ಮಂಗಳೂರು,ನವೆಂಬರ್.03 : ನವೆಂಬರ್ ತಿಂಗಳನ್ನು ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆಯೆಂದು ಘೋಷಿಸಿದ ಸಂದರ್ಭದಲ್ಲಿ ನಗರದಲ್ಲಿ ಬಸ್ ಚಾಲಕರು ಹಾರ್ನ್ ಹಾಕದೆ ಬಸ್ ಚಲಾಯಿಸಿ ಸಂಯಮ ಮೆರೆದು ಮಾಲಿನ್ಯ ನಿಯಂತ್ರಣ ಮಾಸಾಚರಣೆಗೊಂದು ಅರ್ಥ ನೀಡಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.ಜಿಲ್ಲಾ ಡಳಿತ ವಿರಲಿ, ಅಧಿ ಕಾರಿ ಗಳಿ ರಲಿ ಏಕ ಮುಖಿ ಯಾಗಿ ಯಾವುದೇ ಯೋಜ ನೆಗಳ ಯಶಸ್ವೀ ಅನು ಷ್ಠಾನ ಅಸಾಧ್ಯ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ಞಾ ವಂತ ನಾಗ ರೀಕರ ಸಹ ಕಾರ ದಿಂದ ಮಾತ್ರ ಯೋಜನೆ ಗಳು, ಕಾನೂ ನುಗಳು ಯಶಸ್ವಿಯಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಇಂದು ನಗರದ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಬಲ್ಮಠ ಸರ್ಕಾರಿ ಕಾಲೇಜಿನ ಎದುರು ಬಸ್ಸುಗಳ ಮೇಲಾಟ, ಕರ್ಕಶ ಹಾರ್ನ್ ಗಳನ್ನು ಉದಾಹರಣೆ ಸಹಿತ ವಿವರಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕ ಜೀವನದಲ್ಲಿ ಶಿಸ್ತು ಅಳವಡಿಸುವುದರಿಂದ ಮಾತ್ರ ಉತ್ತಮ ನಾಗರೀಕ ಸಮಾಜ ನಿರ್ಮಾಣ ಸಾಧ್ಯ ಎಂದರು.
ಮಾಲಿನ್ಯ ಇಂದು ಬಹುದೊಡ್ಡ ಸವಾಲಾಗಿದ್ದು, ವಾಯುಮಾಲಿನ್ಯ, ಶಬ್ದ ಮಾಲಿನ್ಯಗಳಿಂದಾಗುವ ಅನಾಹುತಗಳ ಬಗ್ಗೆ ನಾಗರೀಕ ಸಮಾಜ ಚಿಂತಿಸಬೇಕು. ಎಲ್ಲರ ಸಹಕಾರದಿಂದ ಮಾತ್ರ ಇಂತಹ ಮಾಲಿನ್ಯಗಳ ನಿಯಂತ್ರಣ ಸಾಧ್ಯ ಎಂದರು. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕಳೆದ ಅಕ್ಟೋಬರ್ ನಿಂದ ಜನಜಾಗೃತಿ ಮೂಡಿಸಲಾಗುತ್ತಿದೆ. ಆದರೆ ನಿರೀಕ್ಷಿತ ಬೆಂಬಲ ಜನತೆಯಿಂದ ಸಿಗದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಈ ಸಮಾಜಮುಖಿ ಕಾನೂನುಗಳು ಯಾರಿಗಾಗಿ ಎಂಬುದನ್ನು ಪ್ರತಿಯೊಬ್ಬ ನಾಗರೀಕನು ಚಿಂತಿಸಬೇಕಾದ ಅಗತ್ಯವಿದೆ ಎಂದರು.
ಸಮಾ ರಂಭ ವನ್ನು ಉದ್ಘಾ ಟಿಸಿದ ಮಂಗ ಳೂರು ಉತ್ತರ ವಲಯದ ಶಾಸಕ ರಾದ ಕೃಷ್ಣ ಜೆ ಪಾಲೇ ಮಾರ್ ಅವರು ಮಾತ ನಾಡಿ, ಪರಿಸ ರವನ್ನು ನಾವು ಕಾಪಾಡ ದಿದ್ದರೆ ನಮ್ಮನ್ನು ಯಾರೂ ಕಾಪಾ ಡಲು ಸಾಧ್ಯ ವಿಲ್ಲ. ಮಾಲಿನ್ಯ ದಿಂದಾಗಿ ಹಲವು ರೋಗ ಗಳು ಹರಡು ತ್ತಿದ್ದು, ಮಾಲಿನ್ಯ ನಿಯಂತ್ರ ಣಕ್ಕೆ ಸಾರ್ವ ಜನಿಕರ ಸಹ ಕಾರ ಅಗತ್ಯ ಎಂದರು. ಇಂದು ಎಲ್ಲೆಡೆಯಲ್ಲೂ, ಎಲ್ಲ ವಸ್ತುಗಳಲ್ಲೂ ಕಲಬೆರಕೆ ಸಾಮಾನ್ಯವಾಗಿದ್ದು, ನಿಯಂತ್ರಣಕ್ಕೆ ಎಲ್ಲರ ಸಹಕಾರದ ಅಗತ್ಯವನ್ನು ಪ್ರತಿಪಾದಿಸಿದರು.
ಮುಖ್ಯ ಅತಿಥಿಗಳಾಗಿ ಕೆನರಾ ಬಸ್ಸು ಮಾಲೀಕರ ಸಂಘದ ಅಧ್ಯಕ್ಷರಾದ ರಾಜವರ್ಮ ಬಲ್ಲಾಳ್ ಅವರು ಮಾತನಾಡಿದರು. ಪ್ರಾಸ್ತಾವಿಕ ಮತ್ತು ಸ್ವಾಗತ ಭಾಷಣ ಮಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ ಮಲ್ಲಿಕಾರ್ಜುನ ಅವರು, 72% ವಾಯುಮಾಲಿನ್ಯ ವಾಹನಗಳಿಂದ ಉಂಟಾಗುತ್ತಿದ್ದು, ವಾಹನಗಳನ್ನು ಸುಸ್ಥಿತಿಯಲ್ಲಿಡಿ, ಮಿತಿಯಾಗಿ ಬಳಸಿ, ಆರು ತಿಂಗಳಿಗೊಮ್ಮೆ ಮಾಲಿನ್ಯ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು. ಇಲಾಖೆಗಳಿಂದ ಮಾತ್ರ ನಿಯಂತ್ರಣ ಸಾಧ್ಯವಿಲ್ಲ; ಎಲ್ಲರ ಸಹಕಾರದಿಂದ ಮಾತ್ರ ಮಾಲಿನ್ಯ ರಹಿತ ಸಮಾಜ ನಿರ್ಮಾಣ ಸಾಧ್ಯ ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷ ಡಾ ಕೇದಿಗೆ ಅರವಿಂದ ರಾವ್ ಉಪಸ್ಥಿತರಿದ್ದರು.
ಜನಜಾಗೃತಿ ಮೂಡಿಸಲು ದಕ್ಷಿಣ ಕನ್ನಡದ ಜನಪ್ರಿಯ ಕಲೆ ಯಕ್ಷಗಾನದ ಮೂಲಕ ಪಣಂಬೂರು ಕಡಲ ತೀರದಲ್ಲಿ 'ಕರ್ಕಶಾಸುರ ಸ್ತಂಭನ ಧೂಮಾಸುರ ಬಂಧನ' ಯಕ್ಷಗಾನ ಬಯಲಾಟ ನಡೆಯಲಿದೆ.ಕಾರ್ಯಕ್ರಮ ಆಯೋಜಿಸಲು ಲಯನ್ಸ್ ಸೇವಾ ಸಂಸ್ಥೆ ಕೈಜೋಡಿಸಿತ್ತು.