Friday, February 1, 2013

ಆನ್ ಲೈನ್ ದೂರು ನಿರ್ಲಕ್ಷ್ಯ ಬೇಡ: ಜಿಲ್ಲಾಧಿಕಾರಿ


ಮಂಗಳೂರು, ಫೆಬ್ರವರಿ. 01: ಸಾರ್ವಜನಿಕ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ನಾಗರೀಕರು ಆನ್ ಲೈನ್ ಮೂಲಕ ಸಲ್ಲಿಸುವ ದೂರುಗಳ ಬಗ್ಗೆ ನಿರ್ಲಕ್ಷ್ಯ ವಹಿಸದೆ ಸ್ಪಂದಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಅವರು ಸೂಚಿಸಿದರು.
ಜನ ವರಿ 26ರಂದು ಜಿಲ್ಲಾ ಉಸ್ತು ವಾರಿ ಸಚಿ ವರು ಉದ್ಘಾ ಟಿಸಿದ ಈ ವ್ಯ ವಸ್ಥೆಗೆ ಇದು ವರೆಗೆ 11 ದೂರು ಗಳು ಬಂದಿದ್ದು, ಸಂಬಂ ಧಪಟ್ಟ ಅಧಿ ಕಾರಿ ಗಳಿಗೆ ತರ ಬೇತಿಯೂ ಪೂರ್ಣ ಗೊಂಡಿದ್ದು, ಜನರ ಸಮಸ್ಯೆ ಗಳಿಗೆ ಎರಡು ದಿನಗಳೊಳಗೆ ಸ್ಪಂದಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಜನರ ಸಮಸ್ಯೆಗೆ ಸ್ಪಂದಿಸುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದ್ದು, ನೈಜ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ನುಡಿದರು. ಎಲ್ಲ ವಿಷಯಗಳನ್ನೂ ಗಂಭೀರವಾಗಿ ಪರಿಗಣಿಸಿ ಹಾಗೂ ಪ್ರಾಮಾಣಿಕ ಉತ್ತರ ನೀಡಿ ಎಂದ ಜಿಲ್ಲಾಧಿಕಾರಿಗಳು, ವ್ಯವಸ್ಥೆಯ ಉದ್ದೇಶವನ್ನು ಸಾಫಲ್ಯಗೊಳಿಸಿ ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ  ದಯಾನಂದ ಕೆ.ಎ., ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ಎನ್ ಐ ಸಿ ಯ ಅಶ್ವಿನ್ ಈ ಬಗ್ಗೆ ಮಾಹಿತಿ ನೀಡಿದರು. ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.