
ಅವರು ಇಂದು ದ.ಕ.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮಹಿಳೆಯರಿಗೆ ಹೇಗೆ ರಕ್ಷಣೆ ನೀಡಲಾಗುತ್ತಿದೆ ಎಂಬ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು,ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಮಾತನಾಡುತ್ತಿದ್ದರು.ಜಿಲ್ಲೆಯಲ್ಲಿ ನಿರಾಶ್ರಿತ ಮಹಿಳೆಯರು ಹಾಗೂ ಗಂಡ ಅಥವಾ ಕುಟುಂಬದವರ ದೌರ್ಜನ್ಯಕ್ಕೊಳಗಾಗಿ ಆಶ್ರಯ ಬೇಡಿ ಬಂದವರಿಗೆ ತಾತ್ಕಾಲಿಕ ವಸತಿ ಸೌಕರ್ಯಕ್ಕೆ ಇದ್ದದ್ದೊಂದು ಸ್ವೀಕಾರ ಕೇಂದ್ರ ಬಂದ್ ಆಗಿರುವುದರಿಂದ ತುಂಬಾ ತೊಂದರೆಯಾಗಿರುವ ಬಗ್ಗೆ,ಸಾಂತ್ವನ ಮಹಿಳಾ ಸಹಾಯವಾಣಿ ಹಾಗೂ ಮಹಿಳಾ ಪುನರ್ ವಸತಿ ಕೇಂದ್ರದ ಕಾರ್ಯಕರ್ತರು ಹಾಗೂ ಮಹಿಳಾ ಪೊಲೀಸ್ ಠಾಣಾಧಿಕಾರಿ ಮಹಿಳಾ ಆಯೋಗದ ಅಧ್ಯಕ್ಷರ ಗಮನಕ್ಕೆ ತಂದರು.ದಿಕ್ಕು ದೆಸೆಯಿಲ್ಲದ ಹಿರಿಯರ ಅಂಕೆ ಇಲ್ಲದೆ, ಕಪಟ ಪ್ರೇಮದ ಬಲೆಗೆ ಬಿದ್ದು ಮದುವೆ ಆಗಿರುವ ಪ್ರೇಮ ವಿವಾಹಗಳು,ವರದಕ್ಷಿಣೆ ದಾಹ, ಸಂಶಯಗಳಿಂದಾಗಿ 1-2 ವರ್ಷಗಳಲ್ಲೇ ಸಂಬಂಧಗಳು ಮುರಿದು ಬೀಳುತ್ತವೆ.

ದಕ್ಷಿಣ ಕನ್ನಡ ಜಿಲ್ಲೆಯ ಜನ ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಸುಶಿಕ್ಷಿತರು ಸಂಸ್ಕೃತಿವಂತರು ಆದರೆ ಬಸ್ಸುಗಳಲ್ಲಿ ಮಹಿಳೆಗೆ ಮೀಸಲಿಟ್ಟ ಆಸಗಳಲ್ಲಿ ಮಹಿಳೆಯರು ನಿಂತಿದ್ದರೂ ಸ್ಥಳ ಬಿಡದೆ ಕೂರುವುದು ಸಂಸ್ಕೃತಿಗೆ ಅಪಚಾರವೆಸಗಿದಂತೆಯೇ ಸರಿ ಎಂದ ಅವರು ಮಹಿಳೆಯರಿಗೆ ಮೀಸಲಿಟ್ಟಿರುವ ಜಾಗದಲ್ಲಿ ಪುರುಷ ಸಹ ಪ್ರಯಾಣಿಕರು ಅವರ ಆಸನಗಳನ್ನು ಬಿಟ್ಟುಕೊಡಬೇಕೆಂದು ತಿಳಿಸಿದ್ದಾರೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ,ಜಿಲ್ಲಾ ಪಂಚಾಯತ್ ಸಿಇಓ ಪಿ.ಶಿವಶಂಕರ್, ಡಿವೈಎಸ್ ಪಿ ಬಿ.ಜೆ.ಭಂಡಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ್ಯೆ ಶೈಲಜಾ ಭಟ್ ,ರಾಜ್ಯ ಬಾಲಭವನ ಅಧ್ಯಕ್ಷ್ಯೆ ಸುಲೋಚನಾ ಭಟ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಉಪನಿರ್ದೇಶಕಿ ಶಕುಂತಳಾ ಭಾಗವಹಿಸಿದ್ದರು.