ತೆ ಅಭಿವೃದ್ಧಿ ಮಾಡಿ ಈ ಕಾಮಗಾರಿಗಳನ್ನು ಉಳಿದ ಕಾಮಗಾರಿಗಳಿಗಿಂತ ಹೆಚ್ಚಿನ ಆದ್ಯತೆ ನೀಡಿ; ಕಾರಣ ನೀಡದೆ ಕೆಲಸ ಮಾಡಿ; ಮುಂದಿನ 10 ದಿನಗಳೊಳಗಾಗಿ ಪ್ರಗತಿ ದಾಖಲಿಸಿ ಛಾಯಾಚಿತ್ರ ಸಹಿತ ತನಗೆ ವರದಿ ನೀಡಿ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಅಭಿವೃದ್ಧಿ ಕಾಮ ಗಾರಿ ವೇಳೆ ಪೊಲೀಸ್ ಇಲಾಖೆ ವತಿ ಯಿಂದ ಎಲ್ಲ ರೀತಿಯ ಸಹಕಾರ ನೀಡುವ ಭರ ವಸೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಅಭಿಷೇಕ್ ಗೋಯಲ್ ಅವರು, ಸರ್ಕಾರ ಈ ಪ್ರದೇ ಶಗಳ ಅಭಿ ವೃದ್ಧಿಗೆ ನೀಡಿದ ಹಣ ಆ ಪ್ರದೇ ಶಗಳ ಅಲ್ಲಿನ ಬುಡ ಕಟ್ಟು ನನರ ಅಭಿ ವೃದ್ಧಿಗೆ ಬಳಕೆ ಯಾಗ ಬೇಕು.ಅವರ ವಿಶ್ವಾಸವನ್ನು ಪಡೆಯಬೇಕು ಅವರ ಅಭಿವೃದ್ಧಿಗೆ ಪ್ರೇರಕವಾಗಿ ಕೆಲಸ ಮಾಡಬೇಕು. ಈ ಎಲ್ಲ ಉದ್ದೇಶಗಳನ್ನು ಮನದಲ್ಲಿರಿಸಿ ಇಂಜಿನಿಯರ್ ಗಳು ಹಾಗೂ ಕಾಮಗಾರಿ ಅನುಷ್ಠಾನ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಈ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಗಳ ಬಗ್ಗೆ ಪೊಲೀಸ ಇಲಾಖೆಗೆ ಮಾಹಿತಿ ಇರಬೇಕು. ಮಲವಂತಿಗೆ -ಗುತ್ಯಡ್ಕ್ ರಸ್ತೆ ಮೂರು ದಿನಗಳೊಳಗೆ ಸಂಪೂರ್ಣಗೊಳಿಸಿ. ಸಂಪಿಗೆಕಟ್ಟೆ ಬಡಾವಣೆ ರಸ್ತೆ ಹತ್ತು ದಿನಗಳೊಳಗೆ, ಕೋಟಿಕುಂಬ್ರ ಕಾಲುಸಂಕ ಕಾಮಗಾರಿ ಬಗ್ಗೆ, ಮಿತ್ತಬಾಗಿಲು ಬೊಳ್ಳಾಜೆ ರಸ್ತೆಗೆ ಮೋರಿ ಈ ಕೆಲಸಗಳನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ನಡ ಜಮಾಲಾಬಾದ್ ಬಳಿ ಕೊಡಳು ರಸ್ತೆಗೆ ಸ್ಲ್ಯಾಬ್ ಮೋರಿ, ನಡಗುತ್ತಿನ ಪಡ್ಯಾಯೂರು ರಸ್ತೆ ಮತ್ತು ಮೋರಿ, ಅಳದಂಗಡಿಯ ಐದು ಕಾಮಗಾರಿ 15 ದಿನಗಳೊಳಗೆ ಮುಗಿಸುವುದಾಗಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಭರವಸೆ ನೀಡಿದರು. ಮುಂದೆ ಹೊಸ ಕಾಮಗಾರಿಗಳನ್ನು ಆರಂಭಿಸುವ ವೇಳೆ ಇಂಜಿನಿಯರ್ ಗಳು ತಾಂತ್ರಿಕ ಸಾಧ್ಯತೆ ಮತ್ತು ತಹಸೀಲ್ದಾರ್ ಹಾಗೂ ಪೊಲೀಸರು ಸಾಮಾಜಿಕ ಮತ್ತು ಆರ್ಥಿಕ ಸಾಧ್ಯತೆಗಳನ್ನು ಅಧ್ಯಯನ ಮಾಡಿ ಆಡಳಿತಾತ್ಮಕ ಅನುಮೋದನೆ ಪಡೆಯಲು ಯೋಜನೆ ಸಲ್ಲಿಸಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಐಟಿಡಿಪಿ ಇಲಾಖೆ ವತಿಯಿಂದ ಕೈಗೊಂಡ ಕಾಮಗಾರಿಗಳ ಮಾಹಿತಿಯನ್ನು ಐಟಿಡಿಪಿ ಅಧಿಕಾರಿ ಸಬೀರ್ ಅಹಮದ್ ಮುಲ್ಲಾ ಅವರು ಸಭೆಗೆ ನೀಡಿದರು. ಒಟ್ಟು 15 ಸೋಲಾರ್ ದೀಪಗಳನ್ನು ನೀಡಲಾಗಿದ್ದು, ಶಿರ್ಲಾಲುವಿನಲ್ಲಿ ಒಂದು, ಇಂದಬೆಟ್ಟುವಿನಲ್ಲಿ 2, ನಾರಾವಿಯಲ್ಲಿ 5, ನಾವರದಲ್ಲಿ 2, ಸುಲ್ಕೇರಿಮೊಗ್ರುವಿನಲ್ಲಿ 5 ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ ಎಂದರು.
ನಾವೂರಿನ ಕಿರುಜಲವಿದ್ಯುತ್ ಯೋಜನೆಯಡಿ ನೀರಿಲ್ಲದೆ ನಿಂತಿರುವ ಘಟಕಕ್ಕ ಕಟ್ಟೆ ಕಟ್ಟಿ ನೀರೊದಗಿಸಲು ಜಲಾನಯನ ಅಧಿಕಾರಿಗಳು ಇಂದು ಸ್ಥಳಕ್ಕೆ ತೆರಳಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು ಹೇಳಿದರು. ಈ ಪ್ರದೇಶಗಳಲ್ಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ನಿಗದಿ ಗುರಿ ಸಾಧಿಸಿದ್ದು, ಕೃಷಿ ಇಲಾಖೆಯಿಂದ ಮಲೆಕುಡಿಯರಿಗೆ 6 ಪವರ್ ಟಿಲ್ಲರ್ ಮತ್ತು 7 ಪಂಪ್ ಸೆಟ್ ಗಳನ್ನು ಈಗಾಗಲೇ ನೀಡಲಾಗಿದೆ ಎಂದರು. ಈ ಸಭೆಗೆ ಪೂರ್ವನಿಗದಿಯಾಗಿ ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗ ಮತ್ತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಇಂದಿನ ಸಭೆಗೆ ಗೈರುಹಾಜರಾದ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಲು ಸೂಚಿಸಿದ ಜಿಲ್ಲಾಧಿಕಾರಿಗಳು, ಈ ಪ್ರದೇಶಾಭಿವೃದ್ಧಿಯ ಕಾಮಗಾರಿಗಳನ್ನು ತಮ್ಮ ಮನೆಯ ಕೆಲಸ, ದೇವರ ಕೆಲಸವೆಂದೇ ಪರಿಗಣಿಸಿ ನಿರ್ವಹಿಸಿ ಇಲ್ಲದಿದ್ದರೆ ಪರಿಣಾಮ ಎದುರಿಸಿ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ್, ಪುತ್ತೂರು ಸಹಾಯಕ ಆಯುಕ್ತರಾದ ಎಚ್ ಪ್ರಸನ್ನ ಅವರನ್ನೊಳಗೊಂಡಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.