ಇದೇ ಸಂದರ್ಭದಲ್ಲಿ ನೂತನ ವೆಂಟೆಡ್ ಡ್ಯಾಂನ ಕಾಮಗಾರಿಯ ವೀಕ್ಷಣೆ ನಡೆಸಿದ ಸಚಿವರು, ಸುಮಾರು ರೂ.48.37 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ವೆಂಟೆಡ್ ಡ್ಯಾಂ ಕಾಮಗಾರಿ ಭರದಿಂದ ನಡೆಯುತ್ತಿದೆ. ಕಾಮಗಾರಿಯ ಗುಣಮಟ್ಟಕ್ಕೆ ಆದ್ಯತೆ ನೀಡಬೇಕೆಂಬುದು ನಿರ್ದೇಶಿಸಿದ ಸಚಿವರು, ಅದರಂತೆ ಅಣೆಕಟ್ಟು ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ. ಅಣೆಕಟ್ಟು ಕಾಮಗಾರಿ ಪೂರ್ಣಗೊಂಡ ಬಳಿಕ ಎಲ್ಲಾ ದಿನಗಳಲ್ಲೂ ನಿರಂತರ ನೀರು ಪೂರೈಕೆ ಮಾಡಲಾಗುವುದು ಎಂದು ನುಡಿದ ಸಚಿವರು, ಲಕ್ಯಾ ಡ್ಯಾಂ ನಿಂದ ಮಹಾನಗರಪಾಲಿಕೆಗೆ ನೀರು ಪೂರೈಕೆಗೆ ಈಗಾಗಲೇ ಸಮ್ಮತಿ ಸಿಕ್ಕಿದೆ. ಈ ನೀರನ್ನು ಕೈಗಾರಿಕೆಗಳಿಗೆ ಬಳಸಬಹುದು ಎಂದು ಸಚಿವರು ತಿಳಿಸಿದರು.
ಮುಖ್ಯಮಂತ್ರಿಗಳು ಮನಪಾಕ್ಕೆ ಒದಗಿಸಿದ ದ್ವಿತೀಯ ಹಂತದ ರೂ.100 ಕೋಟಿ ವಿಶೇಷ ಅನುದಾನದ ಕ್ರಿಯಾಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮೂರನೇ ಹಂತದಲ್ಲಿ ಮತ್ತೆ ರೂ.100 ಕೋಟಿ ವಿಶೇಷ ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿರುತ್ತಾರೆ ಎಂದು ಸಚಿವ ಪಾಲೆಮಾರ್ ನುಡಿದರಲ್ಲದೆ, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಜನತೆಯ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಹಿಂದೆಂದೂ ಒದಗಿಸದಷ್ಟು ಅನುದಾನವನ್ನು ಒದಗಿಸುತ್ತಿರುವುದಾಗಿ ಹೇಳಿದರು.
24x7 ನೀರು ಪೂರೈಕೆ:ಮಹಾ ನಗರ ಪಾಲಿಕೆ ಯ ನಾಲ್ಕೈದು ವಾರ್ಡ್ ಗಳಲ್ಲಿ ಪೈಲೆಟ್ ಯೋಜನೆ ಯನ್ವಯ ದಿನದ 24 ಗಂಟೆ ಯೂ ನೀರು ಪೂರೈಕೆ ಯೋಜನೆ ಯ ಸಮೀಕ್ಷೆ ಕಾರ್ಯ ಪ್ರಗತಿ ಯಲ್ಲಿದೆ. ಕ್ರಿಶೆಲ್ ಕಾರ್ಪೋರೇಶನ್ ಎಂಬ ಸಂಸ್ಥೆ ಈ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುತ್ತಿದೆ. ಪೈಲೆಟ್ ಯೋಜನೆಯ ಬಳಿಕ ಪಾಲಿಕೆಯ ಎಲ್ಲಾ ವಾರ್ಡಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಮನಪಾ ಆಯುಕ್ತ ಡಾ. ಕೆ.ಎನ್.ವಿಜಯಪ್ರಕಾಶ್ ತಿಳಿಸಿದರು.
ಈಗಿರುವ ವೆಂಟೆಡ್ ಡ್ಯಾಂ, 4 ಮೀ. ಎತ್ತರ ಹೊಂದಿದ್ದು, 9 ಮಿಲಿಯನ್ ಕ್ಯೂಬಿಕ್ ಮೀ. ನೀರು ಸಂಗ್ರಹದ ಸಾಮಥ್ರ್ಯ ಹೊಂದಿದೆ. ಆದರೆ ಹೂಳು ತುಂಬಿರುವುದರಿಂದ 4.5 ಮಿಲಿಯ ಕ್ಯೂಬಿಕ್ ಮೀ. ನೀರು ಸಂಗ್ರಹ ಮಾತ್ರ ಸಾಧ್ಯವಾಗಿದೆ. ಈಗಿನ ನೀರಿನ ಸಂಗ್ರಹ 21 ದಿನಗಳಿಗೆ ಮಾತ್ರ ಸಾಕಾಗುವಷ್ಟಿದೆ ಎಂದರು. 7 ಮೀ. ಎತ್ತರದ 350 ಮೀ. ಉದ್ದದ ನೂತನ ವೆಂಟೆಡ್ ಡ್ಯಾಂ ನಿಮರ್ಾಣದ ಬಳಿಕ 14.74 ಕ್ಯೂಬಿಕ್ ಮಿಲಿಯ ಲೀ. ನೀರು ಸಂಗ್ರಹಿಸಬಹುದಾಗಿದೆ. ಈ ಸಂಗ್ರಹ 90 ದಿನಗಳ ಬೇಡಿಕೆಯನ್ನು ಪೂರೈಸಲಿದೆ. ಕಾಮಗಾರಿಯನ್ನು ಇನ್ನಷ್ಟು ವೇಗವಾಗಿ ನಡೆಸುವಂತೆ ಜಲಮಂಡಳಿಯ ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಲಾಗಿದೆ. ಜಲಮಂಡಳಿಯ ಮುಖ್ಯ ಅಭಿಯಂತರರು ಮುಂದಿನ ವಾರ ತುಂಬೆಗೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ ಎಂದು ಆಯುಕ್ತರು ತಿಳಿಸಿದರು.
ಸಮಾರಂಭದಲ್ಲಿ ಮೇಯರ್ ರಜನಿ ದುಗ್ಗಣ್ಣ, ಉಪಮೇಯರ್ ರಾಜೇಂದ್ರ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಾಂತಾ ಆರ್., ಶೆಟ್ಟಿ , ರೂಪಾ ಡಿ.ಬಂಗೇರ, ದಿವಾಕರ್, ಮುಖ್ಯ ಸಚೇತಕ ರಂಗನಾಥ ಕಿಣಿ, ಜಿ.ಪಂ. ಸದಸ್ಯೆ ಮಮತಾ ಗಟ್ಟಿ, ಬಂಟ್ವಾಳ ತಾ.ಪಂ. ಅಧ್ಯಕ್ಷೆ ಶೈಲಜಾ, ಸದಸ್ಯೆ ಸುನೀತಾ ಪೂಜಾರಿ, ತುಂಬೆ ಗ್ರಾ.ಪಂ. ಉಪಾಧ್ಯಕ್ಷ ದಿವಾಕರ ಪಂಬದಬೆಟ್ಟು ಮುಂತಾದವರು ಉಪಸ್ಥಿತರಿದ್ದರು.