Thursday, November 15, 2012

ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಸಂರಕ್ಷಿಸಿ: ನಾಗರೀಕರಲ್ಲಿ ಜಿಲ್ಲಾಧಿಕಾರಿ ಮನವಿ

ಮಂಗಳೂರು,ನವೆಂಬರ್.15: ಸಮಷ್ಠಿ ಹಿತವನ್ನು ದೃಷ್ಟಿಯಲ್ಲಿರಿಸಿ ಪ್ಲಾಸ್ಟಿಕ್ ಬಳಕೆಯನ್ನು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸಮಗ್ರ ನಿಷೇಧ ಹಾಗೂ ಜಿಲ್ಲೆಯಲ್ಲೂ ಪ್ಲಾಸ್ಟಿಕ್ ನಿಷೇಧ ಜಾರಿಗೆ ತರಲು ಜಿಲ್ಲಾಡಳಿತ ನಿರ್ಧರಿಸಿದೆ.
ಡಿಸೆಂಬರ್ ಒಂದರಿಂದ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸಮಗ್ರ ಕಸ ವಿಲೇವಾರಿಗೆ ಕ್ರಮ ಕೈ ಗೊಳ್ಳಲಾಗುವುದು. ಆ ಪ್ರಯುಕ್ತ ಜಿಲ್ಲೆಯ ಎಂಟು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಅವರು ಇಂತು ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ 203 ಗ್ರಾಮ ಪಂಚಾ ಯತ್ ಗಳ ಪೈಕಿ 31 ಗ್ರಾಮ ಪಂಚಾ ಯತ್ ಗಳಲ್ಲಿ ಈಗಾ ಗಲೇ ಕಸ ವಿಲೇ ವಾರಿಗೆ ಕ್ರಮ ಕೈ ಗೊಳ್ಳ ಲಾಗಿದೆ.ಮಂಗ ಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯ ಎಲ್ಲಾ ವಾರ್ಡು ಗಳಲ್ಲಿ ಮನೆ ಮನೆ ಗಳಿಂದ ಕಸ ವಿಲೇ ವಾರಿ ನಡೆ ಯಲಿದೆ. ಅದೇ ರೀತಿ ಜಿಲ್ಲೆಯ   ಇತರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಡಿಸೆಂಬರ್ ತಿಂಗಳ ಅಂತ್ಯದೊಳಗೆ ಶೇ100ಕಸ ವಿಲೇವಾರಿಗೆ ಕ್ರಮ ಕೈ ಗೊಳ್ಳಲಾಗುವುದು. ಈ ಬಗ್ಗೆ ಲೋಕ್ ಅದಾಲತ್ ಗೆ ವರದಿ ಸಲ್ಲಿಸಲಾಗಿದೆ  ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪ್ಲಾಸ್ಟಿಕ್ ನಿಷೇಧಕ್ಕೆ ಪೂರಕವಾಗಿ ಜನಜಾಗೃತಿಯನ್ನು ಮೂಡಿಸಲಾಗಿದ್ದು, ಇನ್ನು ಮುಂದೆ ದಂಡ ವಿಧಿಸುವ ಮೂಲಕವೂ ಜಾಗೃತಿ ಮೂಡಿಸಲಾಗುವುದು ಎಂದ ಜಿಲ್ಲಾಧಿಕಾರಿಗಳು, ಮಹಾನಗರಪಾಲಿಕೆಯ ಕಾಯಿದೆ ವ್ಯಾಪ್ತಿಯಲ್ಲಿ ನಿಷೇಧ ಜಾರಿಗೆ ತರಲಾಗಿದ್ದು, ಜಿಲ್ಲಾಡಳಿತ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಡಿ.1ರಿಂದ ಮನಪಾ ವ್ಯಾಪ್ತಿಯಲ್ಲಿ ಎಲ್ಲಾ ತರಹದ ಪ್ಲಾಸ್ಟಿಕ್ ಬ್ಯಾಗ್ ನಿಷೇಧ - ಡಿಸೆಂಬರ್ 1ರಿಂದ ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಎಲ್ಲಾ ತರಹದ ಪ್ಲಾಸ್ಟಿಕ್ ಬ್ಯಾಗ್ ಗಳನ್ನು  ನಿಷೇಧಿಸಲಾಗುವುದು. ಮಂಗಳೂರು ಮನಪಾ ವ್ಯಾಪ್ತಿಯಲ್ಲಿ 40 ಮೈಕ್ರಾನಿಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ಈಗಾಗಲೆ ನಿಷೇಧಿಸಲಾಗಿದೆ. ಪ್ರಸಕ್ತ ನಗರದಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯದಲ್ಲಿ ಶೇ 60ರಿಂದ 70 ಪ್ಲಾಸ್ಟಿಕ್ ತ್ಯಾಜ್ಯವಿದ್ದು, ಮನಬಂದಂತೆ ಪ್ಲಾಸ್ಟಿಕ್ ನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಮನಪಾ ವ್ಯಾಪ್ತಿಯ ಚರಂಡಿಗಳಲ್ಲಿ, ಮ್ಯಾನ್ ಹೋಲ್ ಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಸುತ್ತಿರುವ ಸಮಸ್ಯೆ ವಿಪರೀತ. ಮಹಾನಗರಪಾಲಿಕೆ ಕಾಯಿದೆ 223,256,431ರ ಪ್ರಕಾರ ಮನಪಾ ವ್ಯಾಪ್ತಿಯಲ್ಲಿ ಯಾವ ಸಾಮಗ್ರಿಯನ್ನು ಎಲ್ಲಿ ಹಾಕಬೇಕು, ಯಾವುದನ್ನು ನಿಷೇಧಿಸಬೇಕು ಎಂದು ಸೂಚಿಸುತ್ತದೆ. ಅದಕ್ಕಾಗಿ ಪ್ರತ್ಯೇಕ ಅಧಿ ಸೂಚನೆ ಹೊರಡಿ ಸಲಾಗು ವುದಿಲ್ಲ. ಕಾಯಿದೆ ಯಲ್ಲಿ ಅವ ಕಾಶ ಇಲ್ಲದಿ ದ್ದರೆ ಮಾತ್ರ ಅಧಿ ಸೂಚನೆ ಹೊರಡಿ ಸಬೇಕಾ ಗುತ್ತದೆ. ದೆಹಲಿಯಲ್ಲಿ 2009ರಲ್ಲಿ ಈ ಪ್ರಯೋಗ ನಡೆದಿದೆ. ಆದರೆ ಅಲ್ಲಿ 40 ಮೈಕ್ರಾನ್ ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಮಾತ್ರ ನಿಷೇಧಿಸಿರುವುದರಿಂದ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಕಳೆದ 1998ರಲ್ಲಿ ಬಾಂಗ್ಲಾ ದೇಶದಲ್ಲಿ ಹಾಗು 1998ರಲ್ಲಿ ಮುಂಬಯಿಯಲ್ಲಿ ನೆರೆ ಉಂಟಾಗಲು ಪ್ಲಾಸ್ಟಿಕ್ ತ್ಯಾಜ್ಯವೂ ಒಂದು ಕಾರಣ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಪ್ಲಾಸ್ಟಿಕ್ ತ್ಯಾಜ್ಯ ವನ್ನು ಸಂಪೂರ್ಣವಾಗಿ ನಿಲ್ಲಿಸುವ ನಿಟ್ಟಿನಲ್ಲಿ  ಶುಕ್ರವಾರದಿಂದ ಕಾರ್ಯಾಚರಣೆ ಆರಂಭಿಸಲಾಗುವುದು ಆರಂಭದಲ್ಲಿ ಜನ ಜಾಗೃತಿ ಮೂಡಿಸಲಾಗುತ್ತಿದೆ ಸಾಂಕೇತಿಕವಾಗಿ ಪ್ಲಾಸ್ಟಿಕ್ ಮಾರಾಟ ಮಾಡುವವರಿಗೆ 100ರೂಪಾಯಿ ದಂಡ ವಿಧಿಸಲಾಗುವುದು. ಎರಡನೆ ಹಂತದಲ್ಲಿ ಇನ್ನೂ ಹೆಚ್ಚಿನ ದಂಡ ವಿಧಿಸಲಾಗುವುದು ಹಾಗೂ ಮಹಾನಗರಪಾಲಿಕೆಗೆ ಬೆಂಬಲವಾಗಿ ಜಿಲ್ಲಾಡಳಿತವಿದ್ದು, ಕಾನೂನು ಪಾಲಿಸುವಲ್ಲಿ ಮೊಂಡುತನ ಅನುಸರಿಸಿದರೆ ಕಠಿಣ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದರು.
ಮನಪಾ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಕ್ರಮ: ಮನಪಾ ವ್ಯಾಪ್ತಿಯ ಮಣ್ಣ ಗುಡ್ಡ ಹಾಗೂ ಪೋರ್ಟ್  ವಾರ್ಡುಗಳಲ್ಲಿ ಕಸವಿಂಗಡಣೆಯ ಪೈಲಟ್ ಯೋಜನೆ ಅನುಷ್ಠಾನಗೊಳಿಸಲಾಗುವುದು. ಉಳಿದ ವಾರ್ಟುಗಳಲ್ಲಿ ಬಳಿಕ ಮನೆ ಮನೆಗಳಿಂದ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಕ್ರಮ ಅನುಷ್ಠಾನಗೊಳ್ಳಲಿದೆ. ಹಂತ ಹಂತವಾಗಿ ಕಸ ಸಂಗ್ರಹಕ್ಕೆ ಹಾಕಲಾದ ಬಿನ್ ಗಳನ್ನು ತೆಗೆಯಲಾಗುವುದು ಮನೆ ಮನೆ ಕಸ ಸಂಗ್ರಹದ ವ್ಯವಸ್ಥೆಗಳನ್ನು ಜನರ ಸಹಕಾರದಿಂದ ಹಮ್ಮಿಕೊಳ್ಳಲಾಗುವುದು  ಎಂದು ಮನಪಾ ಆಯುಕ್ತ ಡಾ.ಹರೀಶ್ ಕುಮಾರ್ ತಿಳಿಸಿದರು.
ಜನಹಿತ ಹಾಗೂ ಪರಿಸರವನ್ನು ಗಮನದಲ್ಲಿರಿಸಿ ಜಾರಿಗೆ ತಂದಿರುವ ಜಿಲ್ಲಾಡಳಿತದ ಕ್ರಮ ಯಶಸ್ವಿಯಾಗಲು ಜಿಲ್ಲೆಯ ಪ್ರಜ್ಞಾವಂತ ಜನರ ಸಹಕಾರ ಅಗತ್ಯ ಎಂದು ಮಹಾನಗರಪಾಲಿಕೆ ಆಯುಕ್ತರು ಹೇಳಿದರು.