ಮಂಗಳೂರು,ಏಪ್ರಿಲ್.02:ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಜ್ಯೋತಿ, ಹಂಪನಕಟ್ಟೆ, ಕಂಕನಾಡಿ, ಬಿಜೈ ಸೇರಿದಂತೆ ವಿವಿಧ ಕಡೆ 40 ಮೈಕ್ರಾನ್ ಗಿಂತ ಕಡಿಮೆ ಮೈಕ್ರಾನ್ ಹೊಂದಿರುವ ಪ್ಲಾಸ್ಟಿಕ್ ಚೀಲಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ಪಾಲಿಕೆ ಆಯುಕ್ತ ಡಾ.ಕೆ.ಎನ್.ವಿಜಯ ಪ್ರಕಾಶ್ ನೇತೃತ್ವದ 10 ತಂಡಗಳು ಏಕ ಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದವು.
ಸೆಂಟ್ರಲ್ ಮಾರ್ಕೆಟ್ ಪ್ರದೇಶದ ಅನೇಕ ಅಂಗಡಿ ಗಳಿಗೆ ದಿಢೀರ್ ದಾಳಿ ನಡೆಸಿದ ಆಯುಕ್ತರು ಪರಿ ಶೀಲನೆ ನಡೆಸಿ ದಾಗ 40 ಮೈಕ್ರಾನ್ ಗಿಂತ ಕಡಿಮೆ ಮೈಕ್ರಾನ್ ಹೊಂದಿ ರುವ ಚೀಲ ಗಳನ್ನು ಮಾರಾಟ ಮಾಡು ತ್ತಿರುವುದು ಕಂಡು ಬಂತು. ಈಗಾಗಲೇ ಎರಡು ಬಾರಿ ಸೂಚನೆ ನೀಡಿದ್ದರೂ ಮತ್ತೆ ಮತ್ತೆ ಮಾರಾಟ ಮಾಡುತ್ತಿ ರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಆಯುಕ್ತರು ಇದೇ ರೀತಿ ಪುನರಾ ವರ್ತಿ ಸಿದರೆ ಪರವಾನಿಗೆ ರದ್ದು ಮಾಡು ವುದಾಗಿ ಎಚ್ಚರಿಕೆ ನೀಡಿದರು. ಇದು ಕೊನೆಯ ಎಚ್ಚರಿಕೆ ಯಾಗಿದ್ದು,ನಿಯಮ ಉಲ್ಲಂಘಿ ಸುವ ಅಂಗಡಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳ ಲಾಗುವುದು.ಜನತೆ ಕೂಡ ಪ್ಲಾಸ್ಟಿಕ್ ಹೆಚ್ಚು ಬಳಕೆ ಮಾಡದೆ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಆಯುಕ್ತರು ಮನವಿ ಮಾಡಿದ್ದಾರೆ.