ಮಂಗಳೂರು, ನವೆಂಬರ್. 20: ಬೇಕಾಬಿಟ್ಟಿ ಪ್ಲಾಸ್ಟಿಕ್ ಬಳಕೆಯಿಂದಾಗಿ ತ್ಯಾಜ್ಯ ವಿಲೇವಾರಿ ಸವಾಲಾಗಿ ಪರಿಣಮಿಸಿದ್ದು, ಪ್ಲಾಸ್ಟಿಕ್ ನಿಷೇಧ ಮಂಗಳೂರು ಮಹಾನಗರಪಾಲಿಕೆಗೆ ಅನಿವಾರ್ಯ ಎಂದು ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ಹೇಳಿದರು.
ಅವರು ಇಂದು ವಾರ್ತಾ ಇಲಾಖೆ, ದ.ಕ.ಜಿಲ್ಲಾ ಡಳಿತ, ಮಹಾ ನಗರ ಪಾಲಿಕೆ ಹಾಗೂ ಸಂತ ಅಲೋ ಶಿಯಸ್ ಕಾಲೇಜು ಮಂಗ ಳೂರು ಇವರ ಸಂಯುಕ್ತಾ ಶ್ರಯ ದಲ್ಲಿ ಏರ್ಪ ಡಿಸಿದ 'ಪ್ಲಾಸ್ಟಿಕ್ ಮುಕ್ತ ನಗ ರಕ್ಕೆ ವಿದ್ಯಾರ್ಥಿ ಗಳ ಕೊಡುಗೆ' ಸಂವಾದ ಕಾರ್ಯ ಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಪ್ಲಾಸ್ಟಿಕ್ ಚಿರಂಜೀವಿ; ಇದಕ್ಕೆ ನಾಶ ಎಂಬುದಿಲ್ಲ. ಮಣ್ಣಿನಲ್ಲಿ ಕರಗುವುದಿಲ್ಲ, ಉರಿಸಿದರೆ ಪರಿಸರಕ್ಕೆ ಮಾರಕ. ನಮಗೆ ಇದರಿಂದಾಗುವ ಉಪಕಾರ ಕ್ಷಣಿಕ ಆದರೆ ಬಾಧಕಗಳು ಅಧಿಕ ಎಂದ ಅವರು, ಮಹಾನಗರಪಾಲಿಕೆ ಮ್ಯಾನ್ ಹೋಲ್ ಗಳೆಲ್ಲ ಪ್ಲಾಸ್ಟಿಕ್ನಿಂದಾಗಿ ಸಮಸ್ಯೆ ಎದುರಿಸುತ್ತಿದೆ. ನಮ್ಮ ಡಂಪಿಂಗ್ ಯಾರ್ಡ್ ಪಚ್ಚನಾಡಿ ಇನ್ನೂ 20ರಿಂದ 30 ವರ್ಷ ಬಳಸಬಹುದಾದ್ದು ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಇನ್ನೂ 10 ವರ್ಷಗಳಲ್ಲಿ ತುಂಬಲಿದೆ. ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇ ಬೃಹತ್ ಸಮಸ್ಯೆಯಾಗಲೂ ಪ್ಲಾಸ್ಟಿಕ್ ಕಾರಣ. ಇಂದು ನಮ್ಮ ಜೀವನದಲ್ಲಿ ಅನಿವಾರ್ಯ ಎನಿಸಿರುವ ಪ್ಲಾಸ್ಟಿಕ್ ಇಲ್ಲದೆಯೂ ನಾವು ಉತ್ತಮ ಬದುಕು ಬದುಕಿದ್ದೆವು ಎಂಬುದನ್ನು ಸ್ಮರಿಸಿದರೆ ಪ್ಲಾಸ್ಟಿಕ್ ಬಳಸದಿರಲು ಸಾಧ್ಯವಿದೆ. ನಮ್ಮ ನಂತರದವರಿಗೆ ಉತ್ತಮ ಪರಿಸರವನ್ನು ಬಿಟ್ಟು ಹೋದ ತೃಪ್ತಿ ನಮ್ಮದಾಗಲಿದೆ. ಹಾಗಾಗಿ ಪಾಲಿಕೆ ಕಟ್ಟು ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧ ಅನುಷ್ಠಾನಕ್ಕೆ ತರಲಿದೆ ಎಂದು ಪಾಲಿಕೆ ಆಯುಕ್ತರು ಹೇಳಿದರು.
ಎಲ್ಲೆಂ ದರಲ್ಲಿ ಪ್ಲಾಸ್ಟಿಕ್ ನಲ್ಲಿ ಕಸ ತುಂಬಿ ಎಸೆ ಯುವು ದರಿಂದ ನಮ್ಮ ರಸ್ತೆ ಗಳು, ಜಲ ಮೂಲಗಳು ಹಾಳಾಗಿವೆ. ಪ್ರಾಣಿಗಳು, ಜಲ ಚರ ಗಳಿಗೆ ತೊಂದರೆ ಯಾಗಿದೆ ಎಂದ ಅವರು, ಪ್ಲಾಸ್ಟಿಕ್ ನ್ನು ಬಳಸಿ ಎಸೆಯುವುದರಿಂದಾಗುತ್ತಿರುವ ಅಪಾಯಗಳನ್ನು ಸವಿವರವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು, ಜಿಲ್ಲಾಡಳಿತದ ನಿಲುವು ಜನಪರ ನಿಲುವು. ಜನರಿಂದ ನಿಷೇಧಕ್ಕೆ ಉತ್ತಮ ಬೆಂಬಲ ದೊರಕಿದ್ದು, ವಿದ್ಯಾರ್ಥಿಗಳ ಸಹಕಾರದಿಂದ ಸ್ವಚ್ಛ, ಹಸಿರು ಮಂಗಳೂರು ನಮ್ಮದಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಜನರಲ್ಲಿ ಜಾಗೃತಿ ಮೂಡಿಸಲು ನಿಷೇಧ ಅನಿವಾರ್ಯವಾಗಿತ್ತು ಎಂದರು. ಸಾಕಷ್ಟು ತಿಂಗಳುಗಳ ಮುಂಚಿತವಾಗಿ ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಜಿಲ್ಲಾಡಳಿತ ಕೈಗೊಂಡಿತ್ತು ಎಂದರು.
ಸಂವಾದ ಕಾರ್ಯಕ್ರಮವನ್ನು 'ಸ್ವಚ್ಛ ನಗರ' ಚಿತ್ರಗಳನ್ನು ಪರಿಸರದಿಂದಲೇ ತಯಾರಿಸಿದ ಬಣ್ಣಗಳನ್ನು ಬಳಸಿ ಬಿಡಿಸುವ ಮೂಲಕ ಪುತ್ತೂರಿನ ಬಾಲಭವನದ ಕಲಾಪ್ರತಿಭೆಗಳಾದ ಕು.ಸೌಜನ್ಯ ಬಲ್ನಾಡ್,ಸನತ್ ರಾಗಿ ಕುಮೇರಿ ಹಾಗೂ ಶರತ್ ಅವರು ಉದ್ಘಾಟಿಸಿದರು.
ಸಮಾ ರಂಭದ ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ಕಾಲೇಜು ಪ್ರಾಂಶು ಪಾಲ ರಾದ ರೆ.ಫಾ.ಸ್ವೀ ಬರ್ಟ್ ಡಿ.ಸಿಲ್ವಾ ಮಾತ ನಾಡುತ್ತಾ ನಾಳಿನ ಪೀಳಿಗೆ ಗಾಗಿ ನಾವು ಪರಿಸ ರವನ್ನು ರಕ್ಷಿಸ ಬೇಕು. ನಮ್ಮ ಭೂಮಿ ಯನ್ನು ನಾವು ಪ್ಲಾಸ್ಟಿಕ್ ನಿಂದ ಕಾಪಾಡಬೇಕು. ಈ ಕಾರ್ಯಕ್ಕೆ ವಿದ್ಯಾರ್ಥಿಗಳ ಸಹಕಾರ ಅಗತ್ಯ ಎಂದ ಅವರು, ಸಂತ ಅಲೋಷಿಯಸ್ ಕಾಲೇಜು ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಸಮಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು,ಉಪನ್ಯಾಸಕರು ಹಾಗೂ ರೇಡಿಯೋ ಸಾರಂಗ್ ನ ಸಂಪೂರ್ಣ ತಂಡ ಪಾಲ್ಗೊಂಡಿತ್ತು, ವಾರ್ತಾಧಿಕಾರಿ ರೋಹಿಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮುದಾಯ ರೇಡಿಯೋದ ಅಭಿಷೇಕ್ ವಂದಿಸಿದರು.