ಮಂಗಳೂರು,ಫೆಬ್ರವರಿ.25 :- ಚುನಾವಣೆ ಸಮಯದಲ್ಲಿ ದೇಶದ ಭದ್ರತೆ ದೃಷಿಯಿಂದ ಪೊಲೀಸ್ ಮತ್ತು ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಪರಸ್ಪರ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಎಂದು ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ (principal
secretary) ವಿ. ಉಮೇಶ್ ಅವರು ಹೇಳಿದರು.
ಇಂದು ದಕ್ಷಿಣ ಕನ್ನಡ ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಜಿಲ್ಲಾ ಮುಖ್ಯ ಸ್ಥರು, ಪೊಲೀಸ್, ಮೀನು ಗಾರಿಕೆ ಮತ್ತು ಪ್ರವಾ ಸೋದ್ಯಮ, ಕೋಸ್ಟ್ ಗಾರ್ಡ್ ಅಧಿಕಾ ರಿಗಳ ಸಭೆ ಯನ್ನು ಉದ್ದೇ ಶಿಸಿ ಮಾತ ನಾಡಿದ ಅವರು, ಹೈದ ರಾಬಾದ್ ದಾಳಿ ಹಿನ್ನಲೆ ಮತ್ತು ಚುನಾವಣಾ ಸಮಯದಲ್ಲಿ ರಾಷ್ಟ್ರೀಯ ಭದ್ರತೆಗೆ ನೀಡಬೇಕಿರುವ ಆದ್ಯತೆಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಕರಾವಳಿ ತೀರದ ಸುರಕ್ಷತೆಯನ್ನು ದೃಢಪಡಿಸಿ ಎಂಬ ಎಚ್ಚರಿಕೆಯನ್ನೂ ರವಾನಿಸಿದರು.
ಸೂಕ್ತ ಸಮಯದಲ್ಲಿ ಸಮಗ್ರ ಮಾಹಿತಿಯೊಂದಿಗೆ ಸದಾ ಸನ್ನದ್ಧರಾಗಿರುವುದರಿಂದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದ ಅವರು, ಕರಾವಳಿ ತೀರಗಳ ಮೂಲಕ ಅಕ್ರಮ ಪ್ರವೇಶ, ಅಕ್ರಮ ಶಸ್ತ್ರಾಸ್ತ್ರ, ಮಾದಕ ವಸ್ತುಗಳು ಪ್ರವೇಶ, ಮಾನವ ಕಳ್ಳಸಾಗಾಣಿಕೆ ತಡೆಯಲು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಾಚರಿಸಿ, ರಕ್ಷಣಾ ವ್ಯವಸ್ಥೆಗೆ ಮಾರಕವೆನಿಸುವಂತಹ ಯಾವುದೇ ರಾಜಿಗೆ ರಾಜ್ಯದಲ್ಲಿ ಅವಕಾಶವಿಲ್ಲ ಎಂದರು.
ಪ್ರವಾಸೋದ್ಯಮ ಇಲಾಖೆಯವರು ಬೀಚ್ ಗಳ ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಖಾಸಗಿಯವರಿಗೆ ವಹಿಸಿ ಮೌನವಾಗಿರದೆ ಅಲ್ಲಿ ನಡೆಯುತ್ತಿರುವ ಎಲ್ಲ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ವಹಿಸಿ, ಮೇಲ್ವಿಚಾರಣೆ ನಡೆಸಿ ಷರತ್ತುಗಳ ಪಾಲನೆಯಾಗುತ್ತಿರುವುದನ್ನು ಗಮನಿಸಿ. ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಪರವಾನಿಗೆಯಿಲ್ಲದೆ ನಡೆಸುವ ವಾಟರ್ ಸ್ಪೋರ್ಟ್ಸ್, ಸ್ಕ್ಯೂಬಾ ಡೈವಿಂಗ್ ನಡೆಸುತ್ತಿದ್ದರೆ, ತರಬೇತಿ ನೀಡುವಂತಹುದ್ದು ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳಿ ಎಂದು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹೇಳಿದರು.
ಕೋಸ್ಟ್ ಗಾರ್ಡ್ ನವರ ಕರ್ತವ್ಯ ಮತ್ತು ಸ್ಥಳೀಯರ ಸಹ ಕಾರ ದಿಂದ ನಡೆಸ ಬಹು ದಾದ ಚಟು ವಟಿಕೆ ಮತ್ತು ಕರ್ತ ವ್ಯಗಳ ಬಗ್ಗೆ ಕರಾ ವಳಿ ರಕ್ಷಣಾ ಪಡೆ ಮತ್ತು ಆಂತ ರಿಕ ಭದ್ರತೆ ಯ ಐಜಿಪಿ ಭಾಸ್ಕರ್ ರಾವ್ ಅವರು ಸಭೆಯ ಗಮನ ಸೆಳೆದರಲ್ಲದೆ, ಕರಾವಳಿ ರಕ್ಷಣಾ ಪಡೆಯ ಸಾಧನೆಗಳನ್ನು ಸಭೆಯ ಮುಂದಿಟ್ಟರು. ಸಾಗರ ರಕ್ಷಾ ದಳದ ಸಾಧನೆಗಳನ್ನು ವಿವರಿಸಿದ ಅವರು, ದಳವನ್ನು ಇನ್ನಷ್ಟು ಸಬಲಗೊಳಿಸಲು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಪ್ರಧಾನ ಕಾರ್ಯದರ್ಶಿಗಳ ಗಮನ ಸೆಳೆದರು.
ಮೀನುಗಾರಿಕಾ ಇಲಾಖೆಯವರು ಮೀನುಗಾರಿಕಾ ದೋಣಿಗಳ ಬಗ್ಗೆ ವಾರ್ಷಿಕ ತನಿಖೆ, ಆರ್ ಟಿ ಒ ಅವರು ಕೈಗೊಳ್ಳುವ ಮಾದರಿಯಲ್ಲಿ ಕೈಗೊಂಡರೆ ಈ ದೋಣಿಗಳು ಸುವ್ಯವಸ್ಥೆಯಲ್ಲಿರುವ ಜೊತೆಗೆ ಅಕ್ರಮ ದೋಣಿಗಳಿಗೆ ಅವಕಾಶವಿರುವುದಿಲ್ಲ ಎಂದ ಭಾಸ್ಕರ್ ರಾವ್, ಮೀನುಗಾರರಿಗೆ ಸ್ಮಾರ್ಟ್ ಕಾರ್ಡ್ ನೀಡಿದ ಮಾಹಿತಿಯನ್ನು ಮೀನುಗಾರಿಕೆ ಉಪನಿರ್ದೇಶಕರಿಂದ ಪಡೆದರು. ಬಂದರು ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಸಹಕಾರವೂ ಅಕ್ರಮ ತಡೆಗೆ ಅದರಲ್ಲೂ ಮುಖ್ಯವಾಗಿ ಅಂಡರ್ ಬ್ರಿಡ್ಜ್ ರಕ್ಷಣಾ ವ್ಯವಸ್ಥೆಗೆ ಬೇಕೆಂದರು. ಕರಾವಳಿ ಹಳ್ಳಿಗಳ ಗಸ್ತು ಪುಸ್ತಕವನ್ನು ನಿರ್ವಹಿಸಿ, ಸಾರ್ವಜನಿಕ ಸಮಿತಿ ರಚಿಸಿ ವಿಚಾರ ವಿನಿಮಯ ನಡೆಸಿ ಎಂದರು.
ವಿಭಾಗ ಮಟ್ಟದ ಸಭೆ ಯಲ್ಲಿ ಮಾತ ನಾಡಿದ ಭಟ್ಕಳ ಸಹಾಯಕ ಆಯುಕ್ತ ರಾದ ರಾಮ್ ಪ್ರಸಾದ್ ಅವರು, ಕರಾ ವಳಿ ರಕ್ಷಣಾ ಪಡೆಗೆ ತಾಂತ್ರಿಕ ನೈಪುಣ್ಯ ಪಡೆದ ಸಿಬ್ಬಂದಿ ಗಳನ್ನು ನೇಮಿ ಸುವ ಬಗ್ಗೆ, ಅವರ ವ್ಯಾಪ್ತಿ ಯಲ್ಲಿ ರುವ ಕರಾ ವಳಿ ತಟ ರಕ್ಷಣಾ ಪಡೆಗೆ ಮೂಲ ಭೂತ ಸೌಕರ್ಯ ಗಳನ್ನು ನೀಡುವ ಬಗ್ಗೆ, ನಿರುಪ ಯುಕ್ತ ದೋಣಿ ಗಳನ್ನು ದಡ ದಲ್ಲಿ ನಿಲ್ಲಿಸು ವುದ ರಿಂದಾ ಗುವ ತೊಂದರೆ ಗಳ ಬಗ್ಗೆ, ಅವರ ವ್ಯಾಪ್ತಿ ಯಲ್ಲಿ ನಡೆಯು ತ್ತಿರುವ ವಾಟರ್ ಸ್ಪೋಟ್ಸ್ರ್ ಗಳಿಗೆ ಪರವಾನಿಗೆ ನೀಡಿದ ಬಗ್ಗೆ, ಅನುಮತಿ ನೀಡಿದ ಬಳಿಕ ಅವರನ್ನು ನಿಯಂತ್ರಿಸುವ ನೀತಿಯ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು.
ಪ್ರವಾಸೋದ್ಯಮ ಇಲಾಖೆ ನಿರ್ವಹಣಾ ನೀತಿ ಮತ್ತು ನಿರ್ಬಂಧಗಳ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಇಲಾಖಾ ನಿರ್ದೇಶಕರಿಗೆ ಪತ್ರ ಬರೆದು ನಿಯಂತ್ರಣಕ್ಕೆ ಸಂಬಂಧಿಸಿದ ನೀತಿ ರಚಿಸಲು ಕೋರುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಹೇಳಿದರು.
ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಪೊಲೀಸ್ ಕಮಿಷನರ್ ಮನೀಷ್ ಕರ್ಬಿಕರ್, ಎನ್ ಎಂ ಪಿಟಿಯ ಮೂರ್ತಿ, ಕಾರವಾರ ಅಡಿಷನಲ್ ಎಸ್ ಪಿ, ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್, ಕೋಸ್ಟ್ ಗಾಡ್ ಐಜಿಪಿ ರಾಜೇಂದ್ರ ಸಿಂಗ್, ಕಮಾಂಡೆಂಟ್ ಸಫಲ್ ಸಿಂಗ್, ಮೀನುಗಾರಿಕಾ ಇಲಾಖೆ ಉಪನಿರ್ದೇಶಕರಾದ ಸುರೇಶ್ ಕುಮಾರ್, ಪ್ರವಾಸೋದ್ಯಮ ಇಲಾಖಾಧಿಕಾರಿ ಜಿತೇಂದ್ರ ಅವರನ್ನೊಳಗೊಂಡಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.