ಅವರು ಮಂಗಳವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಗಡಿ ಪ್ರದೇಶದ ಅಭಿವೃದ್ಧಿ ಹಾಗೂ ಕಾಮಗಾರಿ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ನಾಡಿನ ಗಡಿ ಪ್ರದೇಶದ ಸ್ಥಳೀಯ ಸಮಸ್ಯೆ, ಕಡಲ್ಕೊರೆತ, ಪ್ರವಾಸೋದ್ಯಮ, ಪರಿಸರ, ಶಿಕ್ಷಣ, ಸಾಂಸ್ಕೃತಿಕ ಅಂಶಗಳು ಭಾಷಾ ಅಳಿವು ಉಳಿವಿನ ಸಮಸ್ಯೆ ಸೇರಿದಂತೆ ಸ್ಥಳೀಯ ಜನರ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಗಡಿನಾಡ ಉತ್ಸವದ ಮೂಲಕ ಪ್ರತಿಯೊಂದು ಕಡೆ ಸಮಸ್ಯೆಗಳನ್ನು ದಾಖಲಿಸುವ ಕೆಲಸ ಆಗುತ್ತಿದೆ. ಎರಡು ದಿನದ ಉತ್ಸವದಲ್ಲಿ ಗಡಿನಾಡ ಸಮಸ್ಯೆಗಳ ಕುರಿತು ವಿಚಾರಗೋಷ್ಠಿಗಳನ್ನು ನಡೆಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಏ.27 ಮತ್ತು 28 ರಂದು ಗಡಿನಾಡ ಉತ್ಸವ ನಡೆಯಲಿದ್ದು, ಇದಕ್ಕಾಗಿ ಸೂಕ್ತ ಸ್ಥಳವನ್ನು ಗೊತ್ತುಪಡಿಸಲಾಗುವುದು ಎಂದರು.
ಈಗಾಗಲೇ ಐದು ಗಡಿ ರಾಜ್ಯದ ಅಂಚಿನಲ್ಲಿರುವ 19 ಜಿಲ್ಲೆಯ 52 ತಾಲೂಕುಗಳಿಗೆ ಭೇಟಿ ನೀಡಿದ್ದೇನೆ. ಚಾಮರಾಜನಗರ, ಉತ್ತರ ಕನ್ನಡ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಗಡಿನಾಡ ಉತ್ಸವ ನಡೆದಿದ್ದು, ಅಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದೆ. ಸರಕಾರ ಈಗಾಗಲೇ ಪ್ರಾಧಿಕಾರಕ್ಕೆ 15 ಕೋಟಿ ರೂ. ಬಿಡುಗಡೆ ಮಾಡಿದೆ. ಅದರಲ್ಲಿ ಗಡಿನಾಡ ಉತ್ಸವಕ್ಕೆ ತಲಾ ನಾಲ್ಕು ರೂ. ಲಕ್ಷ ಒದಗಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೂಡ ಇದರಲ್ಲಿ ಕೈಜೋಡಿಸಬೇಕು. ಒಟ್ಟು 100 ಕೋಟಿ ಅನುದಾನಕ್ಕಾಗಿ ಸರಕಾರವನ್ನು ಒತ್ತಾಯಿಸಲಾಗಿದೆ ಎಂದು ಬೆಲ್ಲದ ನುಡಿದರು.

ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮೋಹನ್ ನಾಗಮ್ಮನವರ್, ದ.ಕ. ಜಿಲ್ಲಾ ಅಪರ ಜಿಲ್ಲಾಕಾರಿ ಪ್ರಭಾಕರ ಶರ್ಮಾ,ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಶಿವಶಂಕರ್, ಶಾಸಕ ಯು.ಟಿ.ಖಾದರ್ ಉಪಸ್ಥಿತರಿದ್ದರು.