Thursday, April 21, 2011

'ಅಡಿಕೆಯಿಂದ ಆಹಾರ ಬೆಳೆಯತ್ತ ಮುಖ ಮಾಡುವ ರೈತರಿಗೆ ಪೈಲಟ್ ಯೋಜನೆ ರೂಪಿಸಿ'

ಮಂಗಳೂರು,ಏಪ್ರಿಲ್.21:ಅಡಿಕೆ ಕೃಷಿಯಿಂದ ಆಹಾರ ಬೆಳೆಯನ್ನು ಬೆಳೆಯಲು ಉತ್ಸುಕರಾಗಿರುವ ರೈತರಿಗೆ ಪ್ರೋತ್ಸಾಹ ನೀಡಲು ಸರ್ಕಾರ ರೈತರಿಗಾಗಿ ಪೈಲಟ್ ಯೋಜನೆಯನ್ನು ರೂಪಿಸಬೇಕು ಎಂದು ರೈತ ಮುಖಂಡರಲ್ಲೊಬ್ಬರಾದ ರವಿಕಿರಣ ಪುಣಚ ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅವರ ಕಚೇರಿಯಲ್ಲಿ ಆಯೋಜಿಸಿದ್ದ ರೈತರ ಸಭೆಯಲ್ಲಿ ಮಾತನಾಡುತ್ತಿದ್ದರು. ಸಾಲಮನ್ನಾ ಯೋಜನೆ, ಅಡಿಕೆ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ, ಹಳದಿರೋಗ, ಕೊಳೆ ರೋಗ ತಡೆಗೆ ಕ್ರಮ, ಕುಮ್ಕಿ ಜಮೀನು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ರೈತರು ಜಿಲ್ಲಾಡಳಿತದ ಗಮನ ಸೆಳೆದರು.

ರೈತರ ಸಮಸ್ಯೆ ಗಳನ್ನು ಆಲಿಸಿದ ಜಿಲ್ಲಾಧಿ ಕಾರಿಗಳು, ಜಪ್ತಿ ವಿಷಯ ದಲ್ಲಿ ಪ್ರತಿ ಯೊಂದು ಪ್ರಕರಣದ ಹಿನ್ನಲೆ ಯನ್ನು ಅರ್ಥೈಸಿ ನಿರ್ಧಾರ ಕೈಗೊ ಳ್ಳಬೇಕೆಂದು ಸಂಬಂಧ ಪಟ್ಟವರಿಗೆ ಸೂಚನೆ ನೀಡಿದರು. ಅಡಿಕೆಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸುವ ಬಗ್ಗೆ ಕ್ಯಾಂಪ್ಕೊದ ಸಲಹೆಯನ್ನು ಕೋರಿದರು. ಈ ಸಂಬಂಧ ಕ್ಯಾಂಪ್ಕೊ, ತೋಟಗಾರಿಕ ಇಲಾಖೆ, ರೈತರ ಜೊತೆ ಚರ್ಚಿಸಿ ಸಮರ್ಪಕ ನಿರ್ಧಾರ ತೆಗೆದುಕೊಳ್ಳಲು ಸೂಚಿಸಿದರು. ಬಳಿಕ ಸರ್ಕಾರಕ್ಕೆ ಈ ಸಂಬಂಧ ವರದಿ ಕಳುಹಿಸುವುದಾಗಿ ನುಡಿದರು. ಕೃಷಿ ಸಾಲ ಜಪ್ತಿಯ ಸಂಬಂಧ ಲೀಡ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಸಹಕಾರಿಗಳ ಜೊತೆ ಸಭೆ ನಡೆಸಿ ನಿರ್ಣಯ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಉದ್ಯೋಗ ಖಾತರಿ ಯೋಜನೆ ಬಗ್ಗೆ ಸಮಗ್ರ ಮಾಹಿತಿ ರೈತರಿಗೆ ನೀಡುವಂತೆ, ಕೆಲಸವಾದ ಕಡೆ ಹಣ ಬಿಡುಗಡೆ ಮಾಡುವ ಸಂಬಂಧ ರೈತರ ಪ್ರಶ್ನೆಗಳಿಗೆ ಸಹಾಯಕ ಕಾರ್ಯದರ್ಶಿ ಚಂದ್ರಶೇಖರ ಮಸಗುಪ್ಪಿ ಅವರು ಉತ್ತರಿಸಿದರು.

ಸಭೆಯಲ್ಲಿ ಎಂಡೋ ಸಲ್ಫಾನ್ ನಿಷೇಧಕ್ಕೆ ಒತ್ತಾ ಯಿಸಿದ ರೈತರು, ಈ ಬಗ್ಗೆ ನೀಡಿರುವ ಪರಿಹಾರದ ಬಗ್ಗೆ ಜಿಲ್ಲಾಧಿ ಕಾರಿ ಗಳಿಂದ ಮಾಹಿತಿ ಕೋರಿದರು. 220 ಎಂಡೋ ಸಲ್ಫಾನ್ ಪೀಡಿ ತರನ್ನು ಗುರುತಿ ಸಲಾಗಿದ್ದು, 50.000 ರೂ. ಪರಿಹಾರ ನೀಡಿದೆ. ಶೇ. 75ರಷ್ಟು ಅಂಗವಿಕಲರು ಮತ್ತು ಶೇ. 75ರಷ್ಟು ಅಂಗವಿಕಲರಲ್ಲಿ 135 ಜನರಿಗೆ ವಿಶೇಷ ಪೆನ್ಷನ್ ನೀಡಿದೆ. ಕೊಕ್ಕಡದಲ್ಲಿ ಇಂತಹವರಿಗಾಗಿಯೇ ಡೇ ಕೇರ್ ಸೆಂಟರ್ ತೆರೆಯಲಾಗಿದ್ದು, ವೈದ್ಯರು ಮತ್ತು ಎಲ್ಲ ಮೂಲ ಸೌಲಭ್ಯಗಳನ್ನು ಏರ್ಪಡಿಸಿದ್ದು ಇವರನ್ನು ಮನೆಗಳಿಂದ ಕರೆದೊಯ್ಯಲು ಮನೆಗಳಿಗೆ ಬಿಡಲು ಬಸ್ ಸೌಲಭ್ಯವನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಸೆಜ್ ಬಗ್ಗೆ, ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ಮುಳುಗಡೆಯಾಗುವ ರೈತರ ಭೂಮಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಸುವರ್ಣ ಭೂಮಿ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಪದ್ಮಯ್ಯ ನಾಯ್ಕ್ ಅವರು ಮಾಹಿತಿ ನೀಡಿದರು . ಕೃಷಿ, ಜಲಾನಯನ, ಪಶುಸಂಗೋಪನೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.