ಮಂಗಳೂರು,
ಫೆಬ್ರವರಿ.08: 2012-13ನೇ ಸಾಲಿಗೆ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ
ಯೋಜನೆಯನ್ನು ದಕ್ಷಿಣಕನ್ನಡದಲ್ಲಿ ಇತರ ಏಳು ಜಿಲ್ಲೆಗಳೊಂದಿಗೆ ಮೊದಲ ಹಂತದಲ್ಲಿ
ಫೆಬ್ರವರಿ 15ರೊಳಗೆ ಅನುಷ್ಠಾನಕ್ಕೆ ತರಬೇಕೆಂದು ಕಾರ್ಮಿಕ ಇಲಾಖೆ ಆಯುಕ್ತರಾದ ಹರ್ಷ
ಗುಪ್ತಾ ಅವರು ಸೂಚಿಸಿದರು.
ಯೋಜನೆ ಅನುಷ್ಠಾನ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಆಯುಕ್ತರು, ತುರ್ತಾಗಿ ಯೋಜನೆ ಅನುಷ್ಠಾನಕ್ಕೆ ತನ್ನಿ ಎಂದರು. ದಿನಾಂಕ 7.2.13ರಂದು ಈ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಯೋಜನೆಯನ್ನು ಜಿಲ್ಲೆಯಲ್ಲಿ 25.2.13ರಿಂದ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಆಯುಕ್ತರು ಅದಕ್ಕೂ ಮುಂಚೆಯೇ ಪ್ರಾರಂಭಿಸುವಂತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ತಿಳಿಸಿದರು.
ಈ ಯೋಜನೆಯಡಿ ಈ ಬಾರಿ 97.119 ಕುಟುಂಬಗಳು ಸ್ಮಾಟ್ರ್ ಕಾರ್ಡ್ ಪಡೆಯಲಿವೆ. ಸ್ಮಾರ್ಟ್ ಕಾರ್ಡ್ ಪಡೆದ ಕುಟುಂಬಗಳು ಒಂದು ವರ್ಷದ ಅವಧಿಯಲ್ಲಿ ರೂ. 30,000 ಮೀರದಂತೆ ನಗದುರಹಿತ ಚಿಕಿತ್ಸೆಯನ್ನು ನೋಂದಾಯಿತ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ.
2002ರ ಸರ್ವ ಕುಟುಂಬ ಸಮೀಕ್ಷೆಯಲ್ಲಿ ಗುರುತಿಸಲಾದ ಗ್ರಾಮೀಣ ಬಿಪಿಎಲ್ ಕುಟುಂಬಗಳು ಮತ್ತು ನಗರ ಬಿಪಿಎಲ್ ಕುಟುಂಬಗಳು, ಮಹಾತ್ಮಗಾಂಧೀ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯ ಕಾರ್ಮಿಕರು ಮೊದಲ ಹಂತದಲ್ಲಿ ಪ್ರಯೋಜನ ಪಡೆಯಲಿರುವರು. ನಂತರದ ಹಂತದಲ್ಲಿ ಕಟ್ಟಡ ಕಾರ್ಮಿಕರು ಬೀಡಿ ಕಾರ್ಮಿಕರು ಪ್ರಯೋಜನ ಪಡೆಯಲಿರುವರು. ಹಂತ ಹಂತವಾಗಿ ಅಸಂಘಟಿತ ಕಾರ್ಮಿಕರು ಯೋಜನೆಯ ಪ್ರಯೋಜನ ಪಡೆಯುವವರಿದ್ದು, ಇತರೆ ವರ್ಗದ ಕುಟುಂಬಗಳನ್ನು ಯೋಜನೆಯಡಿ ಒಳಪಡಿಸಲಾಗುವುದು ಎಂದು ಕಾಮರ್ಿಕ ಸಹಾಯಕ ಆಯುಕ್ತ ನಾಗೇಶ್ ಅವರು ಮಾಹಿತಿ ನೀಡಿದರು. ವಿಡಿಯೋ ಕಾನ್ಫರೆನ್ಸ್ ನಲ್ಲಿ ಡಿಸ್ಟ್ರಿಕ್ಟ್ ಕೀ ಮ್ಯಾನೇಜ್ಮೆಂಟ್ ಅಥಾರಿಟಿಯ ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.