
ಐ ಎಂ ಎ ಕಡೆಯಿಂದ ಸಭೆಯಲ್ಲಿ ಪಾಲ್ಗೊಂಡ ಡಾ. ಮೋಹನ್ ದಾಸ ಭಂಡಾರಿಯವರು ಮಾತನಾಡಿ, ಅಧಿನಿಯಮ ಸಡಿಲಿಕೆಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಯ ಅಧಿನಿಯಮ 2007 ಹಾಗೂ 2009 ಒಂದು ಕಾನೂನಾಗಿದ್ದು, ಅದನ್ನು ಬದಲಾಯಿಸುವ ಅಧಿಕಾರ ಜಿಲ್ಲಾ ನೋಂದಣಿ ಪ್ರಾಧಿಕಾರಕ್ಕೆ ಇರುವುದಿಲ್ಲ. ಹಾಗೂ ಈ ಸಂಬಂಧ ಐ ಎಂ ಎ ಕೊಟ್ಟ ಮನವಿಯನ್ನು ಸರ್ಕಾರಕ್ಕೆ ಮುಂದಿನ ಕ್ರಮಕ್ಕೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಈವರೆಗೆ ಅರ್ಜಿ ಹಾಕದಿರುವ ಹಾಗೂ 24.10.2010 ಅರ್ಜಿ ನೋಂದಾವಣೆಗೆ ಕೊನೆಯ ದಿನಾಂಕವಾಗಿದ್ದು, ಅದರ ನಂತರ ಅರ್ಜಿ ಹಾಕಿದ 95 ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಸೂಚಿಸಿದರು. ಸಭೆಯಲ್ಲಿ ಐ ಎಂ ಎ ಪದಾಧಿಕಾರಿಗಳು, ಸ್ಥಳೀಯ ತಪಾಸಣಾ ತಂಡಗಳ ಮುಖ್ಯಸ್ಥರು ಹಾಗೂ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.