
ಸುಮಾರು ರೂ. 9 ಲಕ್ಷ ವೆಚ್ಚದಲ್ಲಿ ನವೀಕ ರಣ ಗೊಂಡ ಕಚೇರಿ ಯನ್ನು ಸಚಿ ವರು ಉದ್ಘಾ ಟಿಸಿದರು. ವಾರ್ತಾ ಇಲಾಖೆ ಯ ಕಚೇರಿ ಯನ್ನು ಸುಂದರ ವಾಗಿ ನವೀಕ ರಣಗೊ ಳಿಸ ಲಾಗಿದೆ. ಲೋಕೋ ಪಯೋಗಿ ಇಲಾಖೆಯ ಅಧಿಕಾ ರಿಗಳ ಉಸ್ತು ವಾರಿ ಯಲ್ಲಿ ಗುತ್ತಿಗೆ ದಾರರು ಒಳ್ಳೆಯ ಕಾಮಗಾರಿ ಮಾಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಪತ್ರಕರ್ತರ ಅನುಕೂಲತೆಗಾಗಿ ಹೊಸ ವಾಹನವನ್ನು ಇಲಾಖೆಗೆ ಒದಗಿಸಲಾಗಿದೆ. ಸರಕಾರದ ವಿವಿಧ ಕಾರ್ಯಕ್ರಮಗಳು, ಯೋಜನೆಗಳನ್ನು ಜನತೆಯ ಬಳಿಗೆ ಒಯ್ಯಲು ಮಾಧ್ಯಮ ಮಂದಿ ವಾರ್ತಾ ಇಲಾಖೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಚಿವ ಪಾಲೆಮಾರ್ ಹೇಳಿದರು.


ಸುಂದರ ನಗರ:
ಮಂಗ ಳೂರು ನಗರ ವನ್ನು ಧೂಳು ರಹಿತ ಮತ್ತು ಹಸಿರೀ ಕರಣ ಗೊಳಿಸಲು ಮಂಗ ಳೂರು ಮಹಾ ನಗರ ಪಾಲಿಕೆಗೆ ಹೆಚ್ಚು ಅನುದಾನ ಒದಗಿಸಲಾಗುವುದು. ಸುಂದರ, ಮಾಲಿನ್ಯರಹಿತ ನಗರ ಸರಕಾರದ ಉದ್ದೇಶವಾಗಿದೆ ಎಂದು ಉಸ್ತುವಾರಿ ಸಚಿವರು ಹೇಳಿದರು.
ದ.ಕ.ಜಿ.ಪಂ. ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಪಿ. ಶಿವಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎ. ಪ್ರಭಾಕರ ಶರ್ಮ, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಬಿ.ಎಸ್.ಬಾಲಕೃಷ್ಣ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಒ. ಶ್ರೀರಂಗಪ್ಪ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಪತ್ರಕರ್ತ ಪುಷ್ಪರಾಜ ಬಿ.ಎನ್. ಕಾರ್ಯಕ್ರಮ ನಿರ್ವಹಿಸಿದರು. ವಾರ್ತಾಧಿಕಾರಿ ಕೆ. ರೋಹಿಣಿ ಸ್ವಾಗತಿಸಿ, ವಂದಿಸಿದರು.

1964 ರಲ್ಲಿ ಮಂಗ ಳೂರಿ ನಲ್ಲಿ ಪ್ರಾರಂಭ ಗೊಂಡ ವಾರ್ತಾ ಇಲಾಖೆ ಯ ಕಾರ್ಯಾ ಲಯ 1984 ರಲ್ಲಿ ಲೋಕೋ ಪಯೋಗಿ ಇಲಾಖೆ ಕಟ್ಟಡದ ಸ್ವಂತ ಕೊಠಡಿ ಗೆ ಸ್ಥಳಾಂ ತರ ಗೊಂಡಿತು. 26 ವರ್ಷಗಳ ಬಳಿಕ ಕಚೇರಿ ನವೀಕ ರಣಗೊಂಡಿತು. ಕಚೇರಿಯು ಅಧಿಕಾರಿಯ ಕರ್ತವ್ಯ ಕೊಠಡಿ, ಸಿಬ್ಬಂದಿಗಳ ಕೊಠಡಿ, ವಾರ್ತಾ ಸಹಾಯಕರ ಕೊಠಡಿ, ಸಭಾಂಗಣ ಹಾಗೂ ದಾಸ್ತಾನು ಕೊಠಡಿಗಳನ್ನು ಒಳಗೊಂಡಿದೆ.