ಬಳಿಕ ನಡೆದ ಸಭಾ ಕಾರ್ಯ ಕ್ರಮದಲ್ಲಿ ಮಾತ ನಾಡಿದ ಮುಖ್ಯ ಮಂತ್ರಿ ಗಳು, ರಾಜ್ಯ ದಲ್ಲಿ ದಾನಿ ಗಳ ಕೊರತೆ ಇಲ್ಲ ವೆಂಬುದು ಅತಿ ವೃಷ್ಟಿ ಯಲ್ಲಿ ನಲು ಗಿದಾ ಗಲೇ ಸಾಬೀತಾ ಗಿದ್ದು, ದಾನಿ ಗಳನ್ನು ಪ್ರೇರೇಪಿ ಸುವಂತ ಹ ಕೆಲಸ ವಾಗ ಬೇಕಿದೆ. ಅಂತಹ ಕೆಲಸಕ್ಕೆ ಇಂದಿನ ಸಮಾ ರಂಭ ಸಾಕ್ಷಿ ಯಾಗಿದೆ ಎಂದರು. ಮಗಳ ಹೆಸರನ್ನು ಶಾಶ್ವತವಾಗಿಸಲು ಬಡಜನರ ಆರೋಗ್ಯ ಸೇವೆಗಾಗಿ ನೀಡಿದ ದಾನಕ್ಕಾಗಿ ನಾಯ್ಡು ದಂಪತಿಯನ್ನು ರಾಜ್ಯ ಸರಕಾರದ ಪರವಾಗಿ ಅಭಿನಂದಿಸಿದರು. ಯೋಗೀಶ ಭಟ್ ಅವರು ರಾಘವ ನಾಯ್ಡು ಅವರನ್ನು ಪ್ರೇರೇಪಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಭಾಗದ ಜನತೆಗೆ ಉತ್ತಮ ಕೊಡುಗೆ ಲಭಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಕಟ್ಟಡ ನಿರ್ಮಾಣದ ಸಂದರ್ಭ ಹಾಗೂ ನಿರ್ವಹಣೆ ಮತ್ತು ಅಗತ್ಯ ಸಲಕರಣೆಗಳಿಗೆ ಸಕಲ ನೆರವು ನೀಡಲು ಸರಕಾರ ಬದ್ಧವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪಸಭಾಪತಿಗಳಾದ ಎನ್.ಯೋಗೀಶ ಭಟ್, ಲೇಡಿಗೋಶನ್ ಆಸ್ಪತ್ರೆಗೆ ದಾನಿಗಳ ನೆರವಿನಿಂದ ನಿರ್ಮಾಣಗೊಳ್ಳುವ 8 ಅಂತಸ್ತುಗಳ ನೂತನ ಕಟ್ಟಡದ ನಿರ್ವಹಣೆಗೆ ವಾರ್ಷಿಕ ರೂ. 2.5 ಕೋಟಿಯ ಅಗತ್ಯವಿದೆ. ಉಪಕರಣಗಳಿಗಾಗಿ ರೂ. 10 ಕೋಟಿ ಬೇಕು. ಮುಖ್ಯಮಂತ್ರಿಗಳು ಈ ಅನುದಾನ ಒದಗಿಸಿ ಸಹಕರಿಸಬೇಕೆಂದು ವಿನಂತಿಸಿದರು.
ಸರಕಾರಿ ವೆನ್ಲಾಕ್ ಆಸ್ಪತ್ರೆಯ ಬಳಿ ಸುಪರ್ ಸ್ಪೆಶಾಲಿಟಿ ಬ್ಲಾಕ್ ನಿರ್ಮಿಸುವುದು ನನ್ನ ಮುಂದಿನ ಗುರಿ. ಅದಕ್ಕಾಗಿ ರೂ. 100 -150 ಕೋಟಿ ಅನುದಾನ ಅಗತ್ಯವಿದೆ. ದಾನಿಗಳನ್ನು ಜೋಡಿಸುವ ಪ್ರಯತ್ನ ಆರಂಭವಾಗಿದೆ ಎಂದರು. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ಕ್ಯಾ. ಗಣೇಶ್ ಕಾರ್ಣಿಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ , ಮೇಯರ್ ಪ್ರವೀಣ್ ಅಂಚನ್, ಉಪಮೇಯರ್ ಗೀತಾ ಎನ್. ನಾಯಕ್, ಪಾಲಿಕೆ ಸದಸ್ಯೆ ಸುರೇಖಾ, ದ.ಕ.ಜಿ.ಪಂ. ಅಧ್ಯಕ್ಷರಾದ ಕೆ.ಟಿ.ಶೈಲಜಾ ಭಟ್, ಬಿಸಿಎಂ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್, ಜಿಲ್ಲಾಧಿಕಾರಿ ಸುಬೋಧ್ ಯಾದವ್, ರಾಜ್ಯದ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ| ಅರುಣಾ, ದ.ಕ.ಜಿ.ಪಂ. ಮುಖ್ಯ ಕಾರ್ಯ ನಿವರ್ಾಹಕ ಅಕಾರಿ ಪಿ. ಶಿವಶಂಕರ್, ಮನಪಾ ಆಯುಕ್ತ ಡಾ.ಕೆ.ಎನ್. ವಿಜಯಪ್ರಕಾಶ್ ಉಪಸ್ಥಿತರಿದ್ದರು.
ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಶಕುಂತಳಾ ಸ್ವಾಗತಿಸಿದರು. ಹಿರಿಯ ತಜ್ಞೆ ಡಾ| ಜೆ.ಪೂರ್ಣಿಮಾ ವಂದಿಸಿದರು.