ಮಂಗಳೂರು,ಏಪ್ರಿಲ್.01:ನಾಗರೀಕ ಸಮಾಜದಲ್ಲಿ ನೆಮ್ಮದಿಯ ನಿರ್ಭಯ ವಾತಾವರಣ ಮೂಡಬೇಕಾದರೆ ವ್ಯವಸ್ಥಿತ, ಸುಸ್ಸಜ್ಜಿತ ಪೊಲೀಸ್ ಮತ್ತು ಅಗ್ನಿಶಾಮಕದಳಗಳಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜೀವಿಶಾಸ್ತ್ರ, ಬಂದರು ಮತ್ತು ಒಳನಾಡು ಜಲಸಾರಿಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಅವರು ಹೇಳಿದರು. ಅವರಿಂದು ಮಂಗಳೂರು ನಗರದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಮಂಗ ಳೂರು ನಗರ ದಿನೇ ದಿನೇ ಬೆಳವ ಣಿಗೆ ಯನ್ನು ಕಾಣು ತ್ತಿದ್ದು, ಬಹು ಅಂತ ಸ್ತುಗಳ ಕಟ್ಟಡ ಗಳು ವ್ಯಾಪಕ ವಾಗಿದೆ; ಅಗ್ನಿ ಶಾಮಕ ಘಟಕ ಗಳು ನಗರ ದಲ್ಲಿ ಬಹು ಅಗತ್ಯ ವಾಗಿದ್ದು, ಇಲಾಖೆ ಯ ಅಗತ್ಯ ವನ್ನು ಪೂರೈ ಸಲು ಸರ್ಕಾರ ಬದ್ಧ ವಾಗಿದೆ ಎಂದರು. ರಾಜ್ಯ ಪೊ ಲೀಸ್ ಹೌಸಿಂಗ್ ಕಾರ್ಪೋ ರೇಷನ್ ಸುಮಾರು 2.52 ಕೋಟಿ ವೆಚ್ಚದ ಅಗ್ನಿಶಾಮಕ ಠಾಣಾಕಟ್ಟಡವನ್ನು 14ತಿಂಗಳೊಳಗೆ ಉತ್ತಮ ರೀತಿಯಲ್ಲಿ ನಿರ್ಮಿಸಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಡಾ.ಡಿ.ವಿ ಗುರು ಪ್ರಸಾದ್ ಪೊಲೀಸ್ ಮಹಾ ನಿರ್ದೇ ಶಕರು ಹಾಗೂ ಮಹಾ ನಿರ್ದೇ ಶಕರು ಕರ್ನಾ ಟಕ ಅಗ್ನಿ ಶಾಮಕ ಮತ್ತು ತುರ್ತು ಸೇವೆ ಗಳು ಇವರು ಮಾತ ನಾಡಿ, ರಾಜ್ಯ ದಲ್ಲಿ ಅಗ್ನಿ ಶಾಮಕ ಠಾಣೆ ಗಳನ್ನು ಆಧು ನಿಕ ಗೊಳಿ ಸಲು ಸಾಕಷ್ಟು ಹಣ ಕಾಸನ್ನು ಒದಗಿಸಿದೆ. ಬಹು ಮಹಡಿ ಕಟ್ಟಡ ನಿರ್ಮಾಣ ಗಾರರು ಕಟ್ಟಡ ನಿರ್ಮಾಣ ಶೈಲಿಯ ಬಗ್ಗೆ ಎಚ್ಚರಿಕೆ ವಹಿ ಸಬೇಕೆಂ ದರು. ಪ್ರತಿ ತಾಲೂಕಿ ಗೊಂದ ರಂತೆ ಅಗ್ನಿ ಶಾಮಕ ಠಾಣೆ ಗಳನ್ನು ಆರಂಭಿ ಸಲಾ ಗುವುದು. ಎಲ್ಲರ ನಗರ, ಪಟ್ಟಣಗಳಿಗೆ ನಾಗರೀಕ ರಕ್ಷಣಾ ಘಟಕಗಳನ್ನು ಆರಂಭಿಸಲು ಇಲಾಖೆ ಯೋಚಿಸುತ್ತಿದೆ ಎಂದೂ ಡಾ ಗುರುಪ್ರಸಾದ್ ತಿಳಿಸಿದರು.
ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಜಿ.ಪಂ. ಅಧ್ಯಕ್ಷರಾದ ಶೈಲಜಾ ಭಟ್, ಮೇಯರ್ ಪ್ರವೀಣ್ ಕುಮಾರ್, ಉಪಮೇಯರ್ ಗೀತಾ, ಪಶ್ಚಿಮ ವಲಯ ಐಜಿಪಿ ಅಲೋಕ್ ಮೋಹನ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜಿಲ್ಲಾ ಪೊಲೀಸ್ ಅಧೀಕ್ಷಕ ಲಾಬೂರಾಮ್ ಉಪಸ್ಥಿತರಿದದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವರದರಾಜ್ ಸ್ವಾಗತಿಸಿದರು. ಬಸವಣ್ಣ ವಂದಿಸಿದರು.