Thursday, November 1, 2012

ನಗರದಲ್ಲಿ ಪ್ಲಾಸ್ಟಿಕ್ ನಿಷೇಧ: ಜಾಗೃತಿಗೆ ವಿದ್ಯಾರ್ಥಿಗಳಿಂದ ಬೃಹತ್ ಜಾಥಾ


ಮಂಗಳೂರು, ನವೆಂಬರ್. 01: ಕನ್ನಡ ನಾಡು ನುಡಿಯ ಹಬ್ಬದ ಶುಭ ದಿನವಾದ ಇಂದು ಮುಂಜಾನೆ 7.45ಕ್ಕೆ ನಗರದ ಲಾಲ್ ಬಾಗ್ ಸ್ಕೌಟ್ ಭವನದಿಂದ  ಜನರಲ್ಲಿ ಪ್ಲಾಸ್ಟಿಕ್ ಬಳಕೆಯ ಹಾನಿಯ ಕುರಿತು ಜಾಗೃತಿ ಮೂಡಿಸಲು ವಿವಿಧ ಶಾಲಾ ಕಾಲೇಜುಗಳ 2,500ಕ್ಕೂ ಮಿಕ್ಕಿದ ವಿದ್ಯಾರ್ಥಿಗಳ ಬೃಹತ್ ಜಾಥಾವನ್ನು ಜಿಲ್ಲಾಡಳಿತ ಎಲ್ಲರ ಸಹಕಾರದಿಂದ ಆಯೋಜಿಸಿತ್ತು.
                 ಜಾಥಾಕ್ಕೆ ಚಾಲನೆ ನೀಡಿ ಮಾತ ನಾಡಿದ ಉನ್ನತ ಶಿಕ್ಷಣ ಸಚಿ ವರು ಹಾಗೂ ಜಿಲ್ಲಾ ಉಸ್ತು ವಾರಿ ಸಚಿ ವರೂ ಆದ ಸಿ ಟಿ ರವಿ ಅವರು, ಪ್ಲಾಸ್ಟಿಕ ನಿಂದಾಗಿ ಪರಿಸರದ ಮೇಲಾ ಗುತ್ತಿ ರುವ ಹಾನಿ ಮತ್ತು ತ್ಯಾಜ್ಯ ವಿಲೇ ಸವಾಲು ಗಳನ್ನು ಎಳೆ ಎಳೆ ಯಾಗಿ ಬಿಡಿಸಿ ಟ್ಟರ ಲ್ಲದೆ, ಜನರ ಸಹ ಕಾರ ದಿಂದ ಮಾತ್ರ ಉತ್ತಮ ಪರಿಸರ ನಿರ್ಮಾಣ ಸಾಧ್ಯ ಎಂದರು. ವಿಧಾನ ಸಭಾ ಉಪ ಸಭಾಪತಿ ಎನ್.ಯೋಗಿಶ್ ಭಟ್, ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ,ಜಿ.ಪಂ ಸಿಇಓ ಡಾ. ಕೆ. ಎನ್. ವಿಜಯಪ್ರಕಾಶ್, ಮೇಯರ್ ಶ್ರೀಮತಿ ಗುಲ್ಜಾರ್ ಭಾನು,  ಮಹಾನಗರಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ಮೀನುಗಾರಿಕೆ ಉಪನಿರ್ದೇಶಕರಾದ  ಸುರೇಶ್ ಕುಮಾರ್ ಪಾಲ್ಗೊಂಡರು.
ಸುರಿಯುವ ಮಳೆ ಯನ್ನು ಲೆಕ್ಕಿ ಸದೆ ಜಾಥಾ ದಲ್ಲಿ ಪಾಲ್ಗೊಂಡ ವಿದ್ಯಾ ರ್ಥಿಗಳು, ನಮ್ಮ ನಡೆ ನಗ ರದ ಜನ ರಲ್ಲಿ ಪ್ಲಾಸ್ಟಿಕ್ ಬಳ ಕೆಯ ಬಗ್ಗೆ ಜಾಗೃತಿ ಮೂಡಿ ಸಲಿ ಎಂಬ ಆಶಯ ವ್ಯಕ್ತ ಪಡಿ ಸಿದರು. 19 ತಂಡ ಗಳು ಜಾಥಾ ದಲ್ಲಿದ್ದು, ಲಾಲ್ ಭಾಗ್, ಎಂ ಜಿ ರಸ್ತೆ, ಪಿವಿಎಸ್ ವೃತ್ತ, ನವ ಭಾರತ್ ವೃತ್ತ, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟಾ ಸಿಗ್ನಲ್ ವೃತ್ತ, ವಾಗಿ  ಜಾಥಾ ನೆಹರು ಮೈದಾನ ತಲುಪಿತು.
ಸಂಜೀ ವಿನಿ ನ ರ್ಸಿಂಗ್ ಕಾಲೇ ಜಿನ ವಿದ್ಯಾ ರ್ಥಿಗಳ ತಂಡಕ್ಕೆ ಪ್ರಥಮ ಬಹು ಮಾನ, ಯೆನ ಪೋಯ ತಂಡಕ್ಕೆ ದ್ವಿತೀಯ ಹಾಗೂ ಎಸ್ ಸಿ ಎಸ್ ಕಾಲೇ ಜಿನ ತಂಡಕ್ಕೆ ತೃತೀಯ ಬಹು ಮಾನ ವನ್ನು ರಾಜ್ಯೋ ತ್ಸವ ಸಮಾ ರಂಭ ದಲ್ಲಿ ನೀಡ ಲಾಯಿತು.