ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ಸರಕಾರಿ ಭೂಮಿ ಒತ್ತುವರಿ ತೆರವುಗೊಳಿಸುವ ಕುರಿತಾದ ಕಂದಾಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕುಮ್ಕಿ ಜಮೀನು ಅಂದರೆ ಅರಣ್ಯ ಅಂಚಿನಲ್ಲಿರುವ ಖಾಸಗಿ ಜಮೀನುಗಳ ಆಸುಪಾಸಿನಲ್ಲಿರುವ ಮರಗಿಡಗಳನ್ನು ಹೊಂದಿರುವ ಸರಕಾರಿ ಜಮೀನಿನಲ್ಲಿ ಯಾವುದೇ ರೀತಿಯ ಖಾಯಂ ಕಟ್ಟಡಗಳನ್ನು ಕಟ್ಟುವುದಾಗಲೀ ಕೃಷಿ ಮಾಡುವುದಾಗಲೀ ನಿಷೇಧಿಸಲಾಗಿದೆ. ಇಲ್ಲಿ ಸಿಗುವ ಮರದ ಎಲೆ ಇತ್ಯಾದಿಗಳನ್ನು ಮಾತ್ರ ಕೃಷಿ ಕಾರ್ಯಕ್ಕೆ ಬಳಸಬೇಕೇ ವಿನಾ ಭೂಮಿಯನ್ನು ಉತ್ತು ಬಿತ್ತು ಬೆಳೆ ತೆಗೆಯಬಾರದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಜಿಲ್ಲೆಯ ಎಲ್ಲಾ ತಹಶೀಲ್ದಾರರು,ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸರಕಾರಿ ಜಮೀನನ್ನು ಒತ್ತುವರಿ ಮಾಡಿರುವವರ ಪಟ್ಟಿಯನ್ನು ತಯಾರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಕಳೆದ 20-25 ವರ್ಷಗಳಿಂದ ಒತ್ತುವರಿ ಸಕ್ರಮವಾಗಿ ನಮೂನೆ 50,53 ರಲ್ಲಿ ಅರ್ಜಿ ಸಲ್ಲಿಸಿರುವವರ ವಿವರವನ್ನು ಮುಂದಿನ ಸಭೆಯೊಳಗೆ ಸಲ್ಲಿಸುವಂತೆ ತಿಳಿಸಿದರು.