ಅವರಿಂದು ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಮಹಾ ನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತ ನಾಡುತ್ತಿದ್ದರು. ನಗರಪಾಲಿಕೆ ತನ್ನ ವ್ಯಾಪ್ತಿಯಲ್ಲಿರುವ ಅಧಿಕಾರವನ್ನು ಬಳಸಿಕೊಂಡು ಟ್ರೇಡ್ ಲೈಸನ್ಸ್ ನೀಡಿಕೆ ಬಗ್ಗೆ ಎಚ್ಚರಿಕೆ ವಹಿಸಿದರೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು. ವಾಣಿಜ್ಯ ಕಟ್ಟಡಗಳು ಸೇರಿದಂತೆ ಬೃಹತ್ತ್ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ನಿಗದಿತ ಪ್ರದೇಶದಲ್ಲಿ ಕಟ್ಟಡದ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಫಲಕಗಳನ್ನು ಹಾಕಲು ಸಲಹೆ ಮಾಡಿದ ಸಚಿವರು, ಪಾರ್ಕಿಂಗ್ ಸ್ಥಳ ದುರುಪ ಯೋಗದ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಪಾರ್ಕಿಂಗ್ ಪಾಲಿಸಿ ಕುರಿತು ಬೈ ಲಾ ಮಾಡುವ ಬಗ್ಗೆ ಹೇಳಿದ ಅವರು ನಗರದಲ್ಲಿ ರಸ್ತೆಯನ್ನು ಪಾರ್ಕಿಂಗ್ ಪ್ಲೇಸ್ ಆಗಿ ಪರಿವರ್ತಿ ಸುತ್ತಿರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 112 (ಸಿ) ಕಾನೂನು ಪಾಲಿಕೆಯ ಕರ್ತವ್ಯ ನಿರ್ವಹಣೆಗೆ ಪೂರಕವಾಗಿದ್ದು, ಅದರ ದುರು ಪಯೋಗವಾಗ ಬಾರದೆಂದು ಸ್ಪಷ್ಟ ಪಡಿಸಿದ ಸಚಿವರು, ನಗರ ಪಾಲಿಕೆ ಉತ್ತಮ ಕೆಲಸಗಳಿಂದ ಪ್ರಚಾರ ಪಡೆಯಬೇಕೇ ವಿನ: ಇಂಜಿನಿಯರ್ ಗಳ ಹೊಡೆದಾಟದ ಮೂಲಕ ಅಲ್ಲ ಎಂಬ ಎಚ್ಚರಿಕೆಯನ್ನು ರವಾನಿಸಿದರಲ್ಲದೆ, ವಿಚಾರಣಾ ವರದಿಯನ್ನು 15 ದಿವಸಗಳೊಳಗೆ ನೀಡಬೇಕೆಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಪಾಲಿಕೆಯು ಕೈಗೊಳ್ಳುತ್ತಿರು ಜನಸ್ನೇಹಿ ಯೋಜನೆಗಳ ಬಗ್ಗೆ ಜನರ ಫೀಡ್ ಬ್ಯಾಕ್ ಪಡೆಯಬೇಕೆಂದು ಸಲಹೆ ಮಾಡಿದ ಸಚಿವರು, ಪಾಲಿಕೆಯ ಉತ್ತಮ ಕೆಲಸಗಳಿಗೆ ಅಭಿನಂದನೆ ಸಲ್ಲಿಸಲು ಮರೆಯಲಿಲ್ಲ. ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಸಮವಸ್ತ್ರ, ಪೌರ ಕಾರ್ಮಿಕರಿಗೆ ಗ್ರೂಪ್ ಇನ್ಷೂರೆನ್ಸ್ ಮಾಡಿಸಲು, ಎಲ್ಲ ಉದ್ದಿಮೆದಾರರ ಸಮೀಕ್ಷೆ ನಡೆಸಿ, ತೆರಿಗೆ ಸಂಗ್ರಹಿ ಸಬೇಕೆಂದು ತಾಕೀತು ಮಾಡಿದರು. ನೀರಿನ ತೆರಿಗೆ ಪಾವತಿ ಬಗ್ಗೆ ವನ್ ಟೈಮ್ ಸೆಟಲ್ ಮೆಂಟ್ ಮಾಡ ಬೇಕೆಂದ ಅವರು,ನಗರದಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ನೀಡಿದರು. ಪಾಲಿಕೆಯ ಸದಸ್ಯರಿಗೆ ಗೌರವಧನ ಹೆಚ್ಚಳದ ಮತ್ತು ಪಾಲಿಕೆಗೆ ಅವಶ್ಯವಿರುವ ಸಿಬಂದಿಗಳ ಕೊರತೆಯನ್ನು ನೀಗಿಸುವ ಭರವಸೆಯನ್ನು ಸಭೆಯಲ್ಲಿ ಸಚಿವರು ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಯೋಗೀಶ್ ಭಟ್ ಅವರು ಸಲಹೆ ನೀಡಿ, ನಗರ ಯೋಜನೆ, ರಿಂಗ್ ರೋಡ್ ಹಾಗೂ ಎನ್ ಎಂ ಪಿ ಟಿ ಯಂತಹ ಬೃಹತ್ತ ಉದ್ದಿಮೆಗಳಿಂದ ನಗರದ ಅಭಿವೃದ್ಧಿಗೆ ಕೊಡುಗೆಯನ್ನು ಪಡೆಯಬೇಕೆಂದು ಸಲಹೆ ಮಾಡಿದರು.
ಸಭೆಯಲ್ಲಿ ಪಾಲನಾ ವರದಿ ಮಂಡಿಸಿದ ಪಾಲಿಕೆ ಆಯುಕ್ತ ಡಾ.ವಿಜಯ ಪ್ರಕಾಶ್ ಅವರು, ಮಂಗಳೂರಿನಲ್ಲಿ ವಾಹನ ನಿಲುಗಡೆ ದೊಡ್ಡ ಸಮಸ್ಯೆಯಾಗಿದ್ದು, ಅನಧಿಕೃತ ನಿರ್ಮಾಣ ತಡೆಗೆ ಕ್ರಮ. ನಿಲುಗಡೆಗೆ ಕಾದಿರಿಸಿದ ಸ್ಥಳವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿರುವುದಕ್ಕೆ ಕೆ.ಎಂ.ಸಿ ಕಾಯಿದೆಯನ್ವಯ ಸೂಕ್ತ ಕ್ರಮ; ಮೂಡಾದ ಸಹಯೋಗದೊಂದಿಗೆ ಹಂಪನಕಟ್ಟೆಯಲ್ಲಿ ಮನಾಪಕ್ಕೆ ಸೇರಿದ ಸುಮಾರು 1.55 ಎಕರೆ ಜಾಗದಲ್ಲಿ 500 ಕಾರು ತಂಗುದಾಣಕ್ಕೆ ಅವಕಾಶವಿರುವ ಬಹು ಅಂತಸ್ತು ಕಾರು ತಂಗುದಾಣ ಮತ್ತು ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುವುದಾಗಿ ಮಾಹಿತಿ ನೀಡಿದರು.

ಮೊದಲ ಹಂತದ ಕಾಮಗಾರಿಗಳ ಪೂರ್ಣಗೊ ಳಿಸುವಿಕೆಗೆ ಹಾಗೂ ಪಾದಚಾರಿ ಸ್ನೇಹಿ ಮೂಲಭೂತ ಸೌಕರ್ಯ ಗಳಾದ ಚರಂಡಿ, ಫುಟ್ ಪಾತ್ ನಿರ್ಮಾಣಕ್ಕೆ ಎರಡನೇ ಹಂತದಡಿ ಇನ್ನು 100 ಕೋಟಿ ರೂ. ಅನುದಾನದ ಅಗತ್ಯವನ್ನು ಶಾಸಕರು ಸಭೆ ಯಲ್ಲಿಟ್ಟರು.ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ಅವರು ಸಭೆಯಲ್ಲಿ ನಗರಾಭಿವೃದ್ಧಿಗೆ ಪೂರಕ ಮಾಹಿತಿ ನೀಡಿದರಲ್ಲದೆ, ಯೋಜನೆಗಳನ್ನು ರೂಪಿಸುವಾಗ ಭವಿಷ್ಯವನ್ನು ಗಮನದಲ್ಲಿರಿಸಿ ಹಾಗೂ ಕಾನೂನು ಪಾಲಿಸಿ ಎಂದು ಮಾರ್ಗದರ್ಶನ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಕಾನೂನು ಪಾಲನೆ ಸಂದರ್ಭದಲ್ಲಿ ನಾಗರೀಕರಿಗೆ ಸಮಯವಕಾಶ ಹಾಗೂ ಮಾಹಿತಿ ನೀಡಿ ಎಂದರು. ಜಿಲ್ಲಾಧಿಕಾರಿ ಪೊನ್ನುರಾಜ್ ಅವರು ನಗರಾಭಿವೃದ್ಧಿ ಸಚಿವರಿಗೆ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಪೂರಕ ಮಾಹಿತಿಗಳನ್ನು ನೀಡಿದರು. ಮೇಯರ್ ರಜನಿ ದುಗ್ಗಣ್ಣ, ಉಪಮೇಯರ್ ರಾಜೇಂದ್ರ ಕುಮಾರ್ ಪಾಲಿಕೆ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಬಳಿಕ ಸಚಿವರು ಜ್ಯೋತಿಯಲ್ಲಿ ನಿರ್ಮಿಸಲಾದ ಸುಸ್ಜಜ್ಜಿತ ಬಸ್ ನಿಲ್ದಾಣ ವೀಕ್ಷಿಸಿದರು.