Thursday, November 8, 2012

" ವಸತಿ ನಿಲಯಗಳು ವ್ಯಕ್ತಿತ್ವ ವಿಕಸನದ ಕೇಂದ್ರಗಳಾಗಲಿ''


ಮಂಗಳೂರು, ನವೆಂಬರ್.08:- ವಸತಿ ನಿಲಯಗಳು ವ್ಯಕ್ತಿತ್ವ ವಿಕಸನದ ಕೇಂದ್ರಗಳಾಗಲಿ. ಅತ್ಯುತ್ತಮ ಮಾದರಿಗಳು ನಮ್ಮ ಹಾಸ್ಟೆಲ್ಗಳಿಂದ ಹೊರಹೊಮ್ಮಲಿ ಎಂದು ಮಾಜಿ ಸಚಿವರು ಹಾಗೂ ಉಪಸಮಿತಿಯ ಸದಸ್ಯರಾದ  ಸಿ ಎಚ್ ವಿಜಯಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು. ನಿನ್ನೆ ಬುಧವಾ ರದಂದು ಸಂಜೆ ದಕ್ಷಿಣ ಕನ್ನಡ ಜಿಲ್ಲಾಧಿ ಕಾರಿ ಗಳ ಕಚೇರಿ ಯಲ್ಲಿ ಆಯೋ ಜಿಸ ಲಾಗಿದ್ದ ಕರ್ನಾ ಟಕ ವಿಧಾನ ಮಂಡ ಲದ ಹಿಂದು ಳಿದ ವರ್ಗ ಗಳ ಮತ್ತು ಅಲ್ಪ ಸಂಖ್ಯಾ ತರ ಕಲ್ಯಾಣ ಸಮಿತಿಯ ಮೈ ಸೂರು ವಿಭಾ ಗದ ಉಪ ಸಮಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ಸಮಿತಿಯು ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ವಸತಿ ನಿಲಯಗಳ ಮೂಲಸೌಕರ್ಯ ಮತ್ತು ನಿವೇಶನ ಮಾಹಿತಿ ವಿವರಗಳನ್ನು ಪಡೆಯಲು ಮೈಸೂರು ವಿಭಾಗದಲ್ಲಿ ಅಧ್ಯಯನ ಪ್ರವಾಸ ನಡೆಸಿದೆ.
ಶೈಕ್ಷಣಿಕ ಜಿಲ್ಲೆಯೆಂದು ಗುರುತಿಸಲ್ಪಟ್ಟಿರುವ ದಕ್ಷಿಣ ಕನ್ನಡದಲ್ಲಿ ಶಿಕ್ಷಣ ಮತ್ತು ವಸತಿನಿಲಯದ ಪರಿಸ್ಥಿತಿಗಳು ಉತ್ತಮವಾಗಿದೆಯಾದರೂ ಇಡೀ ರಾಜ್ಯಕ್ಕೆ ಮಾದರಿಯಾಗುವಂತಹ ವಸತಿನಿಲಯಗಳನ್ನು ರೂಪಿಸುವತ್ತ ಜಿಲ್ಲೆಯ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕಿದೆ. ಇಲ್ಲಿನ ವಿದ್ಯಾರ್ಥಿಗಳ ಬದುಕಿನ ಆತ್ಮೀಯ ಕ್ಷಣಗಳು ನಮ್ಮ ವಸತಿ ನಿಲಯದಿಂದ ಹೊಮ್ಮಲಿ. ಮಕ್ಕಳಿಗೆ ಉತ್ತಮ ಓದಿನ ವಾತಾವರಣ, ಯೋಗ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಪೂರಕ ವಾತಾವರಣ ಸೃಷ್ಟಿಯಾಗಲಿ.  ತಮ್ಮ ಜೀವನದಲ್ಲಿ ಹಾಸ್ಟೆಲ್ನ್ನು ಅವರು ಮರೆಯಬಾರದು; ಅಪರೂಪ ಕ್ಕೊಮ್ಮೆ ತಮ್ಮ ವಸತಿ ನಿಲಯಕ್ಕೆ ಭೇಟಿ ನೀಡಬೇಕೆಂಬ ಇಚ್ಛೆ ಅವರ ಮನದಲ್ಲಿ ಮೂಡಬೇಕು. ವಸತಿನಿಲಯಗಳ ಸುತ್ತಮುತ್ತಲೂ ಹಣ್ಣಿನ ಮರಗಳನ್ನು ಬೆಳೆಸಿ. ಮಕ್ಕಳು ಮರಗಳಡಿ ಕುಳಿತು ಓದಲಿ, ಸ್ಥಳೀಯ ನಿವೃತ್ತ ಪ್ರಾಧ್ಯಾಪಕರಿಂದ ಮಕ್ಕಳಿಗೆ ವಿಶೇಷ ಮನೆಪಾಠ ಹೇಳಿಸಿ. ಜಿಲ್ಲೆಯ ಇತರ ಇಲಾಖೆಗಳ ಅಧಿಕಾರಿಗಳು ಈ ಮಕ್ಕಳೊಂದಿಗೆ ಬೆರೆಯಲಿ; ಅವರ ಜೊತೆ ವಾರದಲ್ಲಿ ಕನಿಷ್ಠ ಒಂದು ಗಂಟೆ  ವಿನಿಯೋಗಿಸಲಿ. ದಕ್ಷಿಣ ಕನ್ನಡದ ಪ್ರಯೋಗಗಳು ದೇಶಕ್ಕೆ ಮಾದರಿಯಾಗಲಿ ಎಂದರು.
ನಮ್ಮ ಜಿಲ್ಲೆಯ ಬಹುತೇಕ ವಸತಿ ನಿಲಯಗಳು ದೇಶಕ್ಕೆ ಉತ್ತಮ ಕ್ರೀಡಾಪಟುಗಳನ್ನು, ಅರಳು ಪ್ರತಿಭೆಗಳನ್ನು ನೀಡಿದೆ ಎಂದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅರುಣ್ ಫುರ್ಟಾಡೋ ಅವರು, ಮಮತ ಪೂಜಾರಿ ನಮ್ಮ ವಸತಿ ನಿಲಯದಲ್ಲಿ ಬೆಳೆದ ಪ್ರತಿಭೆ. ಬೆಳ್ತಂಗಡಿ ಮಚ್ಚಿನದ ವಸತಿ ಶಾಲೆಯ ಹವ್ಯಾಸ್ (ರಾಷ್ಟ್ರ ಮಟ್ಟದ ಇನ್ಸ್ಪೈರ್ ಅವಾಡ್ರ್ ) ಪ್ರತಿಭೆಯೂ ನಮ್ಮದೆ ಇತ್ತೀಚಿನ ಉದಾಹರಣೆಗಳು; ದಕ್ಷಿಣ ಕನ್ನಡದ ವಸತಿ ನಿಲಯಗಳಲ್ಲಿ ಇಂತಹ ಹಲವು ಪ್ರತಿಭೆಗಳು ಅರಳಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು ಮಾತನಾಡಿ, ನಗರದ ವಸತಿ ನಿಲಯಗಳಲ್ಲಿ ಟೆರೇಸ್ ಗಾರ್ಡನಿಂಗನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಂಡಿದ್ದು, ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮೊರಾಜರ್ಿ ದೇಸಾಯಿ ಮಾದರಿ ವಸತಿಶಾಲೆಯ ಮಾದರಿ ಯೋಜನೆಗಳನ್ನು ನಮ್ಮ ವಸತಿಶಾಲೆಗಳಿಗೂ ನೀಡಿ ಎಂದರು. ವಿದ್ಯಾಥರ್ಿನಿಯರ ಆರೋಗ್ಯ ಮತ್ತು ಸ್ವಚ್ಛತೆಯನ್ನು ಗಮನದಲ್ಲಿರಿಸಿ ಎಲ್ಲ ವಿದ್ಯಾರ್ಥಿನಿಯರಿಗೂ ಸೇಫ್ಟಿ ನ್ಯಾಪಕಿನ್ ಒದಗಿಸುವಂತಹ ಹಾಗೂ ನ್ಯಾಪ್ ಕಿನ್ ವಿಲೇಗೆ ನ್ಯಾಪ್ ಕಿನ್ ಬರ್ನರ್ ಯುನಿಟ್ ಅಳವಡಿಸಲು ಜಿಲ್ಲಾ ಪಂಚಾಯತ್ ಯೋಜನೆ ರೂಪಿಸಿದೆ ಎಂದರು. ಕಳೆದ ಸಾಲಿನಲ್ಲಿ ವಸತಿ ನಿಲಯದ ಮಕ್ಕಳ ಫಲಿತಾಂಶದಲ್ಲೂ ದಾಖಲೆ ಸಾಧಿಸಿದೆ ಎಂದರು. ಸದಸ್ಯರು ನೀಡಿದ ಸಲಹೆಗಳನ್ನು ಗಮನದಲ್ಲಿರಿಸಿ ಉತ್ತಮ ಮಾದರಿ ರೂಪಿಸುವುದಾಗಿ ಹೇಳಿದರು.
ಸದಸ್ಯರ ಸೂಚನೆಯಂತೆ ಶಿಕ್ಷಣದಲ್ಲಿ ಮುಂದಿರುವ ನಮ್ಮ ಜಿಲ್ಲೆಯಲ್ಲಿ ಪದವಿ ಮತ್ತು ತಾಂತ್ರಿಕ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿ ಕಳೆದ ಮೂರು ವರ್ಷಗಳ ಬೇಡಿಕೆ ಆಧಾರದಲ್ಲಿ ನೀಲಿ ನಕ್ಷೆ ತಯಾರಿಸಲಾಗುವುದು ಎಂದೂ ಸಿಇಒ ಹೇಳಿದರು.  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು 29, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು 27, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು 4, ಹೊಲಿಗೆ ತರಬೇತಿ ಕೇಂದ್ರಗಳು 2, ಜಿಲ್ಲಾ ಕಚೇರಿ 1, ತಾಲೂಕು ಮಟ್ಟದಮ ಕಚೇರಿ 5, ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿ ಒಂದು ಇದ್ದು, 11 ನಿವೇಶನ ರಹಿತ ನಿಲಯಗಳಿವೆ.
ಇವುಗಳಲ್ಲಿ ನಗರದ ಬಿಜೈಯಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಹಾಗೂ ಕದ್ರಿಯ ಸಾರ್ವಜನಿಕ ಮಾದರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ  ಸರ್ಕಾರಿ ಜಮೀನು ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು, ಹೊರವಲಯದ ನಾಟೆಕಲ್ ನ ಮುಸ್ಲಿಮ್ ವಸತಿ ಶಾಲೆಗೆ ಮೀಸಲಿಟ್ಟ ಜಾಗದ ಬಗ್ಗೆ ಗೊಂದಲಗಳಿವೆ ಎಂದರು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮನ್ವಯದೊಂದಿಗೆ ವಸತಿ ನಿಲಯಗಳ ನಿವೇಶನ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಪರಿಹರಿಸಲು ಉಪಸಮಿತಿಯ ಅಧ್ಯಕ್ಷರಾದ ತನ್ವೀರ್ ಸೇಠ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸರ್ಕಾರಿ ಜಮೀನು ಲಭ್ಯವಿದ್ದರೆ ತತ್ ಕ್ಷಣವೇ ಸಮಿತಿಯ ನಡಾವಳಿಯನ್ನು ಉಲ್ಲೇಖಿಸಿ ಆದ್ಯತೆಯ ನೆಲೆಯಲ್ಲಿ ಜಮೀನು ನೀಡಲು ಅವರು ಸೂಚಿಸಿದರು.
ಹಾಸನ, ಚಿಕ್ಕಮಗಳೂರು, ಉಡುಪಿ ನಂತರದ ದಕ್ಷಿಣ ಕನ್ನಡ ಭೇಟಿಯಲ್ಲಿ ದ. ಕ ಜಿಲ್ಲೆಯ ವಸತಿಶಾಲೆಗಳ ನಿರ್ವಹಣೆ ಬಗ್ಗೆ ಸಮಿತಿ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಸಭೆಯಲ್ಲಿ ನಿಗಮ ಹಾಗೂ ಇಲಾಖೆಗಳು ಎದುರಿಸುತ್ತಿರುವ ವಿದ್ಯಾರ್ಥಿ ವೇತನ, ಸಿಲಿಂಡರ್ ಹಾಗೂ ಆಹಾರ ಪೂರೈಕೆ  ಸಮಸ್ಯೆಗಳನ್ನು ಅಧಿಕಾರಿಗಳು ಉಪಸಮಿತಿ ಸದಸ್ಯರ ಗಮನಕ್ಕೆ ತಂದರು. ಸಭೆಯಲ್ಲಿ ಸಮಿತಿ ಸದಸ್ಯರಾದ ಎಸ್ ಪಿ ಮಂಜುನಾಥ್, ಎಂ ಶ್ರೀನಿವಾಸ್, ರಮಾನಾಥ ರೈ, ಸಂಚಾಲಕ ಎಂ ರಾಮಯ್ಯ, ಉಪಕಾರ್ಯದರ್ಶಿ ಮಲ್ಲಪ್ಪ ಪಿ ಕಾಳೆ, ಅಪರ ಜಿಲ್ಲಾಧಿಕಾರಿ ಕೆ. ಎ ದಯಾನಂದ ಉಪಸ್ಥಿತರಿದ್ದರು.


 'ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರ ಹಾನಿ ತಪ್ಪಿಸಿ'