ಮಂಗಳೂರು, ನವೆಂಬರ್.23 : ಸಾಮಾನ್ಯ ಜನರಿಗೂ ಕಾನೂನಿನ ಅರಿವು ಮೂಡಿಸಿ ಅವರಿಗೆ ಆವಶ್ಯಕತೆ ಇದ್ದಲ್ಲಿ ಅರ್ಹರಾದವರಿಗೆ ಕಾನೂನು ನೆರವು ನೀಡುವುದು ಹಾಗೂ ವ್ಯರ್ಥವಾಗಿ ನ್ಯಾಯಾಲಯಕ್ಕೆ ಅಲೆಯುವುದನ್ನು ತಪ್ಪಿಸಲು ಸಂಚಾರಿ ಲೋಕ ಅದಾಲತ್ ಗಳನ್ನು ದ.ಕ.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,ಮಂಗ ಳೂರು,ಜಿಲ್ಲಾ ಡಳಿತ,ಪೋಲೀಸ್ ಇಲಾಖೆ,ಜಿಲ್ಲಾ ಪಂಚಾ ಯತ್ ಮಂಗ ಳೂರು,ವಕೀ ಲರ ಸಂಘ ಇನ್ನಿತರ ಇಲಾಖೆ ಗಳ ಸಹ ಯೋಗ ದೊಂದಿಗೆ 23-11-12 ರಿಂದ 26-11-12 ರವರೆಗೆ ಹಮ್ಮಿ ಕೊಂಡಿ ರುವ ನಾಲ್ಕು ದಿನ ಗಳ ಕಾನೂನು ಸಾಕ್ಷ ರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯ ಅಭಿಯಾನವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆಎ.ಎನ್.ವಿಜಯಪ್ರಕಾಶ್ ನ್ಯಾಯಾಲಯದ ಆವರಣದಲ್ಲಿ ಇಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಶೋಕ್ ಜಿ.ನಿಜಗಣ್ಣವರ್,ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ,ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಪಿ.ಅಶೋಕ್ ಅರಿಗ ಸೇರಿದಂತೆ ಪೋಲೀಸ್ ಇಲಾಖೆ,ನ್ಯಾಯಾಂಗ ಇಲಾಖೆಯ ಹಲವರು ಭಾಗವಹಿಸಿದ್ದರು.
ದಿನಾಂಕ 24-11-12 ರಂದು ಎಡಪದವು ಶ್ರೀರಾಮ ಭಜನಾ ಮಂದಿರದಲ್ಲಿ ಬೆಳಿಗ್ಗೆ 10.30 ರಿಂದ 12.00 ರವರೆಗೆ ,ಅದೇದಿನ ಮಧ್ಯಾಹ್ನ 12.30 ರಿಂದ 1.30 ಗಂಟೆ ವರೆಗೆ ಗಂಜಿಮಠ ಗ್ರಾಮ ಪಂಚಾಯತ್ ಆವರಣದಲ್ಲಿ ,ಬಾಲ್ಯ ವಿವಾಹ ಮತ್ತು ಮಹಿಳೆ,ಮಕ್ಕಳ ಹಕ್ಕು,ಅಪರಾಹ್ನ 3.00 ಗಂಟೆಯಿಂದ 4.00 ಗಂಟೆ ವರೆಗೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಲೋಕ ಅದಾಲತ್ ಕುರಿತು,26 ರಂದು ಬೆಳಿಗ್ಗೆ 9.30 ರಿಂದ 10.30 ರ ವರೆಗೆ ಕೆನರಾ ಹೆಣ್ಮಕ್ಕಳ ಪ್ರೌಢಶಾಲೆಯಲ್ಲಿ ಬಾಲ ನ್ಯಾಯ ಕಾಯ್ದೆ ,11 ರಿಂದ ಉರ್ವಾ ಪೊಂಪೈ ಪ್ರೌಢಶಾಲೆಯಲ್ಲಿ ಕಾನೂನು ಮಾಹಿತಿ ,2.00 ರಿಂದ 4.00 ಗಂಟೆ ವರೆಗೆ ಕಾಟಿಪಳ್ಳ ಯುವಕ ಮಂಡಲದ 5ನೇ ವಿಭಾಗದಲ್ಲಿ ಕಾನೂನು ಮಾಹಿತಿ ಸಂಚಾರಿ ಜನತಾ ನ್ಯಾಯಾಲಯದಲ್ಲಿ ಉಪನ್ಯಾಸ ನೀಡಲಿದ್ದಾರೆ.