ಮಂಗಳೂರು.ಫೆಬ್ರವರಿ,19: ಮಹಿಳೆಯರು ಸಶಕ್ತರಾಗುವುದರಿಂದ ರಾಷ್ಟ್ರಕ್ಕೆ ಲಾಭವಿದೆ. ಅವರು ಉದ್ಯೋಗದಲ್ಲಿ ತೊಡಗಿಸಿ ಕೊಳ್ಳುವುದರಿಂದ ಆರ್ಥಿಕ ಭದ್ರತೆ ಲಭಿಸಿದಂತಾಗುತ್ತದೆ.ಮಹಿಳಾ ಸಬಲೀಕರಣ ಪ್ರಸ್ತುತದ ಅಗತ್ಯವಾಗಿದೆ ಎಂದು ರಾಜ್ಯದ ಬಂದರು,ಮೀನುಗಾರಿಕೆ, ಪರಿಸರ, ಜೀವವಿಜ್ಞಾನ ಹಾಗೂ ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಹೇಳಿದಾರೆ.

ಅವರು ಮಂಗ ಳೂರಿನ ಕಲಾಂ ಗಣ್ ನಲ್ಲಿ ವಾರ್ತಾ ಇಲಾಖೆ ಹಮ್ಮಿ ಕೊಂಡ ಎರಡು ದಿನ ಗಳ `ಮಹಿಳಾ ಸಬಲೀ ಕರಣ' ಕುರಿತ ರಾಜ್ಯ ಮಟ್ಟದ ಕಾರ್ಯಾ ಗಾರ ದಲ್ಲಿ ಸಮಾ ರೋಪ ಭಾಷಣ ಮಾಡಿ ದರು.ಪ್ರಸ್ತುತ ದಿನಗಳಲ್ಲಿ ಮಹಿಳೆಯರಲ್ಲಿ ವಿಶ್ವಾಸ ತುಂಬುವ ಕೆಲಸ ಹೆಚ್ಚೆಚ್ಚು ನಡೆಯುತ್ತಿದೆ.ಸಮಾಜಿಕ ಸಂಘಟನೆಗಳು ಮತ್ತು ಸಂಸ್ಥೆಗಳುಮಹಿಳಾ ಸಬಲೀಕರಣಕ್ಕಾಗಿ ಅನೇಕ ಕಾರ್ಯ ಕ್ರಮಗಳನ್ನು ಹಾಕಿ ಕೊಳ್ಳುತ್ತಿವೆ. ಸರ್ಕಾರವೂ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.

ಇದೇ ಸಂದರ್ಭ ಸಚಿ ವರು ಕಾರ್ಯಾ ಗಾರ ದಲ್ಲಿ ಪಾ ಲ್ಗೊಂಡ ವಿವಿಧ ಜಿಲ್ಲೆ ಗಳ ಪ್ರತಿ ನಿಧಿ ಗಳಿಗೆ ಪ್ರಮಾಣ ಪತ್ರ ಗಳನ್ನು ವಿತರಿ ಸಿದರು.
ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಪುತ್ತೂರು ಪೊಲೀಸ್ ಉಪವಿಭಾಗದ ಸಹಾಯಕ ಪೊಲೀಸ್ ಅಧಿಕ್ಷಕಿ ಡಾ.ರೋಹಿಣಿ ಕಟೋಚಾ

ಅವರು ಮಹಿಳೆ ಯರಿಗೆ ಅಧಿಕಾರ ಯಾರೂ ಕೊಡ ಬೇಕಾ ಗಿಲ್ಲ. ಅದನ್ನು ಪಡೆದು ಕೊಳ್ಳುವ ಸ್ವ ಸಾಮಥ್ರ್ಯ ಅವರಿಗೆ ಇದೆ.ಪ್ರತಿ ಯೊಬ್ಬ ಮಹಿಳೆಯೂ ವಿಶ್ವಾಸ ದಿಂದ ಮುನ್ನಡೆ ದಾಗ ಅದು ಸಾಧ್ಯ ವಾಗು ವುದು ಎಂದರು.ಮಹಿಳೆ ಯರು ಹೆಚ್ಚಿನ ಸಂಖ್ಯೆ ಯಲ್ಲಿ ಪೊಲೀಸ್ ಇಲಾಖೆ ಯಲ್ಲಿ ಸೇವೆ ಸಲ್ಲಿಸಲು ಮುಂದಾ ಗಬೇಕು ಎಂದು ಅವರು ಕರೆ ನೀಡಿದರು.

ಮೈಸೂರು ನಗರಾ ಭಿವೃದ್ಧಿ ಪ್ರಾಧಿ ಕಾರದ ಕಾರ್ಯ ದರ್ಶಿ ವಿದ್ಯಾ ಕುಮಾರಿ,ಶಿಬಿರ ನಿರ್ದೇ ಶಕ ಡಾ.ಡೊಮಿನಿಕ್ ಡಿ,ಮೈಸೂರು ಆಕಾಶ ವಾಣಿ ಕೇಂದ್ರದ ಕಾರ್ಯ ಕ್ರಮ ನಿರ್ವಾಹಕ ಎನ್.ಕೇಶವ ಮೂರ್ತಿ, ದ.ಕ.ಜಿಲ್ಲಾ ವಾರ್ತಾಕಾರಿ ಕೆ.ರೋಹಿಣಿ ಉಪಸ್ಥಿತರಿದ್ದರು. ವಾರ್ತಾ ಇಲಾಖೆಯ ಮೈಸೂರು ವಿಭಾಗದ ಉಪ ನಿರ್ದೇಶಕ ಪ್ರಕಾಶ್ ಸ್ವಾಗತಿಸಿ, ವಂದಿಸಿದರು.