ಮಂಗಳೂರು, ಫೆಬ್ರವರಿ.20 : ದಕ್ಷಿಣ ಕನ್ನಡ ಜಿಲೆಥ್ಲಿ ನಗರಸ್ಥಳೀಯ ಸಂಸ್ಥೆಗಳಿಗೆ ನಿಷ್ಪಕ್ಷಪಾತ ಚುನಾವಣೆ ನಡೆಸಲು ಹಾಗೂ ಚುನಾವಣಾ ಪ್ರಕ್ರಿಯೆ ನಿರ್ವಿಘ್ನವಾಗಿ ನಡೆಯಲು ಮತ್ತು ಸದಾಚಾರ ಸಂಹಿತೆ ಪಾಲಿಸಲು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಅವರ ನೇತೃತ್ವದಲ್ಲಿ ಇಂದು ಪೊಲೀಸ್, ಅಬಕಾರಿ ಮತ್ತು ಸೆಕ್ಟರ್ ಅಧಿಕಾರಿಗಳ ಸಭೆ ನಡೆಯಿತು.
ಮಾರ್ಚ್ 7 ರಂದು ನಡೆ ಯಲಿರುವ ಚುನಾ ವಣಾ ಪ್ರ ಕ್ರಿಯೆ ಯನ್ನು ನಿರ್ವ ಹಿಸಲು ಅದ ರಲ್ಲೂ ಮುಖ್ಯ ವಾಗಿ ಚುನಾ ವಣಾ ನೀತಿ ಸಂಹಿತೆ ಪಾಲಿ ಸಲು ಸೆಕ್ಟರ್ ಅಧಿ ಕಾರಿ ಗಳನ್ನು ನೇಮಿಸಿ ಅವರಿಗೆ ವಲಯ ದಂಡಾ ಧಿಕಾ ರಿಗ ಳಾಗಿ (Zonal magistrate) ಕಾರ್ಯ ನಿರ್ವ ಹಿಸುವ ಕುರಿತು ಜಿಲ್ಲಾಧಿಕಾರಿಗಳು ಸೂಚನೆಯನ್ನೂ ನೀಡಿದರು.
ಸೆಕ್ಟರ್ ಅಧಿಕಾರಿ, ಪೊಲೀಸ್ ಅಧಿಕಾರಿ ಹಾಗೂ ಅಬಕಾರಿ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿ ಚುನಾವಣಾ ಅಕ್ರಮಗಳ ದೂರನ್ನು ಪರಿಶೀಲಿಸಲು ಹಾಗೂ ಅಕ್ರಮ ತಡೆಯಲು ಪರಿಣಾಮಕಾರಿಯಾಗಿ ಪರಸ್ಪರ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಮಂಗಳೂರು ಮಹಾನಗರಪಾಲಿಕೆ, ಮೂಡಬಿದರೆ ಪುರಸಭೆ, ಬಂಟ್ವಾಳ ಪುರಸಭೆ, ಪುತ್ತೂರು ಪುರಸಭೆ, ಬೆಳ್ತಂಗಡಿ ಪಟ್ಟಣ ಪಂಚಾಯತ್, ಸುಳ್ಯ ಪಟ್ಟಣ ಪಂಚಾಯತ್, ಉಳ್ಳಾಲ ಪುರಸಭೆಗಳನ್ನೊಳಗೊಂಡ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.
15-02-13ರಿಂದ 11-3-13 ರವರೆಗೆ ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸದಾಚಾರ ಸಂಹಿತೆ ಜಾರಿಯಲ್ಲಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ 32 ಸೆಕ್ಟರ್ ಅಧಿಕಾರಿಗಳು, ಮೂಡಬಿದ್ರೆಯಲ್ಲಿ ಇಬ್ಬರು, ಉಳ್ಳಾಲದಲ್ಲಿ ಮೂವರು, ಬಂಟ್ವಾಳಕ್ಕೆ 3, ಪುತ್ತೂರಿಗೆ 4, ಬೆಳ್ತಂಗಡಿಗೆ 1, ಸುಳ್ಯ 2 ಸೇರಿದಂತೆ ಒಟ್ಟು 47 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಸೆಕ್ಟರ್ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿದ್ದು, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶ ಗುರುತಿಸುವಿಕೆ ಹಾಗೂ ಮಾಹಿತಿ ಸಂಗ್ರಹಿಸುವಿಕೆಯ ಹೊಣೆಯೂ ಇವರ ಮೇಲಿದೆ. ಚುನಾವಣಾ ಪ್ರಚಾರ ವೆಚ್ಚದ ಮೇಲೂ ನಿಗಾ ವಹಿಸಬೇಕಿದೆ. ಚುನಾವಣಾ ಪೂರ್ವ ಜವಾಬ್ದಾರಿ, ಚುನಾವಣಾ ದಿನಾಂಕದ ಕರ್ತವ್ಯ ಹಾಗೂ ಚುನಾವಣಾ ಬಳಿಕದ ಜವಾಬ್ದಾರಿಯೆಂದು ವಿಭಾಗಿಸಿ ಇವರಿಗೆ ಹೆಚ್ಚಿನ ಹೊಣೆಗಾರಿಕೆ ವಹಿಸಲಾಗಿದೆ. ಇದೇ ರೀತಿಯ ಸಮಗ್ರ ತರಬೇತಿಯನ್ನು ನೀಡಲಾಗುವುದು. ಸಮಸ್ಯೆಗಳಿದ್ದರೆ ತಕ್ಷಣ ಆರ್ ಒಗಳ ಗಮನಕ್ಕೆ ತನ್ನಿ. ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿ ಎಂದ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ದೂರುಗಳು ನೇರವಾಗಿ ತನಗೆ ಬಂದರೆ ಪರಿಣಾಮ ನೆಟ್ಟಗಿರದು. ಚುನಾವಣಾ ಕೆಲಸದಲ್ಲಿ ಕರ್ತವ್ಯಲೋಪಕ್ಕೆ ಅವಕಾಶ ನೀಡದೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಿ ಎಂದರು.
ಮಂಗಳೂರು ಮಹಾನಗರಪಾಲಿಕೆಯಲ್ಲಿ 60 ವಾರ್ಡುಗಳಿದ್ದು, 379 ಮತಗಟ್ಟೆಗಳನ್ನು ನಿಗದಿಪಡಿಸಲಾಗಿದೆ. ಒಟ್ಟು 312579 ಮತದಾರರಿದ್ದು, 153226 ಪುರುಷರು, 159353 ಮಹಿಳೆಯರಿದ್ದಾರೆ. ಮೂಡಬಿದ್ರೆ ಪುರಸಭೆಯಲ್ಲಿ 23 ವಾರ್ಡುಗಳಿದ್ದು, 23 ಮತಗಟ್ಟೆಗಳಿವೆ. ಒಟ್ಟು 19458 ಮತದಾರರಿದ್ದು, 9624 ಪುರುಷರು ಮತ್ತು 9834 ಮಹಿಳೆಯರಿದ್ದಾರೆ. ಉಳ್ಳಾಲ ಪುರಸಭೆಯಲ್ಲಿ 27 ವಾರ್ಡುಗಳಿದ್ದು, 35 ಮತಗಟ್ಟೆಗಳಿವೆ. 34513 ಮತದಾರರಿದ್ದು, 16820 ಪುರುಷರು, 17693 ಮಹಿಳೆಯರಿದ್ದಾರೆ. ಬಂಟ್ವಾಳ ಪುರಸಭೆಯಲ್ಲಿ 23 ವಾರ್ಡುಗಳಿದ್ದು, 31 ಮತಗಟ್ಟೆಗಳಿವೆ. 36830 ಒಟ್ಟು ಮತದಾರರ ಸಂಖ್ಯೆ. ಇವರಲ್ಲಿ ಪುರುಷರು 18282, ಮಹಿಳೆಯರು 18584.
ಪುತ್ತೂರು ಪುರಸಭೆಯಲ್ಲಿ 27 ವಾರ್ಡುಗಳಿದ್ದು, 42 ಮತಗಟ್ಟೆಗಳಿವೆ. 33 727 ಒಟ್ಟು ಮತದಾರರಿದ್ದು, 16437 ಪುರುಷರು, 16290 ಮಹಿಳೆಯರು. ಬೆಳ್ತಂಗಡಿಯಲ್ಲಿ 11 ವಾರ್ಡುಗಳು, 11 ಮತಗಟ್ಟೆಗಳು, 5140 ಮತದಾರರು ಒಟ್ಟಿಗಿದ್ದು, ಇವರಲ್ಲಿ ಪುರುಷರು 2522, ಮಹಿಳೆಯರು 2618. ಸುಳ್ಯದಲ್ಲಿ 18 ವಾರ್ಡುಗಳು, 18 ಮತಗಟ್ಟೆಗಳು, 11269 ಮತದಾರರು. ಇವರಲ್ಲಿ ಪುರುಷರು 5699, ಮಹಿಳೆಯರು 5570.
ಜಿಲ್ಲೆಯಲ್ಲಿ ಒಟ್ಟು 189 ವಾರ್ಡುಗಳಿದ್ದು, 539 ಮತಗಟ್ಟೆಗಳನ್ನು ಪಟ್ಟಿ ಮಾಡಲಾಗಿದೆ. ಒಟ್ಟು 453516 ಮತದಾರರಿದ್ದು, ಪುರುಷರು 222610, ಮಹಿಳೆಯರು 229942.
ನಾಮ ಪತ್ರ ಸಲ್ಲಿ ಸುವ ವೇಳೆ ಅಭ್ಯರ್ಥಿ ಯನ್ನೊ ಳಗೊಂ ಡಂತೆ ಒಟ್ಟು 5 ಜನರು ಜೊತೆ ಗಿರಲು ಅವ ಕಾಶ ವಿದ್ದು, ನಾಮ ಪತ್ರ ಸಲ್ಲಿಸುವ ಸ್ಥಳ ಗಳಲ್ಲಿ ಪೊಲೀಸ್ ವ್ಯವಸ್ಥೆ ಮಾಡ ಲಾಗಿದೆ. ಪಾಲಿಕೆ ವ್ಯಾಪ್ತಿ ಯಲ್ಲಿ 1ರಿಂದ 10 ವಾರ್ಡು ಗಳವರು ಪಾಲಿಕೆ ಉಪಕಚೇರಿ ಸುರತ್ಕಲ್ ನಲ್ಲಿ, 21ರಿಂದ 25 ಮತ್ತು 31ರಿಂದ 35 ಪಾಲಿಕೆ ಉಪಕಚೇರಿ ಕದ್ರಿಯಲ್ಲಿ, 11ರಿಂದ 20, 26ರಿಂದ 30, 36ರಿಂದ 60 ವಾರ್ಡುಗಳವರು ಪಾಲಿಕೆ ವ್ಯಾಪ್ತಿಯ ಲಾಲ್ ಬಾಗ್ ನಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಮೂಡಬಿದ್ರೆಯಲ್ಲಿ ಪುರಸಭೆ ಕಚೇರಿ ಮೂಡಬಿದ್ರೆಯಲ್ಲಿ, ಉಳ್ಳಾಲದಲ್ಲಿ ಪುರಸಭೆ ಕಚೇರಿ ಉಳ್ಳಾಲದಲ್ಲಿ, ಬಂಟ್ವಾಳದಲ್ಲಿ ಪುರಸಭೆ ಕಚೇರಿ ಬಂಟ್ವಾಳದಲ್ಲಿ, ಪುತ್ತೂರು ಪುರಸಭೆ ಕಚೇರಿ, ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಕಚೇರಿ, ಸುಳ್ಯ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಾಮ ಪತ್ರ ಸಲ್ಲಿಸಬಹುದಾಗಿದೆ.
ಅಬಕಾರಿ ಇಲಾಖೆಯ ಹೊಣೆ ಗುರುತರವಾಗಿದ್ದು, ಚುನಾವಣಾ ಸಮಯದಲ್ಲಿ ಇಲಾಖೆ ಲೈಸನ್ಸ್ ಇಲ್ಲದೆ ಕಾರ್ಯಾಚರಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ. ಮಾರಾಟದಲ್ಲಿ %20ರಷ್ಟು ಹೆಚ್ಚಳ ಕಂಡುಬಂದರೆ ತನಿಖೆ ನಡೆಸಿ ಕ್ರಮಕೈಗೊಳ್ಳಿ; ಮಾರಾಟದ ಅವಧಿ ವಿಸ್ತರಣೆಯಾದರೆ ಇಲಾಖೆ ಉತ್ತರಿಸಬೇಕಿದೆ. ಹಾಗಾಗಿ ಅಬಕಾರಿ ಇಲಾಖೆ ಹೆಚ್ಚಿನ ಜಾಗೃತಿಯಿಂದ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು. ಚೆಕ್ ಪೋಸ್ಟ್ ಗಳನ್ನು ಬಲಪಡಿಸಿ. ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಡಿ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್, ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ., ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್, ಡಿಸಿಪಿ ಮುತ್ತುರಾಯ, ಮಂಗಳೂರು ಸಹಾಯಕ ಆಯುಕ್ತ ಸದಾಶಿವ ಪ್ರಭು,ಪುತ್ತೂರು ಎ ಸಿ ಪ್ರಸನ್ನ ಅವರನ್ನೊಳಗೊಂಡಂತೆ ಹಿರಿಯ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.