ಮಂಗಳೂರು, ನವೆಂಬರ್.01 : ಪ್ರತಿಯೊಂದು ಮಗುವು ಉತ್ತಮ ಶಿಕ್ಷಣ ಪಡೆಯಬೇಕೆಂಬ ನಿಟ್ಟಿನಲ್ಲಿ ಬಡ ದಲಿತ ಸಮುದಾಯದ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸುತ್ತಿದ್ದು, ಮಕ್ಕಳು ಈ ಸೌಲಭ್ಯಗಳ ಸದುಪಯೋಗಪಡೆದುಕೊಳ್ಳಬೇಕೆಂದು ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಿ ಟಿ ರವಿ ಅವರು ಹೇಳಿದರು.
ಅವರಿಂದು ದಕ್ಷಿಣ ಕನ್ನಡ ಜಿಲ್ಲಾ ಡಳಿತ, ಜಿಲ್ಲಾ ಪಂಚಾ ಯತ್ ಹಾಗೂ ಸಮಾಜ ಕಲ್ಯಾಣ ಇಲಾ ಖೆಯ ಸಂ ಯುಕ್ತ ಆಶ್ರಯ ದಲ್ಲಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಕದ್ರಿ (ಕೋಡಿಕಲ್) ಉದ್ಘಾ ಟಿಸಿ ಮಾತ ನಾಡು ತ್ತಿದ್ದರು. ಜ್ಞಾನಾಧಾರಿತ ಶಿಕ್ಷಣ ಭವಿಷ್ಯಕ್ಕೆ ದಾರಿದೀಪ. ಬಡತನದಿಂದ ಅಥವಾ ಹಿಂದುಳಿದ ವರ್ಗದ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ ಮತ್ತು ನಿಗಮಗಳಿಂದ ಹಲವು ಯೋಜನೆಗಳನ್ನು ರೂಪಿಸಿದ್ದು 30,839 ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ವಿದ್ಯಾರ್ಥಿ ವೇತನದಲ್ಲೂ ಹೆಚ್ಚಳ ಮಾಡಲಾಗಿದೆ. ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾದಾಗ ಮಾತ್ರ ನೆರವು ಸಾರ್ಥಕ ಎಂದರು.
ಜಿಲ್ಲೆಗೆ ಇಲಾಖೆಯಿಂದ ಮೆಟ್ರಿಕ್ ಪೂರ್ವ 19, ಮೆಟ್ರಿಕ್ ನಂತರ 9, ಮೊರಾಜರ್ಿ ದೇಸಾಯಿ ಶಾಲೆ 4, ಆಶ್ರಮ ಶಾಲೆ 1 ನಡೆಸಲಾಗುತ್ತಿದೆ ಎಂದರು.
ಕದ್ರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ಅಶೋಕ ನಗರದ ಬಾಡಿಗೆ ಕಟ್ಟಡದಲ್ಲಿರುವ ಮಕ್ಕಳ ವಾಸ್ತವ್ಯಕ್ಕೆ ರೂಪಿಸಲಾಗಿದ್ದು, ಈ ಕಟ್ಟಡ ನೆಲ ಹಾಗೂ ಮೊದಲ ಮಹಡಿಯನನು ಹೊಂದಿದ್ದು, ಒಟ್ಟು 18600.00 ಚ. ಅಡಿ ವಿಸ್ತೀರ್ಣವನ್ನು ಹೊಂದಿರುತ್ತದೆ. 191.35 ಲಕ್ಷ ರೂ. ವೆಚ್ಚವಾಗಿದ್ದು, 6 ಡಾರ್ಮಿಟರಿ ಕೊಠಡಿ, 600 ಚ.ಅಡಿಯ ಕಂಪ್ಯೂಟರ್ ಕೊಠಡಿ, 1750 ಚ. ಅಡಿ ವಿಸ್ತೀರ್ಣದ ಅಡುಗೆ ಕೋಣೆ ಹಾಗೂ ಮೇಲ್ವಿಚಾರಕರ ಕೊಠಡಿ ಮತ್ತು ಶೌಚಾಲಯ/ಸ್ನಾನಗೃಹ ಹೊಂದಿದೆ. ಮೊದಲ ಮಹಡಿಯಲ್ಲಿ 9 ಡಾರ್ಮಿಟರಿ ಕೊಠಡಿ, 1800 ಚ.ಅ ವಿಸ್ತೀರ್ಣದ ಗ್ರಂಥಾಲಯ ಹಾಗೂ ಮೆಡಿಕಲ್ ಕೊಠಡಿ ಮತ್ತು ಶೌಚಾಲಯ/ಸ್ನಾನಗೃಹ ಹೊಂದಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ವಿಧಾನಸಭಾ ಉಪಾಧ್ಯಕ್ಷರಾದ ಎನ್ ಯೋಗೀಶ್ ಭಟ್ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೊರಗಪ್ಪ ನಾಯ್ಕ್, ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಕೆ ಮೋನಪ್ಪ ಭಂಡಾರಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ, ಪಾಲಿಕೆ ಉಪಮೇಯರ್ ಶ್ರೀಮತಿ ಅಮಿತಕಲ, ಪಾಲಿಕೆ ಸದಸ್ಯರಾದ ಶ್ರೀಮತಿ ರೂಪಾ ಡಿ ಬಂಗೇರ ಪಾಲ್ಗೊಂಡರು.
ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಉಪಸ್ಥಿತರಿದ್ದರು. ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಅರುಣ್ ಫುರ್ಟಾಡೊ ಸ್ವಾಗತಿಸಿದರು. ದ.ಕ ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಕಾರ್ಯಕ್ರಮ ನಿರ್ವಹಿಸಿದರು.