Friday, June 4, 2010

ನಾಥಪಂಥ ಕುರಿತ ಸಂಶೋಧನೆ ಅಗತ್ಯ;ಅಮೃತ ಸೋಮೇಶ್ವರ

ಮಂಗಳೂರು,ಜೂ.4:ಸಕಾರಣದಿಂದ,ತಾತ್ವಿಕವಾಗಿ,ಪ್ರತಿಕ್ರಿಯಾತ್ಮಕ ಧೋರಣೆಯೊಂದಿಗೆ ಮೂಡಿಬಂದ ನಾಥಪಂಥದ ಕುರಿತು ಸಮಗ್ರ ಸಂಶೋಧನೆ ಹಾಗೂ ಅಧ್ಯಯನವಾಗಬೇಕಿದೆ ಎಂದು ಹಿರಿಯ ವಿದ್ವಾಂಸರಾದ ಅಮೃತ ಸೋಮೇಶ್ವರ ಹೇಳಿದರು.
ಅವರಿಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ನಾಥಪಂಥ ಜಂಟಿಯಾಗಿ ಆಯೋಜಿಸಿದ್ದ ನಾಥಪಂಥ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾ ಡುತ್ತಿದ್ದರು.ಬೌಧಮತದ ಹೆಚ್ಚಿನ ಮೌಲ್ಯಗಳನ್ನು ಅಳವಡಿಸಿ ಕೊಂಡಿರುವ ನಾಥಪಂಥ ಶೈವ ಧರ್ಮದಿಂದಲೂ ಬಹಳಷ್ಟು ಉತ್ತಮ ಮೌಲ್ಯಗಳನ್ನು ಪಡೆದುಕೊಂಡು ಅಳವಡಿಸಿದೆ. ಕ್ಷೇತ್ರಗಳಲ್ಲಿ ಸೈದ್ಧಾಂತಿಕ, ಸಂಶೋಧನೆಗಳಿಂದ ಐತಿಹಾಸಿಕ ಮಹತ್ಮದ ಅರಿವಾಗಲು ಸಾಧ್ಯ ಎಂದ ಅವರು,ಸಂಶೋಧನೆಯ ಅಗತ್ಯವನ್ನು ಪ್ರತಿಪಾದಿಸಿದರು.ಗೋರಕ್ಷನಾಥದ ನೀಲಕಂಠ ಸ್ವಾಮೀಜಿ ಸಾನಿಧ್ಯ ವಹಿಸಿದರು.ಸಾಗರದ ನಾರಾಯಣ ಶರ್ಮಾ ಮುಖ್ಯ ಅತಿಥಿಗಳಾಗಿದ್ದರು. ಅಕಾಡೆಮಿ ರಿಜಿಸ್ಟ್ರಾರ್ ಮಲ್ಲಿಕಾರ್ಜುನ ಸ್ವಾಮಿ ಸ್ವಾಗತಿಸಿದರು. ಎರಡು ದಿನಗಳ ಕಾಲ ವಿಚಾರ ಸಂಕಿರಣ ನಡೆಯಲಿದೆ.