ಮಂಗಳೂರು,ಫೆಬ್ರವರಿ.14: ಹಸಿರು ಆರೋಗ್ಯ ಅಭಿಯಾನ ಇಂದಿನ ಅಗತ್ಯವಾಗಿದ್ದು,ಕರಾವಳಿ ವಲಯಗಳಲ್ಲಿ ಹಸಿರು ಬೆಳೆಸಲು ಬಜೆಟ್ ನಲ್ಲಿ ಕರ್ನಾಟಕ ಸರ್ಕಾರ ಪ್ರತ್ಯೇಕ ಹಣವನ್ನು ಮೀಸಲಿರಿಸಿದೆ. ಗ್ರಾಮ ಅರಣ್ಯ ಸಮಿತಿ ಪುನರುಜ್ಜೀವನಕ್ಕೆ, ಪಟ್ಟಣ ಪ್ರದೇಶದಲ್ಲಿ ಹಸಿರು ಬೆಳೆಸಲು 18 ಕೋಟಿರೂ., ರಸ್ತೆ ಬದಿಗಳಲ್ಲಿ ಸಸಿ ನೆಡಲು 12 ಕೋಟಿ, ಸಮೃದ್ಧ ಹಸಿರು ಗ್ರಾಮಕ್ಕೆ ಮೂರು ಕೋಟಿ, ದೇವರ ಕಾಡುಗಳ ರಕ್ಷಣೆಗೆ 8 ಕೋಟಿ ಮೀಸಲು, ಇಕೋ ಟೂರಿಸಂಗೆ ಪ್ರತ್ಯೇಕ ಬಜೆಟ್ ಮೀಸಲಿರಿಸಿದೆ.
ಔಷಧೀಯ ಸಸ್ಯಗಳ ಬಳಕೆ, ಸಂರಕ್ಷಣೆ ಮತ್ತು ಸಂವರ್ಧನೆಗಾಗಿ `ಹಸಿರು ಆರೋಗ್ಯ' ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಕರಾವಳಿ ಭಾಗದಲ್ಲಿ ಇಂದಿನಿಂದ(ಫೆ.15) ಸುಳ್ಯ ಪ್ರದೇಶದಿಂದ ಅಭಿಯಾನ ಆರಂಭಗೊಳ್ಳಲಿದೆ ಎಂದು ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದ್ದಾರೆ.
ಗುರುವಾರ ಜಿಲ್ಲಾಧಿ ಕಾರಿಗ ಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾ ರರೊಂದಿಗೆ ಮಾತ ನಾಡಿದ ಅವರು ನಾಟಿ ಔಷಧಿಯ ಮಹತ್ವ ವನ್ನು ಸಾರು ವುದ ರೊಂದಿಗೆ ಅದರ ರಕ್ಷಣೆಗಾಗಿ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಚಿಕ್ಕಮಗಳೂರಿನಲ್ಲಿ ಈಗಾಗಲೇ ಈ ಯೋಜನೆ ಆರಂಭವಾಗಿದೆ. ಹಳ್ಳಿ ಔಷಧಿಗಳು ವಿನಾಶದಂಚಿನಲ್ಲಿದ್ದು ಅವುಗಳನ್ನು ಉಳಿಸುವ ಕೆಲಸವಾಗಬೇಕು. ಔಷಧೀಯ ಮೂಲಿಕೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ. ನಾಟಿ ವೈದ್ಯಕೀಯ, ಔಷಧಿ ಗಿಡ ರಕ್ಷಣೆ ಕುರಿತು ಮಾಹಿತಿ ಒದಗಿಸುವಲ್ಲಿ ಈಗಾಗಲೇ ನೂರಕ್ಕೂ ಅಧಿಕ ಕಡೆ ಶಿಬಿರಗಳು ನಡೆದಿವೆ. ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ 30 ಸ್ಥಳಗಳಲ್ಲಿ ಹಸಿರು ಆರೋಗ್ಯ ಶಿಬಿರ ನಡೆಯಲಿದೆ ಎಂದರು.
ಹಲಸು ಮತ್ತು ಜೇನು ಅಭಿವೃದ್ಧಿಗೆ ವಿಶೇಷ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಮಲೆನಾಡಿನ ಕಾಡುಗಳಲ್ಲಿ ಸುಮಾರು 50 ಸಾವಿರ ಹಲಸಿನ ಗಿಡಗಳನ್ನು ನೆಡಲಾಗುವುದು. ಹಲಸು ಬೆಳೆಗಾರರ ಸಂಘ, ಒಕ್ಕೂಟ ರಚನೆಯ ಮೂಲಕ ಸರಕಾರ ಹಲಸು ಬೆಳೆಗ ವಿಶೇಷ ಆದ್ಯತೆ ನೀಡಬೇಕು. ಹಲಸನ್ನು ಪ್ರಮುಖ ಹಣ್ಣಿನ ಬೆಲೆ ಎಂದು ತೋಟಗಾರಿಕಾ ಇಲಾಖೆ ಘೋಷಿಸುವಂತೆ ಒತ್ತಾಯಿಸಲಾಗಿದೆ ಎಂದರು.
ಅಲ್ಲದೆ ಅಡವಿ ಜೇನು ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಅರಣ್ಯ ಇಲಾಖೆಯ ಜೇನು ಹರಾಜು ಪ್ರ ಕ್ರಿಯೆ ಯಲ್ಲಿ ಬದಲಾ ವಣೆ ತಂದು ವನ ವಾಸಿಗಳು, ಅರಣ್ಯ ಸಮಿತಿ ಗಳಿಗೆ ಸಂಗ್ರಹಕ್ಕೆ ಜವಾ ಬ್ದಾರಿ ನೀಡ ಬೇಕು. ಜೇನು ಮೇಳ ನಡೆಸ ಬೇಕು. ಜೇನು ಸಂಗ್ರಹಗಾರರಿಗೆ ತರಬೇತಿ ನೀಡುವಂತೆ ಸರಕಾರದ ಗಮನ ಸೆಳೆಯಲಾಗಿದೆ ಎಂದು ಅಶೀಸರ ತಿಳಿಸಿದರು.
ಅರಣ್ಯ ಅಭಿವೃದ್ಧಿಗಾಗಿ ಬಜೆಟ್ನಲ್ಲಿ 1 ಸಾವಿರ ಕೋಟಿ ರೂ.ಮೀಸಲಿಟ್ಟಿರುವುದು ಶ್ಲಾಘನೀಯ. ಕರಾವಳಿ ಹಸಿರು ಕವಚ ಯೋಜನೆಯಡಿ 10ಕೋ.ರೂ, ವನ್ಯ ಜೀವಿ ಪ್ರದೇಶ ಸಂರಕ್ಷಣೆಗಾಗಿ 66ಕೋಟಿ ರೂ., ಸಮೃದ್ಧ ಹಸಿರು ಯೋಜನೆಗೆ 3 ಕೋಟಿ ರೂ., `ನಗರ ಹಸಿರು' ಯೋಜನೆಯಡಿ ರಸ್ತೆ ಬದಿ ಗಿಡಗಳನ್ನು ಬೆಳೆಸಲು 12 ಕೋ.ರೂ, ಪಟ್ಟಣದಲ್ಲಿ ಗಿಡಗಳನ್ನು ಬೆಳಸಲು 18 ಕೋ.ರೂ., ದೇವರ ಕಾಡು ಯೋಜನೆಗೆ 8 ಕೋ.ರೂ. ರಾಷ್ಟ್ರೀಯ ಉದ್ಯಾನವನಕ್ಕೆ 10 ಕೋ.ರೂ.ಮೀಸಲಿಡಲಾಗಿದೆ ಎಂದರು.
ಅರಣ್ಯ ಸಮೀಪದಲ್ಲಿ ಯಾವುದೇ ಕಾರಣಕ್ಕೂ ಕಿರು ಜಲವಿದ್ಯುತ್ ಯೋಜನೆಗೆ ಅನುಮತಿ ನೀಡಲಾಗು ವುದಿಲ್ಲ. ಮಂಗಳೂರು ವಿಭಾಗದಲ್ಲಿ 10 ಕಂಪೆನಿಗಳು ಅರಣ್ಯ ಇಲಾಖೆಗೆ ಕ್ಲಿಯರೆನ್ಸ್ ಅರ್ಜಿ ಸಲ್ಲಿಸಿವೆ. ರಾಜ್ಯದಲ್ಲಿ 220 ಅರ್ಜಿಗಳು ಬಂದಿವೆ ಆದರೆ ಎಲ್ಲದಕ್ಕೂ ಅನುಮತಿ ನಿರಾಕರಿಸಲಾಗಿದೆ ಎಂದರು.
ನಗರ ಮಟ್ಟದಲ್ಲಿ ಬಯೋಗ್ಯಾಸ್ ಸ್ಥಾವರಕ್ಕೆ ಆದ್ಯತೆ ನೀಡಲಾಗಿದೆ. ಇಂತಹ ಯೋಜನೆಗಳಿಗೆ ಪಶ್ಚಿಮ ಘಟ್ಟ ಕಾರ್ಯಪಡೆ ವಿಶೇಷ ಗಮನಹರಿಸಲಿದೆ.
ಪತ್ರಿಕಾಗೋಷ್ಠಿಯಲ್ಲಿ ಎಸಿ ಎಫ್ ಪದ್ಮನಾಭಗೌಡ, ಆರ್ ಎಫ್ ಒ ಕ್ಲಿಫರ್ಡ್ ಲೋಬೋ ಉಪಸ್ಥಿತರಿದ್ದರು.