ಮಂಗಳೂರು,ನವೆಂಬರ್.01: 56 ನೇ ಕನ್ನಡ ರಾಜ್ಯೋತ್ಸ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.ಜಿಲ್ಲಾಳಿತದ ಆಶ್ರಯದಲ್ಲಿ ನಗರದ ನೆಹರು ಮೈದಾನಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಿ.ಟಿ. ರವಿ ಅವರು ಧ್ವಜಾರೋಹಣಗೈದು ಗೌರವವಂದನೆ ಸ್ವೀಕರಿಸಿದರು.
ವಿಧಾನ ಸಬಾ ಉಪ ಸಭಾಪತಿ ಎನ್. ಯೋಗಿಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಪಶ್ಚಿಮ ವಲಯ ಐಜಿಪಿ
ಪ್ರತಾಪ್ ರೆಡ್ಡಿ, ಶಾಸಕ ರುಗ ಳಾದ ಯು.ಟಿ. ಖಾದರ್, ಮೋನಪ್ಪ ಭಂಡಾರಿ, ಜಿಲ್ಲಾಧಿ ಕಾರಿ ಡಾ. ಎನ್.ಎಸ್. ಚನ್ನಪ್ಪ ಗೌಡ, ಜಿಲ್ಲಾ ಪಂಚಾ ಯತ್ ಅಧ್ಯಕ್ಷ ಕೊರ ಗಪ್ಪ ನಾಯಕ, ಮೂಡದ ಅಧ್ಯಕ್ಷ ರಮೇಶ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕಾಸರ ಗೋಡು ಚಿನ್ನಾ,ಮೀನು ಗಾರಿಕಾ ಭೀವೃದ್ದೀ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್,
ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾರಿ ಡಾ. ವಿಜಯ ಪ್ರಕಾಶ್, ಉಪ ಮಹಾ ಪೌರ ರಾದ ಶ್ರೀಮತಿ ಅಮಿತ ಕಲಾ, ಪೋಲಿಸ್ ಆಯುಕ್ತ ಮನೀಶ್ ಕರ್ಬೀ ಕರ್,ಮನಪಾ ಆಯುಕ್ತ ಡಾ. ಹರೀಶ್ ಕುಮಾರ್ ಮತ್ತಿ ತರ ಅಧಿ ಕಾರಿ ಗಳು ಪಾಲ್ಗೊಂ ಡಿದ್ದರು.
* ಇದೇ ಸಂದರ್ಭ ದಲ್ಲಿ ಕಲೆ, ಶಿಕ್ಷಣ, ಕ್ರೀಡೆ ಹಾಗೂ ಸಾಂ ಸ್ಕೃತಿಕ ಕ್ಷೇತ್ರ ದಲ್ಲಿ ಅಸಾ ಧಾರಣ ಪ್ರತಿಭೆ ತೋರಿದ ದ.ಕ. ಜಿಲ್ಲೆಯ 8 ಮಂದಿ ಮಕ್ಕ ಳಿಗೂ ಕಾರ್ಯ ಕ್ರಮ ದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಮಾಡ ಲಾಯಿತು.
* ನಗರದ ಜ್ಯೋತಿ ವೃತ್ತ ದಿಂದ ನೆಹರೂ ಮೈದಾ ನದ ವರೆಗೆ ವಿವಿಧ ಕಲಾ ತಂಡ ಗಳ ಜೊತೆಗೆ ಕನ್ನಡ ಭುವ ನೇಶ್ವರಿ ದೇವಿಯ ಪ್ರ ತಿಕೃತಿಯ ಮೆರ ವಣಿಗೆ ನಡೆ ಯಿತು. ಇದೇ ಅವಧಿ ಯಲ್ಲಿ ನಗರದ ಲಾಲ್ಭಾಗ್ ವೃತ್ತ ದಿಂದ ಪ್ಲಾಸ್ಟಿಕ್ ನಿಷೇಧ ಆಂದೋ ಲನದ ಬಗ್ಗೆ ಜಾಗೃತಿ ಮೂಡಿ ಸುವ ನಿಟ್ಟಿ ನಲ್ಲಿ ವಿವಿಧ ಶಾಲಾ ಕಾಲೇ ಜುಗಳ ವಿದ್ಯಾರ್ಥಿ ಗಳಿಂದ ಪ್ಲಾಸ್ಟಿಕ್ ಜಾಥಾವೂ ನೆಹರೂ ಮೈದಾನದವರೆಗೆ ನಡೆಯಿತು.
*ಜಾಥಾದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ತಂಡಗಳಿಗೆ ಬಹುಮಾನ ನೀಡಲಾಗಿದ್ದು, ಪ್ರಥಮ ಬಹುಮಾನವನ್ನು ಸಂಜೀವಿನಿ ನರ್ಸಿಂಗ್ ಇನ್ಸ್ಟಿಟ್ಯೂಟ್ ಕುಡುಪು, ದ್ವಿತೀಯ ಯೆನೆಪೊಯ ಕಾಲೇಜು ಹಾಗೂ ತೃತೀಯ ಎಸ್ಸಿಎಸ್ ನರ್ಸಿಂಗ್ ಕಾಲೇಜು ಪಡೆಯಿತು.
*ನೆಹರೂ ಮೈದಾನದಲ್ಲಿ ನಡೆದ ಪಥಸಂಚಲನದಲ್ಲಿ ಉತ್ತಮ ಪ್ರದರ್ಶನ ನೀಡಿದ ಎನ್ ಸಿ ಸಿ ಏರ್ ವಿಂಗ್ ಸೀನಿಯರ್ ಪ್ರಥಮ ಹಾಗೂ ಎನ್ ಸಿಸಿ ಆರ್ಮಿ ಸೀನಿಯರ್ ತಂಡಕ್ಕೆ ದ್ವಿತೀಯ ಬಹುಮಾನ ನೀಡಲಾಯಿತು.
ಇದೇ ವೇಳೆ ದ.ಕ. ಜಿಲ್ಲೆಯ ಸ್ತ್ರೀ ಶಕ್ತಿ ಗುಂಪು ಗಳು ಉತ್ಪಾ ದಿಸಿದ ಉತ್ಪ ನ್ನಗಳ ಮಾರಾಟ ಕ್ಕಾಗಿ ಸಂಚಾರಿ ಮಾರು ಕಟ್ಟೆ ವಾಹ ನಕ್ಕೆ ಸಚಿವ ಸಿ.ಟಿ. ರವಿ ಚಾಲನೆ ನೀಡಿ ದರು.
ಜಿಲ್ಲಾ ಉಸ್ತುವಾರಿ ಸಚಿವರ ರಾಜ್ಯೋತ್ಸವ ಸಂದೇಶ:
ಜಿಲ್ಲಾ ಪಂಸಮಸ್ತ ಕನ್ನಡ ಕುಲಕೋಟಿಗೆ 56ನೇ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಕನ್ನಡ ಭಾಷೆ ಮಾತ ನಾಡುವ ಜನ ರೆಲ್ಲರ ಶ್ರಮದ ಫಲವಾಗಿ ಒಂದಾದ ಸುದಿನ 1.11.1956. ಈ ದಿನದ ಸವಿ ನೆನಪಿ ಗಾಗಿ ಕನ್ನಡ ಭಾಷೆಯ ನ್ನಾಡುವ ಜನ ರೆಲ್ಲ ಒಂದು ರಾಜ ಕೀಯ ಆಡಳಿ ತದ ಕೆಳಗೆ ಒಗ್ಗೂ ಡಿದ್ದರ ಸಂಭ್ರಮ ಕ್ಕಾಗಿ ನಾವಿಲ್ಲಿ ಸೇರಿ ದ್ದೇವೆ. ಸಂಭ್ರ ಮಿಸು ತಿದ್ದೇವೆ.
ಆರಂಕು ಶಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ'' ಎಂದು ಉತ್ಕಟವಾಗಿ ತಾಯ್ನಾಡಿನ ಪ್ರೇಮವನ್ನು ಸಾರಿದ ಮಹಾಕವಿ ಪಂಪನಿಂದ ಮೊದಲುಗೊಂಡು 'ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ' ಎಂದು ಹೇಳಿದ ರಸಋಷಿ ಕುವೆಂಪುವರೆಗೆ ಕನ್ನಡ ಸಾಹಿತ್ಯ ಸಂಪತ್ತು ಹಬ್ಬಿದೆ.
ಜೈನ ಕವಿಗಳ, ಪುರಾಣಗಳ, ಶಿವಶರಣರ ವಚನ ಸಮುದ್ರದ, ಹರಿದಾಸರ ಭಕ್ತಿಸಾರದ ಪರಂಪರೆ ನಮ್ಮದು. ಎಲ್ಲಾ ಭಾಷೆ, ಮತ, ಪಂಥಗಳ ವಿವಿಧ ಜನರು ಹಿಂದಿನಿಂದ ಒಟ್ಟಾಗಿ ಬಾಳಿ, ಬದುಕಿದ್ದಾರೆ. ಗಂಗರಸರು, ಕದಂಬರು, ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ಬಲ್ಲಾಳರು, ವಿಜಯನಗರದ ಅರಸರು, ನವಾಬರು, ಸುಲ್ತಾನರು, ಮೈಸೂರಿನ ಒಡೆಯರು, ನೂರಾರು ಪಾಳೆಯಗಾರರು ಇಲ್ಲಿ ಆಳಿ ಮೆರೆದಿದ್ದಾರೆ.
ಇದು ಚಿನ್ನದ ನಾಡು, ಗಂಧದ ಬೀಡು, ಸಂಗೀತ, ನೃತ್ಯ, ಶಿಲ್ಪ ವಿವಿಧ ರೀತಿಯ ಕಲೆಗಳ ಜೊತೆಗೆ ವೀಣೆಯ ಬೆಡಗಿಗೆ ಹೆಸರಾದ ಬೀಡು.
1947ನೇ ಆಗಸ್ಟ್ 15ರಂದು ಭಾರತವು ಸ್ವಾತಂತ್ರ್ಯ ಪಡೆದ ನಂತರ ಕನ್ನಡಿಗರ ಮುಂದಿದ್ದ ಸವಾಲೆಂದರೆ ಕನ್ನಡ ಮಾತನಾಡುತ್ತಿದ್ದ, ಜನರು ವಾಸಿಸುತ್ತಿದ್ದ ಪ್ರದೇಶಗಳ ಏಕೀಕರಣ. ಬೇರೆ ಬೇರೆ ಸಂಸ್ಥಾನಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಹಂಚಿಹೋಗಿದ್ದ ಕನ್ನಡ ಪ್ರದೇಶಗಳು ಏಕೀಕರಣಗೊಂಡು ಕರ್ನಾಟಕ ರಾಜ್ಯೋದಯವಾದದ್ದೇ ಒಂದು ರೋಚಕ ಕಥೆ.
ಹಲವು ಭಾಷೆ, ಸಂಸ್ಕೃತಿಗಳ ತವರೂರಾದ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ತನ್ನ ಹೆಸರಲ್ಲಿ ಮಾತ್ರ ಕನ್ನಡವನ್ನು ಹೊಂದಿರದೆ ಕನ್ನಡತನವನ್ನೂ ತನ್ನ ಉಸಿರಾಗಿಸಿಕೊಂಡಿರುವ ವಿಶಿಷ್ಠ ತಾಣ. . 'ಪಡುವಣ ಕಡಲಿನ ತೆಂಗಿನ ಮಡಿಲಿನ ಮರೆಯಲಿ ಮೆರೆವುದು ನಾಡೊಂದು, ಸೃಷ್ಟಿಯ ಮಾತೆಯು ಮೀಸಿಹ ಸೊಬಗಿನ ಹೊದಿಕೆ ಹೊದ್ದಿಹ ಬೀಡೊಂದು' ಎಂದು ಕರಾವಳಿಯ ದಕ್ಷಿಣ ಕನ್ನಡವನ್ನು ಕವಿ ಕಡೆಂಗೋಡ್ಲು ಶಂಕರಭಟ್ ವರ್ಣಿಸಿದ್ದಾರೆ.
ಕನ್ನಡ ಬೇರೆಯಲ್ಲ, ಕರ್ನಾಟಕ ಬೇರೆಯಲ್ಲ ಎಂಬ ಅವಿನಾಭಾವ ಪ್ರಜ್ಞೆಯೊಂದಿಗೆ ನಮ್ಮ ನಿತ್ಯದ ವ್ಯವಹಾರ ನಡೆಯಬೇಕು. ಶಿಕ್ಷಣವೇ ಅಭಿವೃದ್ಧಿಯ ಮೂಲಮಂತ್ರ. ಕನ್ನಡತನವೇ ನಮ್ಮ ಬದುಕಿನ ಮಂತ್ರ ಎಂಬ ಭಾವನೆಯ ಜೊತೆಗೆ ಬೆಳೆದ ದಕ್ಷಿಣ ಕನ್ನಡ ಜಿಲ್ಲೆ ಕನರ್ಾಟಕ ರಾಜ್ಯದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಮಹತ್ತರದ್ದು.
ಕನ್ನಡ ಕಾವ್ಯ ರಚಿಸಿದ ರತ್ನಾಕರವರ್ಣಿಯ ನೆಲ ಇದು.. ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಹಾಗೆಯೇ ಪಂಜೆ ಮಂಗೇಶರಾಯರ ಹುಟ್ಟೂರು ಇದು. ಕನ್ನಡದ ಮೂವರು ಜ್ಞಾನಪೀಠ ಪುರಸ್ಕೃತರ ಮೂಲವಿರುವುದು ಇಲ್ಲಿಯೇ. ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ ಜನಿಸಿದ್ದು ಇಲ್ಲಿಯೇ.
ಭಾಷೆ ಮತ್ತು ಮಾಧ್ಯಮದ ಪ್ರಶ್ನೆಗಳನ್ನು ನಾವು ದುರದೃಷ್ಟವಶಾತ್ ಕೇವಲ ಉದ್ಯೋಗಾವಕಾಶ ಪ್ರಶ್ನೆಯ ಹಿನ್ನಲೆಯಲ್ಲಿ ಮಾತ್ರ ನೋಡುತ್ತೇವೆ. ಇದು ನಮ್ಮ ಸಂಕುಚಿತ ದೃಷ್ಟಿ. ಒಂದು ಭಾಷೆಯನ್ನು ಕಲಿಯುವುದೆಂದರೆ ಆ ಭಾಷೆಯೊಳಗಡಗಿರುವ ಸಂಸ್ಕೃತಿ, ಕನಸುಗಳನ್ನು, ಜನಜೀವನದ ರೀತಿ, ನೀತಿ ಎಲ್ಲವನ್ನೂ ತಿಳಿಯುವುದು ಅಥವಾ ಮರೆಯುವುದು ಎಂದೇ ಅರ್ಥ. ಇದನ್ನು ನಾವು ಸೂಕ್ಷ್ಮವಾಗಿ ಗ್ರಹಿಸದೆ ಹೋದರೆ ನಮ್ಮ ಮಕ್ಕಳು, ಮೊಮ್ಮಕ್ಕಳ ವೈಯಕ್ತಿಕ ಕೌಟುಂಬಿಕ ಜೀವನದ ಮೇಲಾಗುವ ದುಷ್ಪರಿಣಾಮ ತೀವ್ರವಾದದ್ದು.
ವೈಯಕ್ತಿಕ ಲೌಕಿಕ ಜೀವನದ ಅಗತ್ಯಗಳಿಗಾಗಿ ಎಷ್ಟು ಭಾಷೆಗಳನ್ನು ಕಲಿಯಬೇಕು, ಯಾವ ಹಂತದಲ್ಲಿ ಕಲಿಯಬೇಕು, ಎಷ್ಟು ಕಲಿಯಬೇಕು ಎಂಬುದನ್ನು ಕುರಿತು ಕೂಡಾ ನಾವು ಯೋಚಿಸಬಹುದು. ಪಯಣ ಯಾವುದೇ ದಿಕ್ಕಿನಲ್ಲಿರಲಿ, ಭಾಷೆ, ಮಾಧ್ಯಮದ ಪ್ರಶ್ನೆಗಳನ್ನು ಎದುರಿಸುವಾಗ ಜೊತೆ ಜೊತೆಯಲ್ಲಿ ಸಾಮಾಜಿಕ, ಆರ್ಥಿಕ ಪ್ರಶ್ನೆಗಳನ್ನು ಎದುರಿಸಲು ನಾವು ಮನಸ್ಸು ಮಾಡಬೇಕು.
ಕನ್ನಡ ರಾಜ್ಯೋದಯವಾಗಿ ಅರ್ಧಶತಮಾನ ಕಳೆದಿದೆ. ಆದರೂ ಪರಿಪಕ್ವತೆ ಯಕ್ಷ ಪ್ರಶ್ನೆ. ರಾಜ್ಯದ ಏಕೀಕರಣಕ್ಕಾಗಿ ಅದಮ್ಯ ಉತ್ಸಾಹದಿಂದ ಹೋರಾಟ ನಡೆಯಿತು. ಅದೇ ಉತ್ಸಾಹ ಭಾಷೆಯನ್ನು ಉಳಿಸಿ ಬೆಳೆಸುವಲ್ಲೂ ಇರಬೇಕು. ಮಾನ್ಯ ವರಕವಿ ಬೇಂದ್ರೆ, ಮಾಸ್ತಿ ಮುಂತಾದ ಹಲವಾರು ಗಣ್ಯರು, ಅನ್ಯಭಾಷಾ ಕುಲದವರು; ಆದರೂ ಕನ್ನಡ ಭಾಷೆ ಮೇಲೆ ಅಭಿಮಾನವಿರಿಸಿ ಈ ಭಾಷೆಗೆ ಬಹುದೊಡ್ಡ ಸಂಪತ್ತಾದರು. ಇದನ್ನೆಲ್ಲಾ ಇಂದು ನಾವು ಆಲೋಚಿಸಬೇಕಿದೆ. ಭಾಷೆಗೆ ಜೀವ ಚೈತನ್ಯ ತುಂಬಿದವರನ್ನು ಇಂದು ನೆನಪಿಸಿಕೊಳ್ಳಬೇಕಿದೆ.
ಕನ್ನಡ ರಾಜ್ಯೋತ್ಸವದ ಈ ಪುಣ್ಯ ದಿನವನ್ನು, ಸಡಗರದಿಂದ ಆಚರಿಸಲು ನಾವೆಲ್ಲ ಒಟ್ಟು ಸೇರಿದ್ದೇವೆ. ರಾಜ್ಯದ 6 ಕೋಟಿ ಕನ್ನಡಿಗರಿಗೆ ಸಮಾನ ಜೀವನಾವಕಾಶದೊಂದಿಗೆ, ಭಿನ್ನ ಭಿನ್ನ ಕ್ಷೇತ್ರಗಳಲ್ಲಿ ಲಕ್ಷಾಂತರ ಗಣ್ಯರು ಗಣನೀಯ ಸಾಧನೆ ಮಾಡಿರುವ ಹೆಮ್ಮೆಯ ನಾಡಿದು. ಕನರ್ಾಟಕ ಕಟ್ಟುವ ಕಾಯಕ ನಿತ್ಯ- ನಿರಂತರ. ಸಮೃದ್ಧ, ಸ್ವಾಭಿಮಾನಿ ನಾಡಿನ ನಿಮರ್ಾಣದ ಬದ್ಧತೆಯೊಂದಿಗೆ ನಮ್ಮ ಸರಕಾರ ಮಾನ್ಯ ಮುಖ್ಯ ಮಂತ್ರಿ ಜಗದೀಶ ಶೆಟ್ಟರ್ ರವರ ನಾಯಕತ್ವದಲ್ಲಿ ಮುಂದಡಿ ಇಡುತ್ತಿದೆ. ನಾಡಿನ ಜನತೆಗೆ, ಸರ್ವತೋಮುಖ ಅಭಿವೃದ್ಧಿಗೆ ನೂತನ ಆಯಾಮ ನೀಡಿದೆ. ರಾಜ್ಯದ ಕೃಷಿಕರ, ಮೀನುಗಾರರ, ನೇಕಾರರ ಜೀವನ ನೇಪರ್ುಗೊಳಿಸಲು ಕಡಿಮೆ ಬಡ್ಡಿ ಸಾಲ, ಉಚಿತ ವಿದ್ಯುತ್, ತೆರಿಗೆ ರಹಿತ ಡೀಸೇಲ್ ಒದಗಿಸುತ್ತಿದೆ. ಶಾಲಾ ವಿದ್ಯಾರ್ಥಿಗಳ ಕಲಿಕೆಯ ಪ್ರೋತ್ಸಾಹಕ್ಕಾಗಿ ನೂರೆಂಟು ಯೋಜನೆಯಗಳನ್ನು ಹಮ್ಮಿ ಕೊಳ್ಳುತ್ತಿದೆ. ಬಡ ಜನರ ತುತರ್ು ಸೇವೆಗೆ ಸದಾ ಸನ್ನದ್ಧ ಸ್ಥಿತಿಯಲ್ಲಿ ಜಾಗೃತವಾಗಿರುವ 108 ಅಂಬುಲೆನ್ಸ್ ನೆರವು, ಪಡಿತರ ವಿತರಣೆ, ಭಾಗ್ಯ ಲಕ್ಷ್ಮಿ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ, ಗೋವುಗಳ ತಳಿ ಅಭಿವೃದ್ಧಿ ಮುಂತಾದ ಸರ್ವತೋಮುಖ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ರಾಷ್ಟ್ರದಲ್ಲಿಯೇ ಪ್ರಮುಖ ಹೆಸರು ಪಡೆದಿರುವ ನಿಗದಿತ ಅವಧಿಯೊಳಗೆ ಬದ್ಧತೆಯ ಸೇವೆ ಒದಗಿಸುವ ಸಕಾಲ - ಸರಕಾರದ ಮೇಲ್ಮೆಯನ್ನು ಎತ್ತಿಹಿಡಿದಿದೆ.
ಕನ್ನಡ ಕೇವಲ ಅರಿವಿನ ಭಾಷೆ ಅಲ್ಲ, ಅದು ಅನ್ನದ ಭಾಷೆಯು ಹೌದು, ಅಭಿಮಾನದ ಭಾಷೆಯು ಹೌದು ಎನ್ನುವುದನ್ನು ಸಾಕಾರಗೊಳಿಸಲು ನಮ್ಮ ಸರ್ಕಾರ ಎಲ್ಲ ವರ್ಗದ ಅಭಿವೃದ್ಧಿಗೆ ಕಟಿಬದ್ಧವಾಗಿದೆ. ಕನ್ನಡದಲ್ಲೇ ಓದಿದವರಿಗೆ ನೌಕರಿಯಲ್ಲಿ ಮೀಸಲಾತಿ, ಆಡಳಿತದಲ್ಲಿ ಪ್ರತಿಶತ ನೂರಕ್ಕೆ ನೂರರಷ್ಟು ಕನ್ನಡ ಬಳಕೆ, ಕನ್ನಡದ ಕಲಾವಿದರಿಗೆ ಮಾಸಾಶನ, ಕನ್ನಡ ವಿಶ್ವವಿದ್ಯಾನಿಲಯದ ಬಲವರ್ಧನೆ, ಕನ್ನಡ ಸಾಹಿತ್ಯ ಪರಿಷತ್ಗೆ ಅನುದಾನ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಅನುದಾನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಂದು ಕೋಟಿ ರೂ., ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ರೂ.5 ಲಕ್ಷ, ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರೂ.1 ಲಕ್ಷ, ಕನ್ನಡದ ಶ್ರೇಷ್ಠ ಕೃತಿಗಳ ಮರು ಮುದ್ರಣಕ್ಕೆ ಕ್ರಮ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ರೂ.1 ಲಕ್ಷ ಗೌರವಧನ, ಕನ್ನಡ ಸಂಸ್ಕೃತಿಯ ಮೂಲ ನೆಲೆಯಾದ ಜಾನಪದದ ಉಳಿವಿಗೆ ರಾಜ್ಯದ ಮೊದಲ ಜಾನಪದ ವಿಶ್ವವಿದ್ಯಾನಿಲಯ ಸ್ಥಾಪನೆ, ಕನ್ನಡ ಚಲನಚಿತ್ರಗಳಿಗೆ ಸಹಾಯಧನ, ಯಕ್ಷಗಾನ, ಬಯಲಾಟ, ನೃತ್ಯ, ರಂಗಭೂಮಿ ಇವುಗಳ ಸಂವರ್ಧನೆಗಾಗಿ ಈ ಅಕಾಡೆಮಿಗಳಿಗೆ ಅನುದಾನದ ಹೆಚ್ಚಳ, ಹೊರನಾಡ ಕನ್ನಡಪರ ಸಂಘಟನೆಗಳು ಹಾಗೂ ಸಮ್ಮೇಳನಗಳಿಗೆ ಅನುದಾನ (ಉದಾ: ಅಮೇರಿಕಾದ ಅಕ್ಕ, ದುಬೈ, ಕುವೈತ್) ಹೀಗೆ ಹತ್ತು ಹಲವು ಅರ್ಥಪೂರ್ಣ ಯೋಜನೆಗಳನ್ನು ಸಾಕಾರಗೊಳಿಸುವ ಮೂಲಕ ಜನಸಾಮಾನ್ಯನ ಹತ್ತಿರವಿರುವ ಜನಪರ ಸಕರ್ಾರ ನಮ್ಮದು.
ತಮ್ಮ ಕರ್ತವ್ಯ ನಿಷ್ಠೆಯಿಂದ ಹಲವು ಉತ್ತಮ ಮಾದರಿಗಳನ್ನು ನಮ್ಮೀ ಜಿಲ್ಲೆಯು ರಾಜ್ಯಕ್ಕೆ ನೀಡಿ, ನಮಗೆಲ್ಲ ಹೆಮ್ಮೆ ತಂದಿದೆ. ಎಲ್ಲರ ಸಹಕಾರ, ಸಹಯೋಗಗಳಿಂದ ಕನರ್ಾಟಕವನ್ನು ದೇಶದಲ್ಲಿ ಮಾದರಿ ರಾಜ್ಯವಾಗಿಸುವುದು ನಮ್ಮೆಲ್ಲರ ಹಂಬಲ, ಕನಸು. ಇದಕ್ಕಾಗಿ ಸರಕಾರ ಎಲ್ಲಾ ಹಂತಗಳಲ್ಲೂ ಪ್ರಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಈ ಶುಭ ಸಂದರ್ಭದಲ್ಲಿ ಜನತೆಗೆ ಭರವೆಸೆ ನೀಡ ಬಯಸುತ್ತೇನೆ.
ನಮ್ಮೆಲ್ಲರ ಹೆಮ್ಮೆಯ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಬಗ್ಗೆ ನಾಲ್ಕು ಸಾಲು ಹೇಳುವುದಾದರೆ ಅದು ಖಂಡಿತಾ ಪುನರುಕ್ತಿಯಾಗದು. ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಸಂಧ್ಯಾ ಸುರಕ್ಷಾ ಯೋಜನೆಯಡಿ 23122 ಫಲಾನುಭವಿಗಳು ಮಾಸಿಕ 500 ರೂ. ಪಡೆಯುತ್ತಿದ್ದು, ತಮ್ಮ ಇಳಿ ವಯಸ್ಸಿನಲ್ಲಿ ಇದು ಅವರಿಗೆ ಆಸರೆಯಾಗಿದೆ. 5296 ಮಂದಿ ಅಂಗವಿಕಲರು ಮಾಸಿಕ 1000 ರಂತೆ ಪಡೆಯುತ್ತಿದ್ದಾರೆ. ಜಿಲ್ಲೆಯ ಲಕ್ಷಾಂತರ ಜನರಿಗೆ ವಿವಿಧ ಯೋಜನೆಗಳಡಿ ನೇರವಾಗಿ ನೆರವು ಒದಗಿಸುತ್ತಿರುವುದು ಸಕರ್ಾರದ ಜನಪರ ಕಾಳಜಿಗೆ ಸಾಕ್ಷಿಯಾಗಿದೆ.
- ಈ ಜಿಲ್ಲೆಗೆ ಉತ್ತಮ ಪ್ರವಾಸೋದ್ಯಮ ಅವಕಾಶವಿದ್ದು, ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.
- ಪಿಲಿಕುಳದಲ್ಲಿ 24.5 ಕೋಟಿ ವೆಚ್ಚದಲ್ಲಿ ವಿನೂತನ 3ಡಿ ತಾರಾಲಯವನ್ನು ಆದಷ್ಟು ಬೇಗನೆ ರಾಷ್ಟ್ರಕ್ಕೆ ಸಮಪರ್ಿಸಲಾಗುವುದು.
- ಸುಲ್ತಾನ ಬತ್ತೇರಿಯಿಂದ ತಣ್ಣೀರು ಬಾವಿಯವರೆಗೆ 12.00 ಕೋಟಿ ವೆಚ್ಚದಲ್ಲಿ ತೂಗು ಸೇತುವೆ ನಿಮರ್ಾಣಕ್ಕೆ ಅನುಮೋದನೆ ಆಗಿದ್ದು, ಕಾಮಗಾರಿ ಪ್ರಾರಂಭಿಸಲು ಟೆಂಡರ್ ಕರೆಯಲಾಗಿದೆ.
- ಪುತ್ತೂರು ತಾಲೂಕಿನ ಕೊಯಿಲದಲ್ಲಿ ಪಶು ಸಂಗೋಪನಾ ಕಾಲೇಜು ತೆರೆಯಲು ಸರಕಾರದ ಅನುಮೋದನೆ ದೊರಕಿದೆ. 2013-14ನೇ ಸಾಲಿನಲ್ಲಿ ಪ್ರಾರಂಭಿಸಲಾಗುವುದು.
- ಮಂಗಳಾ ಕ್ರೀಡಾಂಗಣದಲ್ಲಿ 400 ಮೀ ಸಿಂಥೆಟಿಕ್ ಟ್ರಾಕ್ ನಿಮರ್ಾಣ ಮಾಡಲು ಸರಕಾರದಿಂದ ರೂ. 3.60 ಕೋಟಿ ಅನುದಾನ ಮಂಜೂರಾಗಿದ್ದು, ಸಿವಿಲ್ ಕಾಮಗಾರಿ ಕೆಲಸ ಮುಗಿದಿರುತ್ತದೆ. ಮಳೆ ನಿಂತ ನಂತರ ಸಿಂಥೆಟಿಕ್ ಟ್ರಾಕ್ ಅಳವಡಿಸುವ ಕಾರ್ಯವನ್ನು ಪ್ರಾರಂಭಿಸಲಾಗುವುದು.
- 15.00 ಕೋಟಿ ವೆಚ್ಚದಲ್ಲಿ ಜಿಲ್ಲಾ ರಂಗ ಮಂದಿರ ನಿಮರ್ಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
- ಎಂ.ಪಿ.ಆರ್.ಎಲ್ ನ ಸಹಯೋಗದೊಂದಿಗೆ ಮಂಗಳೂರು ಲೇಡಿಗೋಶನ್ ಆಸ್ಪತ್ರೆಯನ್ನು 21 ಕೋಟಿಗಳ ಬೃಹತ್ ಮೊತ್ತದಲ್ಲಿ ನವೀಕರಣಗೊಳಿಸುವ ಕಾರ್ಯ ಆರಂಭಗೊಂಡಿದೆ ಎಂದು ಪ್ರಕಟಿಸಲು ಸಂತಸ ಪಡುತ್ತೇನೆ.
- ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಅನುದಾನ (1ನೇ ಹಂತ) ಕಾರ್ಯಕ್ರಮದಡಿ 100.00 ಕೋಟಿ ರೂ ಮಂಜೂರಾಗಿದ್ದು, 96.00 ಕೋಟಿ ರೂ ಬಿಡುಗಡೆಯಾಗಿರುತ್ತದೆ. ಒಟ್ಟು 265 ಕಾಮಗಾರಿಗಳಲ್ಲಿ 217 ಕಾಮಗಾರಿಗಳು ಪೂರ್ಣಗೊಂಡಿವೆ. 2ನೇ ಹಂತದಲ್ಲಿ 100.00 ಕೋಟಿ ಮತ್ತೆ ಮಂಜೂರಾಗಿರುತ್ತದೆ.
- ಮಾನ್ಯ ಮುಖ್ಯ ಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಲ್ಲಿ ಒಟ್ಟು 103 ಕಾಮಗಾರಿಗಳ ಪೈಕಿ 88 ಕಾಮಗಾರಿಗಳು ಪೂರ್ಣಗೊಂಡಿವೆ. ಶೇ 95 ಪ್ರಗತಿ ಸಾಧಿಸಲಾಗಿದ್ದು, 22.99 ಕೋಟಿ ವೆಚ್ಚವಾಗಿದೆ. ಉಳಿದ ಕಾಮಗಾರಿಗಳು ಡಿಸೆಂಬರ್ 2012ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.
- ಮಂಗಳೂರಿನ ಬಂಗ್ರಕೂಳೂರಿನಲ್ಲಿ ಜಿಲ್ಲಾ ಕಛೇರಿ ಸಂಕೀರ್ಣ ನಿಮರ್ಾಣ ಮಾಡಲು ಕ್ರಮ ವಹಿಸಲಾಗುತ್ತಿದೆ.
- ಜಿಲ್ಲೆಯನ್ನು ಪರಿಸರ ಸಹ್ಯವನ್ನಾಗಿಸಲು ಜನರ ಸಹಭಾಗಿತ್ವದೊಂದಿಗೆ ಇಂದಿನಿಂದ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲು ಹರ್ಷಿಸುತ್ತೇನೆ.
- ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 50.00 ಕೋಟಿ ವೆಚ್ಚದ ಅತಿಥಿ ಗೃಹ ನಿರ್ಮಾಣ ಪೂರ್ಣಗೊಂಡಿರುತ್ತದೆ.
- ಮಂಗಳೂರು ತಾಲೂಕಿನ ಮಿನಿ ವಿಧಾನಸೌಧಕ್ಕೆ 4.00 ಕೋಟಿ ಅನುದಾನದಿಂದ ಕಾಮಗಾರಿ ಆರಂಭಿಸಲಾಗಿದೆ.
- ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಘನ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸಲು ಮುಂಬೈಯ ಬಾಬಾ ಅಟೋಮಿಕ್ ರಿಸರ್ಚ ಸೆಂಟರ್ ತಂತ್ರ ಜ್ಷಾನದ ಬಯೋಗ್ಯಾಸ್ ಸ್ಥಾವರವನ್ನು ಕಮಿಶನಿಂಗ್ ಮಾಡಲಾಗಿದೆ. ನಗರ ನೈರ್ಮಲೀಕರಣ ಯೋಜನೆಯ ಕುರಿತಾಗಿ 14 ಸದಸ್ಯರನ್ನು ಒಳಗೊಂಡ ಸಿಟಿ ಸಾನಿಟೇಶನ್ ಟಾಸ್ಕ್ ಪೋರ್ಸ್ ಸಮಿತಿ ರಚಿಸಲಾಗಿದೆ.
- ಜಿಲ್ಲೆಯಲ್ಲಿ ಎಂಡೋ ಸಲ್ಫಾನ್ ಪೀಡಿತರ ಸಂಪೂರ್ಣ ಸರ್ವೇ ಮಾಡಿಸಲಾಗುತ್ತಿದ್ದು, ಈಗಾಗಲೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಹಾಗೂ ಪುತ್ತೂರು ತಾಲೂಕಿನ ಕೊಲದಲ್ಲಿ 2 ಕೇಂದ್ರಗಳಲ್ಲಿ ಅವರಿಗೆ ಪೂರ್ಣ ನೆರವು ನೀಡಲಾಗುತ್ತಿದೆ.
- ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ರೂ. 4.00 ಕೋಟಿ ಮಂಜೂರಾಗಿದ್ದು, ಈಗಾಗಲೇ 2 ಕೋಟಿ ಮೊತ್ತ ಬಿಡುಗಡೆ ಮಾಡಲಾಗಿದೆ.
- ಜಿಲ್ಲಾ ಮೊಗೇರ ಭವನವನ್ನು ಮಂಗಳೂರು ತಾಲೂಕಿನ ಪಂಜಿಮೊಗರಿನಲ್ಲಿ ರೂ. 1.00 ಕೋಟಿಯ ಮೊತ್ತದೊಂದಿಗೆ ಆರಂಭಿಸಲಾಗಿದೆ.
- ಕದ್ರಿಯಲ್ಲಿ ಮೆಟ್ರಿಕ್ ನಂತರದ ವಿದ್ಯಾಥರ್ಿ ವಸತಿ ನಿಲಯದ ನೂತನ ಕಟ್ಟಡವು ರೂ. 1.91 ಕೋಟಿ ಮೊತ್ತದಲ್ಲಿ ನಿಮರ್ಾಣಗೊಂಡಿದ್ದು, ಇಂದು ಉದ್ಘಾಟನೆಗೊಳ್ಳಲಿದೆ.
- ಪರಿಶಿಷ್ಠ ಜಾತಿ ಕಾಲನಿಗಳಲ್ಲಿ ಮೂಲ ಭೂತ ಸೌಕರ್ಯ ಅಭಿವೃದ್ಧಿಗಾಗಿ 2011-12 ನೇ ಸಾಲಿನಲ್ಲಿ ರೂ. 7.26 ಕೋಟಿ ಬಿಡುಗೆಯಾಗಿದ್ದು, ಎಲ್ಲಾ 35 ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ಅದೇ ರೀತಿ 2012-13 ರ ಸಾಲಿನಲ್ಲಿ ಪ್ರತೀ ವಿಧಾನ ಸಭಾ ಕ್ಷೇತ್ರಕ್ಕೆ ರೂ. 75 ಲಕ್ಷ ಹಾಗೂ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ರೂ. 150 ಲಕ್ಷ ಮಂಜೂರಾಗಿದ್ದು ಕ್ರಿಯಾ ಯೋಜನೆ ತಯಾರಿಸಲಾಗುತ್ತಿದೆ.
ಹೀಗೆ ಅಭಿವೃದ್ಧಿ ಮಂತ್ರದೊಂದಿಗೆ ಅಧಿಕಾರಕ್ಕೆ ಬಂದ ಸರಕಾರದ, ಸಾಧನೆಗಳ ಪಟ್ಟಿ ಬೆಳೆಯುತ್ತಲೇ ಇದೆ.
ಪ್ರತ್ಯೇಕತೆಯ ಕೂಗಿನ ಅಪಸ್ವರ ಅಪ್ಪಿತಪ್ಪಿಯು ನಮ್ಮ ನಾಡಿನಲ್ಲಿ ತಲೆ ಎತ್ತಬಾರದು. ಆ ಕಾರಣಕ್ಕಾಗಿಯೇ ಉತ್ತರ ಕನರ್ಾಟಕದ ಅಭಿವೃದ್ಧಿಗೆ ಡಾ|| ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಪ್ರತ್ಯೇಕ ಸಮಿತಿಯನ್ನೇ ಸ್ಥಾಪಿಸಿ ಸಾವಿರ ಸಾವಿರ ಕೋಟಿ ರೂ.ಗಳನ್ನು ಒದಗಿಸಿದ್ದೇವೆ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿದ್ದು, ಅಲ್ಲಿ ಅಧಿವೇಶನ ನಡೆಸುವ ಮೂಲಕ ಅಖಂಡ ಕರ್ನಾಟಕ ಎಂಬುದಕ್ಕೆ ಅಧಿಕಾರದ ಮೂಲಕ ಅರ್ಥ ತಂದು ಕೊಟ್ಟಿದ್ದೇವೆ. ಭಾಷೆ ಎಂಬುದು ಒಬ್ಬರು ಮತ್ತೊಬ್ಬರ ಕೊರಳಿಗೆ ಪ್ರೀತಿಯಿಂದ ಹಾಕುವ ಹೂವಿನ ಹಾರವಾಗಬೇಕು ಎಂಬುದು ನನ್ನ ಅಭಿಪ್ರಾಯ. ಹಾಗಾಗಿಯೇ ಸರ್ವಜ್ಞನ ಸತ್ವ ತಮಿಳರಿಗೆ ಗೊತ್ತಾಗಬೇಕು, ತಿರುವಳ್ಳುವರ್ ಅವರ ಸಾಹಿತ್ಯದ ತಿರುಳು ಕನ್ನಡಿಗರಿಗೆ ತಿಳಿಯಬೇಕು, ಸವಾಯಿ ಗಂಧರ್ವರ ಸಂಗೀತ, ಭೀಮಸೇನ್ ಜೊಷಿಯವರ ಕಂಠಸಿರಿ ಮರಾಠಿಗರಿಗೆ ಪ್ರಿಯವಾಗಬೇಕು. ಮರಾಠಿಗ ಸಾವಯವ ಕೃಷಿಕ ಪಾಳೇಕಾರ್ರವರ ಶೂನ್ಯ ಬಂಡವಾಳ ಕೃಷಿಯ ಪ್ರಜ್ಞೆ ಕನ್ನಡಿಗರಿಗೆ ಪರಿಚಯವಾಗಬೇಕು. ಇಂತಹ ಸಮನ್ವಯತೆಯನ್ನು ಸಾಧಿಸುವ ಮೂಲಕ ಭಾರತದಲ್ಲಿಯೇ ಸಭ್ಯತೆ ಮತ್ತು ಸಮಾಧಾನದ ಶಾಂತಿಯ ನೆಲೆವೀಡು ಕನರ್ಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಅಭಿಮಾನದ ಸಂಗತಿ.
ಕನ್ನಡ ಸಾಹಿತ್ಯವನ್ನು ವಿಶ್ವ ಸಾಹಿತ್ಯದ ಔನ್ನತ್ಯಕ್ಕೆ ಏರಿಸಿದ ವಚನ ಸಾಹಿತ್ಯದ ಕ್ರಾಂತಿಯೋಗಿ ಬಸವೇಶ್ವರರು ಹೇಳಿದಂತೆ ಇವನಾರವ ಇವನಾರವ ಎನಿಸದಿರಯ್ಯಾ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ ದಾಸಶ್ರೇಷ್ಠ ಕನಕದಾಸರು ಹೇಳಿದಂತೆ ಕುಲ-ಕುಲವೆಂದು ಬಡಿದಾಡದಿರಿ, ಕುಲದ ನೆಲೆಯನೇನಾದರೂ ಬಲ್ಲಿರಾ..., ಬಲ್ಲಿರಾ ಪುರಂದರದಾಸರು ಹೇಳಿದಂತೆ ಮಾನವ ಜನ್ಮ ದೊಡ್ಡದು, ಇದ ಹಾನಿಮಾಡಬೇಡಿರಿ ಹುಚ್ಚಪ್ಪಗಳಿರಾ ಕುವೆಂಪು ಹೇಳಿದಂತೆ ಅ ಮತ ಈ ಮತ ಬಿಟ್ಟು ಹೊರ ಬನ್ನಿ, ನಮ್ಮದು ಮನುಜಮತ-ನಮ್ಮದು ವಿಶ್ವಪಥ ಎನ್ನುವ ಎಲ್ಲಾ ದಾರ್ಶನಿಕರ ಸದಭಿಪ್ರಾಯವೇ ಸಾಮರಸ್ಯದ-ಸಂತೋಷದ-ಸಂಪ್ರೀತಿಯ ಸಮರಸದ ಬದುಕು ನಮ್ಮದಾಗಬೇಕು ಎನ್ನುವುದು.
ಇಂತಹ ವಿಶಾಲ ಹಾಗೂ ವಿಶಿಷ್ಠ ತತ್ವದ ನೆಲೆಗಟ್ಟನ್ನು ಹೊಂದಿರುವ ಕನ್ನಡಿಗರಾದ ನಮಗೆ ಈ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು, ಈ ಉತ್ಸವ ನಿತ್ಯೋತ್ಸವ ಅಗಲಿ ಎಂಬುದೇ ನನ್ನ ಆಶಯ. ಕನ್ನಡ ನನಗೆ ಬದುಕು ಕೊಟ್ಟಿದೆ, ನಾನು ಕನ್ನಡಕ್ಕಾಗಿ ಏನು ಮಾಡಿದ್ದೇನೆ ಎಂಬ ಆತ್ಮಾವಲೋಕನ ಆಗಲಿ. ಕನ್ನಡದ ಬಗ್ಗೆ ಚಿಂತಿಸಲಿಕ್ಕೆ ಎಷ್ಟು ದಿನ, ಎಷ್ಟು ಗಂಟೆ, ಮೀಸಲಿಟ್ಟಿದ್ದೇನೆ ಎಂಬ ಬಗ್ಗೆ ಯೋಚಿಸೋಣ. ನಾವು ಕನ್ನಡವನ್ನು ಬಳಸೋಣ ಈ ಮೂಲಕ ಅದನ್ನು ಬೆಳೆಸೋಣ-ಉಳಿಸೋಣ. ಕವಿ ಗೋಪಾಲಕೃಷ್ಣ ಅಡಿಗರು ಹೇಳುವಂತೆ ಹೊಸನೆತ್ತರು ಉಕ್ಕುಕ್ಕಿ ಆರಿ ಹೋಗುವ ಮುನ್ನ, ಹರೆಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ, ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ ಈ ಕ್ಷುದ್ರ ಸಾಗರವು ಬತ್ತಿ ಹೋಗುವ ಮುನ್ನ ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು ಅಂತಹ ಭಕ್ತಿಯ, ಶಕ್ತಿಯ, ಸಾಹಸದ-ಸಾಧನೆಯ ನಾಡು ಕಟ್ಟೋಣಾ, ಆ ಕಟ್ಟುವ ಕೈಂಕರ್ಯಕ್ಕೆ ನಾಡದೇವಿ ಕನ್ನಡಾಂಬೆ ಸತ್ಪ್ರೇರಣೆ ನೀಡಲಿ.
ಜೈ ಭುವನೇಶ್ವರಿ, ಜೈ ಕರ್ನಾಟಕ, ಜೈ ಹಿಂದ್.