ಇದೀಗ ನಿವೃತ್ತಿಯಾಗಲಿರುವ ಪೊಲೀಸ್ ಶಾಖೆ ಶಾಂತಪ್ಪ ಗೌಡ ,ಆರ್ ಟಿ ಓ ಇಲಾಖೆ ಸಾಧಿಕ್ ಮಹಮ್ಮದ್ ,ಇನ್ಸ್ ಪೆಕ್ಟರ್ ಮಂಜುನಾಥ ಅವರುಗಳನ್ನು ಸನ್ಮಾನಿಸಲಾಯಿತು.
Tuesday, February 1, 2011
ರಸ್ತೆ ಅಪಘಾತಗಳಿಂದ ಪ್ರತೀ ವರ್ಷ 12 ಲಕ್ಷ ಜನರ ಸಾವು :ಪ್ರೊ.ಶಿವಶಂಕರಮೂರ್ತಿ
ಮಂಗಳೂರು ಫೆಬ್ರವರಿ 01:ಪ್ರತೀವರ್ಷ ಭಾರತ ದೇಶದಲ್ಲಿ ವಿವಿಧ ವಾಹನಗಳ ಅಪಘಾತದಿಂದ 12 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ. ನಾವು ಜನರಲ್ಲಿ ವಾಹನ ಚಾಲನೆ ಬಗ್ಗೆ ಅರಿವು ಮೂಡಿಸದಿದ್ದರೆ,ಈ ಸಂಖ್ಯೆ ಇನ್ನೂ ದುಪ್ಪಟ್ಟಾಗಲಿದೆಯೆಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಟಿ.ಸಿ.ಶಿವಶಂಕರಮೂರ್ತಿಯವರು ಎಚ್ಚರಿಸಿದ್ದಾರೆ.
ಅವರು ಸೋಮ ವಾರ ಸಂಜೆ ನಗರದ ಪಾಂಡೇಶ್ವ ರದಲ್ಲಿರುವ ಕಾರ್ಮೆಲ್ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ 22 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2011 ರ ಸಮಾ ರೋಪ ಸಮಾರಂಭ ದ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.ವಿಶ್ವದಲ್ಲಿ ಪ್ರತೀ ವರ್ಷ ವಾಹನ ಅಪಘಾತಗಳಿಂದ ಮೃತರಾಗುವವರ ಸಂಖ್ಯೆ 127 ಲಕ್ಷ.ವಾಗಿರುತ್ತದೆ. 50 ಮಿಲಿಯನ್ ಜನ ಕೈಕಾಲು ಸೇರಿದಂತೆ ಅಪಘಾತಗಳಿಂದ ಅಂಗವಿಹೀನರಾಗುತ್ತಿದ್ದಾರೆ.ಭಾರತ ವಿಶ್ವದಲ್ಲೆ ಅತೀ ಹೆಚ್ಚು ರಸ್ತೆ ಹೊಂದಿರುವ 2 ನೇ ಅತೀ ದೊಡ್ಡ ದೇಶ. ಇದರಿಂದಾಗಿ ನಮ್ಮ ಆರ್ಥಿಕಾಭಿವೃದ್ಧಿಗೆ ಬಹಳ ನೆರವಾಗಿದೆ. ನಮ್ಮ ದೇಶದ ಆರ್ಥಿಕಾಭಿವೃದ್ಧಿ ಶೇಕಡಾ 8.2 ರಷ್ಟು ಆಗಿದೆ. ನಾವು ವಿಜ್ಞಾನ ಹಾಗೂ ತಂತ್ರಜ್ಞಾನಗಳಿಗೆ ಜೊತೆಗೆ ಅಭಿವೃದ್ಧಿಯೂ ಆಗುತ್ತಿರುವುದು ಪ್ರಗತಿಯ ಸಂಕೇತವಾಗಿದೆಯೆಂದು ಕುಲಪತಿಗಳು ನುಡಿದರು.
ನಮ್ಮ ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತ ಗಳಲ್ಲಿ ಶೇ.60 ರಷ್ಟು 19-20 ವರ್ಷ ದೊಳಗಿನ ಯುವಕ ರಿದ್ದಾ ರೆಂದರು.ಸರ್ಕಾರದ ಜೊತೆಗೆ ಪೋಷಕರು ಸಹ ತಮ್ಮ ಮಕ್ಕಳನ್ನು 18 ವರ್ಷಕ್ಕಿಂತ ಮೊದಲು ವಾಹನಚಾಲನೆ ಮಾಡದಂತೆ ತಡೆಯಬೇಕು.ಇದಲ್ಲದೆ ಶಾಲಾ ಮಟ್ಟದಲ್ಲಿ ಮಕ್ಕಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚು ಅರಿವು ಮೂಡಿಸುವುದು ಅತ್ಯಗತ್ಯ ಎಂದು ತಿಳಿಸಿ ನಮ್ಮಲ್ಲಿ ಇಂಜಿನಿಯರಿಂಗ್ ಎಜುಕೇಷನ್ ಹಾಗೂ ಎನ್ ಫೊರ್ಸ್ ಮೆಂಟ್ ಎಂಬ ಮೂರು ಅಂಶಗಳು ಪರಿಣಾಮಕಾರಿಯಾಗಿ ಜಾರಿಗೆ ಬಂದಲ್ಲಿ ರಸ್ತೆ ಸಂಚಾರ ಸುರಕ್ಷಿತವಾಗಲಿದೆ ಎಂದರು.
ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಯವ ರಾದ ರಮೇಶ್ ಅವರು ಮಾತನಾಡಿ ಪೊಲೀಸ ರಾಗಲೀ ಸಾರಿಗೆ ಇಲಾಖೆ ಯವ ರಾಗಲೀ ಅಪಘಾತ ಸಂಭವಿಸಿದಾಗ ತಪ್ಪಿತಸ್ಥರನ್ನು ಶಿಕ್ಷೆಗೊಳ ಪಡಿಸಬಹುದು.ಆದರೆ ತಪ್ಪತಸ್ಥರಲ್ಲಿ ಮಾನವೀಯತೆ ಇಲ್ಲದಾಗ ಜವಾಬ್ದಾರಿ ಇಲ್ಲದಿದ್ದರೆ ಅವನಿಂದ ಸುರಕ್ಷತೆ ಚಾಲನೆ ಊಹಿಸುವುದಾದರೂ ಹೇಗೆ ಸಾಧ್ಯ ಎಂದರು. ಮೋಟಾರು ಬೈಕುಗಳು ಮೋಜಿನ ಸಾಧನಗಳಾಗಬಾರದು.ತಂದೆ ತಾಯಿ ಮಕ್ಕಳಿಗೆ 18 ವರ್ಷಕ್ಕಿಂತ ಮೊದಲು ಗೇರ್ ಸಹಿತ ಗಾಡಿಗಳನ್ನು ಕಡ್ಡಾಯವಾಗಿ ನೀಡಬಾರದು. ಇತ್ತೀಚಿನ ದಿನಗಳಲ್ಲಿ ಶೆ.75 ರಷ್ಟು ಅಪಘಾತಗಳಿಗೆ ಚಾಲನೆ ಮಾಡುವಾಗ ಮೊಬೈಲ್ ನಲ್ಲಿ ಸಂಭಾಷಣೆ ಮಾಡುವುದೇ ಕಾರಣವಾಗಿದೆ. ಆದ್ದರಿಂದ ಮೋಟಾರು ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿ ಎಂದರು.
ಕರ್ನಾಟಕ ಖಾಸಗಿ ಬಸ್ ಮಾಲೀಕರ ಒಕ್ಕೂಟದ ಅಧ್ಯಕ್ಷರಾದ ರಾಜ ವರ್ಮ ಬಲ್ಲಾಳ್ ಅವರು ಈ ಸಂದರ್ಭ ದಲ್ಲಿ ಮಾತ ನಾಡಿದರು.ಸಮಾ ರಂಭದ ಅಧ್ಯಕ್ಷತೆ ಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ವಹಿಸಿದ್ದರು.ಅಪರಾಧ ವಿಭಾಗದ ಡಿಸಿಪಿಯವರಾದ ಮುತ್ತೂರಾಯ, ಎ ಆರ್ ಟಿ ಓ ಅಲ್ಮೇಡಾ ಮುಂತಾದವರು ಉಪಸ್ಥಿ ತರಿದ್ದರು.ಅಪಘಾತ ರಹಿತ ಚಾಲನೆ ಮಾಡಿದ ವಿನ್ಸೆಂಟ್ ಗೋವಿಯಸ್,ಮೋಹನ ಗೌಡ ಮತ್ತು ಟಿ.ಮಂಜುನಾಥ ಇವರನ್ನು ಸನ್ಮಾನಿಸಲಾಯಿತು.ರಸ್ತೆ ಸುರಕ್ಷತೆ ಕುರಿತ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವೈಶಾಲಿ,ಶೃದ್ದಾ ಹಾಗೂ ಅರ್ಜುನ್ ಅವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ರಸ್ತೆ ಸರಕ್ಷತೆಗಾಗಿ ತಮ್ಮ ಸೇವಾವಧಿಯಲ್ಲಿ ಶ್ರಮಿಸಿ
ಇದೀಗ ನಿವೃತ್ತಿಯಾಗಲಿರುವ ಪೊಲೀಸ್ ಶಾಖೆ ಶಾಂತಪ್ಪ ಗೌಡ ,ಆರ್ ಟಿ ಓ ಇಲಾಖೆ ಸಾಧಿಕ್ ಮಹಮ್ಮದ್ ,ಇನ್ಸ್ ಪೆಕ್ಟರ್ ಮಂಜುನಾಥ ಅವರುಗಳನ್ನು ಸನ್ಮಾನಿಸಲಾಯಿತು.
ಇದೀಗ ನಿವೃತ್ತಿಯಾಗಲಿರುವ ಪೊಲೀಸ್ ಶಾಖೆ ಶಾಂತಪ್ಪ ಗೌಡ ,ಆರ್ ಟಿ ಓ ಇಲಾಖೆ ಸಾಧಿಕ್ ಮಹಮ್ಮದ್ ,ಇನ್ಸ್ ಪೆಕ್ಟರ್ ಮಂಜುನಾಥ ಅವರುಗಳನ್ನು ಸನ್ಮಾನಿಸಲಾಯಿತು.