ಮಂಗಳೂರು, ನವೆಂಬರ್.07 :- ದೀಪಗಳ ಹಬ್ಬ ದೀಪಾವಳಿ ಮಾಲಿನ್ಯರಹಿತವಾಗಿರಲಿ ಎಂದು ಪ್ರಾದೇಶಿಕ ಪರಿಸರ ಅಧಿಕಾರಿಗಳು ಜಿಲ್ಲೆಯ ಜನತೆಯನ್ನು ವಿನಂತಿಸಿದ್ದಾರೆ.
ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯದ ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯಗಳನ್ನು ನಿಯಂತ್ರಣದಲ್ಲಿಡುವ ಉದೇಶದಿಂದ ಪರಿಸರ ಸಂರಕ್ಷಣೆ ನಿಯಮಾವಳಿಗಳು 1999ರ ಅನ್ವಯ ಹಾಗೂ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶ wp (c) 72/98, ದಿನಾಂಕ 21.7.05 ರ ಪ್ರಕಾರ 125 db (a), ಅಥವಾ 145 db (c) ಕ್ಕಿಂತ (ಪಟಾಕಿ ಸಿಡಿಸುವ ಸ್ಥಳದಿಂದ 4 ಮೀಟರ್ ಅಂತರದಲ್ಲಿ) ಹೆಚ್ಚು ಶಬ್ದ ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಮಾರಾಟ ಮಾಡುವುದಾಗಲಿ ಮತ್ತು ಉಪಯೋಗಿಸುವುದಾಗಲೀ ನಿಷೇಧಿಸಲ್ಪಟ್ಟಿದೆ.
ಆದ್ದರಿಂದ ಸಾರ್ವಜನಿಕರು 125 db (a) 145db(c) ಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿ ಹಾಗೂ ಸಿಡಿ ಮದ್ದುಗಳನ್ನು ಉಪಯೋಗಿಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಶಬ್ದ ಉಂಟು ಮಾಡುವ ಪಟಾಕಿಗಳನ್ನು ನಿಷೇಧಿಸಲಾಗಿದೆ. ದಿನದ ಯಾವುದೇ ಸಮಯದಲ್ಲಿ ನಿಶಬ್ದ ವಲಯಗಳೆ0ದು ಘೋಷಿಸಲ್ಪಟ್ಟಿರುವ ಸ್ಥಳಗಳಲ್ಲಿ ಯಾವುದೇ ರೀತಿಯ ಸಿಡಿ ಮದ್ದು ಬಳಸಬಾರದು.
ಸಾರ್ವಜನಿಕರು ಪಟಾಕಿ ಹಾಗೂ ಸಿಡಿಮದ್ದುಗಳನ್ನು ವಸತಿ ಪ್ರದೇಶಗಳಲ್ಲಿ ಉಪಯೋಗಿಸುವ ಬದಲು ಮೈದಾನ ಗಳಲ್ಲಿ ಸಿಡಿಸಲು ಕೋರಲಾಗಿದೆ.
'ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರ ಹಾನಿ ತಪ್ಪಿಸಿ'