Wednesday, February 2, 2011

ಸ್ಪೋಟಕಗಳ ಬಳಕೆಯಲ್ಲಿ ವೈಜ್ಞಾನಿಕ ತಂತ್ರಜ್ಞಾನ ಕುರಿತು ವಿಚಾರಸಂಕಿರಣ

ಮಂಗಳೂರು,ಫೆಬ್ರವರಿ.02:ಮಂಗಳೂರಿನ ಸುರತ್ಕಲ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಫೆಬ್ರವರಿ 18,19 ರಂದು ಎರಡು ದಿನಗಳ ಕಾಲ ಎಕ್ಸ್ಪೋಸಿವ್ ಅಂಡ್ ಬ್ಲಾಸ್ಟಿಂಗ್ ಟೆಕ್ನಿಕ್ಯೂಸ್ ಫಾರ್ ಮೈನಿಂಗ್,ಸ್ಟಾರಿಯಿಂಗ್ ಅಂಡ್ ಇನ್ ಫ್ರಾಸ್ಟ್ರಕ್ಚರ್ ಇಂಡಸ್ಟ್ರಿ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎನ್ಐಟಿಕೆಯ ಮೈನಿಂಗ್ ಇಂಜಿನಿಯರಿಂಗ್ ವಿಭಾಗದ ಪ್ರೊ.ವಿ.ಆರ್.ಶಾಸ್ತ್ರೀಯವರು ತಿಳಿಸಿದ್ದಾರೆ.ಅವರು ಈ ಸಂಬಂಧ ತಮ್ಮ ಕಾಲೇಜಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.
ಈ ವಿಚಾರ ಸಂಕಿರಣದಲ್ಲಿ ಆಧುನಿಕ ಜಗತ್ತಿನಲ್ಲಿ ಗಣಿ ಉದ್ಯಮಗಳಲ್ಲಿ, ಬಂದರುಗಳಲ್ಲಿ ಆಳ ಹೆಚ್ಚಿಸಲು,ರಸ್ತೆ,ಕಾಲುವೆ ಮುಂತಾದೆಡೆಗಳಲ್ಲಿ ಅಭಿವೃದ್ಧಿ ಪಡಿಸುವಾಗ ಸ್ಪೋಟಕಗಳನ್ನು ಬಳಸುತ್ತಿದ್ದು,ಇದರಿಂದ ಸುತ್ತಲ ಭೂಮಿ ಅದುರುವಿಕೆಯಿಂದ ಹಾಗೂ ಗಡಸು ಬಂಡೆಗಳು ಸಿಡಿಯುವುದರಿಂದ ಮನುಷ್ಯರಿಗೆ ಬಂಡೆಗಳ ತುಂಡು ತಾಗುತ್ತಿದ್ದು ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ಚರ್ಚಿಸಿ ವೈಜ್ಞಾನಿಕವಾಗಿ ಸ್ಪೋಟಕಗಳನ್ನು ಸ್ಪೋಟಿಸುವ ಕುರಿತು ಸಹಕಾರ ತತ್ವದಲ್ಲಿ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಾಗುವುದೆಂದು ಅವರು ತಿಳಿಸಿದರು.ಈ ಸಮ್ಮೇಳನದಲ್ಲಿ ಮೂಡಿಬರಲಿರುವ ನಿರ್ಣಯಗಳನ್ನು ಭಾರತ ಸರ್ಕಾರದ ಗಣಿ ಮಂತ್ರಾಲಯ ಸಂಬಂಧಿಸಿದ ಕಂಪೆನಿಗಳಿಗೆ ಕಳುಹಿಸಲಾಗುವುದೆಂದು ಪ್ರೊ.ಶಾಸ್ತ್ರಿಯವರು ತಿಳಿಸಿದರು.
ದೇಶ ದಲ್ಲಿ ಪ್ರತೀ ವರ್ಷ 2 ಲಕ್ಷ ಟನ್ ಗಳಷ್ಟು ಸ್ಪೋಟಕ ಗಳನ್ನು ಬಳಸ ಲಾಗು ತ್ತಿದೆ. ಜಾರ್ಖಂಡ್ , ದನ್ಬಾದ್ ಮುಂತಾ ದೆಡೆ ಗಳ ಕಲ್ಲಿದ್ದಲು ಗಣಿ ಗಳಲ್ಲಿ ಒಮ್ಮೆ ಒಂದು ಸ್ಪೋಟಕ ಕ್ಕಾಗಿ 1 ಕೋಟಿಗೂ ಹೆಚ್ಚು ವೆಚ್ಚ ವಾಗುತ್ತಿದೆ.ನಮ್ಮ ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಿದ್ಯುತ್ ಕೊರತೆ ನೀಗಿಸಲು ಕಲ್ಲಿದ್ದಲು ಆವಶ್ಯಕವಾಗಿದೆ. ಆದ್ದರಿಂದ ಗಣಿಗಾರಿಕೆಗೆ ಹೆಚ್ಚಿನ ಮಹತ್ವ ಬಂದಿದೆ ಎಂದಪ್ರೊ. ಶಾಸ್ತ್ರಿಯವರು ದೇಶದ ಅಬಿವೃದ್ಧಿಗಾಗಿ ಬಂದರುಗಳ ವಿಸ್ತರಣೆಗಾಗಿ ಸಮುದ್ರದಾಳದಲ್ಲಿರುವ ಬೃಹತ್ ಬಂಡೆಗಳನ್ನು ಬೇಧಿಸಲು ರಾಸಾಯನಿಕ ಸ್ಪೋಟಕಗಳನ್ನು ಬಳಸಲಾಗುತ್ತಿದೆಎಂದರು.
ಈ ವಿಚಾರಸಂಕಿರಣವನ್ನು ಕುದುರೆಮುಖಕಬ್ಬಿಣ ಅದಿರು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾದ ಕೆ.ರಂಗನಾಥನ್,ಭಾರತ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಸ್ಟೀಲ್ ಮಂತ್ರಾಲಯದ ಹಣಕಾಸು ಸಲಹೆಗಾರರಾದ ಮಚ್ಚೇಂದ್ರನಾಥನ್, ಎನ್.ಕೆ.ನಂದ ಮುಂತಾದವರು ಭಾಗವಹಿಸಲಿದ್ದು ದೇಶದ ನಾನಾ ಭಾಗಗಳ 150 ಕ್ಕೂ ಹೆಚ್ಚು ಆಮಂತ್ರಿತರು ಭಾಗವಹಿಸಲಿದ್ದಾರೆಂದರು.